
KGF + ಪುಷ್ಪ! ನೀಲ್ ಕಲ್ಪನೆಯಲ್ಲಿ 'ರಾವಣಂ' ಅವತಾರ! ಇಬ್ಬರೂ ಸೇರಿದ್ರೆ ಆಗುತ್ತಾ ಬ್ಲ್ಯಾಕ್ ಬಸ್ಟರ್?
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್, ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಜೊತೆ 'ರಾವಣಂ' ಸಿನಿಮಾ ಮಾಡುವ ಸಾಧ್ಯತೆ ಇದೆ. ಈ ಸಿನಿಮಾ ಕೆಜಿಎಫ್ ಮಟ್ಟದ ಯಶಸ್ಸು ಕಾಣುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
KGF + ಪುಷ್ಪ! ನೀಲ್ ಕಲ್ಪನೆಯಲ್ಲಿ 'ರಾವಣಂ' ಅವತಾರ! ಇಬ್ಬರೂ ಸೇರಿದ್ರೆ ಆಗುತ್ತಾ ಬ್ಲ್ಯಾಕ್ ಬಸ್ಟರ್?
ಟಾಲಿವುಡ್ ಪುಷ್ಪರಾಜ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮಾಡಿ ಕೆಜಿಎಫ್ ಸಿನಿಮಾಗೆ ಸವಾಲ್ ಹಾಕಿದ್ರು. ನಮ್ ಪುಷ್ಪ ಸಿನಿಮಾ ಕೆಜಿಎಫ್ಗಿಂತಲೂ 10 ಪಟ್ಟು ದೊಡ್ಡ ಸಕ್ಸಸ್ ಆಗುತ್ತೆ ಅಂತ ಆ ಸಿನಿಮಾ ಬಗ್ಗೆ ಟಾಲಿವುಡ್ನ ಕೆಲವರು ಬಾಯ್ ಬಾಯ್ ಬಡ್ಕೊಂಡಿದ್ರು. ಆದ್ರೆ ಎಷ್ಟೇ ಬಾಯ್ ಬಡ್ಕೊಂಡ್ರು ಅದು ನಿಜ ಆಗ್ಲಿಲ್ಲ. ಕೆಜಿಎಫ್ ಸಿನಿಮಾ ಬರೆದ ದಾಖಲೆಗಳನ್ನ ಪುಷ್ಪನಿಂದ ಬ್ರೇಕ್ ಮಾಡೋಕೆ ಆಗ್ಲೇ ಇಲ್ಲ. ಇದೀಗ ಅಲ್ಲು ಅರ್ಜುನ್ ಕೆಜಿಎಫ್ನ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಹಿಂದೆ ಬಿದ್ದು ನನಗೊಂದು ಸಿನಿಮಾ ಮಾಡ್ಕೊಡಿ ಅಂತ ಕೇಳುತ್ತಿದ್ದಾರೆ. ಅದಕ್ಕೆ ವೇಧಿಕೆ ಕೂಡ ಸಿದ್ಧವಾಗಿದೆ. ಟಾಲಿವುಡ್ನಲ್ಲಿ ಈ ಬಗ್ಗೆಯೇ ದೊಡ್ಡ ಚರ್ಚೆ ನಡೆಯುತ್ತಿದೆ.
