
ಜೈಲಿನಲ್ಲಿ ಗಾನ ಕೋಗಿಲೆ: ಕೈದಿಯ ಕಂಠಕ್ಕೆ ಮನಸೋತ ಸಂಗೀತ ಪ್ರಿಯರು
ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆ ಪ್ರತಿಭೆ ಯಾರ ಬಳಿ ಹೇಗಿರುತ್ತೆ ಅನ್ನೋದು ಗೊತ್ತಿರಲ್ಲ. ಎಷ್ಟೋ ಪ್ರತಿಭೆಗಳು ಎಲೆಮರೆ ಕಾಯಿಯಂತೆ ಇರ್ತಾರೆ. ಇದಕ್ಕೆ ಇಲ್ಲಿದೆ ಒಂದು ಬೆಸ್ಟ್ ಎಕ್ಸಾಂಪಲ್.
ಜೈಲು ಪಾಲಾದ ಯುವಕನೊಬ್ಬ ಜೈಲಿನಲ್ಲೇ ಸುಮಧುರ ಗಾಯನದಿಂದ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾನೆ. ಜೈಲಿನಲ್ಲಿರೋ 24 ವರ್ಷದ ಕನ್ನಯ್ಯ ಕುಮಾರ್ ಅನ್ನೋ ಯುವಕ ಭೋಜ್ಪುರಿ ಹಾಡು ಹಾಡಿದ್ದಾನೆ. ಈ ಹಾಡು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕನ್ನಯ್ಯ ಧ್ವನಿ ಕೇಳಿ