ಕೆಜಿಎಫ್ ಸಿನಿಮಾ ಬಂದು ವರ್ಷಗಳೆ ಉರುಳಿವೆ. ಆದ್ರೆ ಆ ಸಿನಿಮಾ ಹುಟ್ಟಿಸಿರೋ ಪ್ಯಾನ್ ಇಂಡಿಯಾ ಅನ್ನೋ ಮಾಯೆ ಮಾತ್ರ ಸಿನಿಮಾ ರಂಗದವರ ಮಾತನ್ನೇ ಕೇಳುತ್ತಿಲ್ಲ. ಯಾವ್ದೇ ಸಿನಿಮಾ ಬಂದ್ರು ಕೆಜಿಎಫ್ ಲೆವೆಲ್ಗೆ ಇರುತ್ತಾ ಅಂತ ಸಿನಿಮಾ ಭಕ್ತರು ಕೇಳುತ್ತಾರೆ. ಅಂತಹ ಬ್ಲ್ಯಾಕ್ ಬಸ್ಟರ್ ಹಿಟ್ ಕೊಟ್ಟ ಡೈರೆಕ್ಟರ್ ಪ್ರಶಾಂತ್ ನೀತ್ ತನ್ನ ಬತ್ತಳಿಕೆಯಿಂದ ಬರುತ್ತಿರೋ ಸಿನಿಮಾಗಳನ್ನೆಲ್ಲಾ ಕೆಜಿಎಫ್ ಲೆವೆಲ್ನಲ್ಲೇ ಚಿತ್ರೀಕರಿಸುತ್ತಿದ್ದಾರೆ. ಸಲಾರ್ ಸಿನಿಮಾವನ್ನೂ ಕೆಜಿಎಫ್ ರೀತಿಯೇ ತೋರಿಸಿದ್ರು. ಈಗ ರೆಡಿ ಆಗುತ್ತಿರೋ ಜ್ಯೂ.ಎನ್ಟಿಆರ್ ಸಿನಿಮಾ ಕೂಡ ಅದೇ ತರಾ ಇರುತ್ತೆ ಅನ್ನೋ ನಿರೀಕ್ಷೆ ಇದೆ. ಇದರ ಮಧ್ಯೆ ಯಶ್ರ ಕೆಜಿಎಫ್ ಡೈರೆಕ್ಟರ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಲಾಕ್ ಆಗಿರೋ ಬಗ್ಗೆ ಬಿಸಿ ಬಿಸಿ ಚರ್ಚೆಯೊಂದು ಜೋರಾಗಿ ನಡೆಯುತ್ತಿದೆ..
ಪ್ರಶಾಂತ್ ನೀಲ್ ನನಗೊಂದು ಸಿನಿಮಾ ಮಾಡ್ಲಿ ಅನ್ನೋದು ಸೌತ್ನ ಹಲವು ಸ್ಟಾರ್ ನಟರ ಆಸೆ. ರಾಜಮೌಳಿ ಸಿನಿಮಾದಲ್ಲಿ ನಟಿಸೋಕೆ ಸ್ಟಾರ್ ನಟರು ಹೇಗೆ ಹಾತೊರೆಯುತ್ತಾರೋ ಹಾಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ನಲ್ಲಿ ನಟಿಸಬೇಕು ಅಂತ ಕಾಯುತ್ತಿರೋರು ಹಲವರು. ಅವರಲ್ಲೊಬ್ಬರು ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್. ಈಗ ಅಲ್ಲುಗೆ ಆ ಅದೃಷ್ಟದ ಭಾಗಿಲು ತೆರೆದಂತಿದೆ. ಅಲ್ಲು ಅರ್ಜುನ್ ಜೊತೆ ನೀಲ್ ಸಿನಿಮಾ ಮಾಡುತ್ತಾರಂತೆ. ನೀಲ್ ಕಲ್ಪನೆಯಲ್ಲಿ ಬರೋ ಆ ಸಿನಿಮಾಗೆ ರಾವಣಂ ಎಂದು ಟೈಟಲ್ ಕೂಡ ಇಡಲಾಗಿದೆಯಂತೆ.
ಅಲ್ಲು ಅರ್ಜುನ್ ಸದ್ಯ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಡೈರೆಕ್ಟರ್ ಪ್ರಶಾಂತ್ ನೀಲ್ ಜೂನಿಯರ್ ಎನ್ಟಿಆರ್ ಸಿನಿಮಾ ಶೂಟ್ಗಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿದ್ದಾರೆ. ಈಗ ಪ್ರಶಾಂತ್ ನೀಲ್ ಅಲ್ಲು ಜೊತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ. KGF ಡೈರೆಕ್ಟರ್ - ಪುಷ್ಪ ಆ್ಯಕ್ಟರ್ ಸೇರಿದ್ರೆ ಅಲ್ಲೊಂದು ಬ್ಲ್ಯಾಕ್ ಬಸ್ಟರ್ ಸಿನಿಮಾ ಬರುತ್ತೆ ಅನ್ನೋದ್ರಲ್ಲಿ ನೋ ಡೌಟ್.. ಆದ್ರೆ ಈ ಬಗ್ಗೆ ಅಲ್ಲು ಆಗ್ಲಿ, ನೀಲ್ ಆಗ್ಲಿ ಗುಟ್ಟು ಬಿಟ್ಟಿಲ್ಲ ಅನ್ನೋದು ನಿಮ್ಗೆ ಗೊತ್ತಿರಲಿ..
ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್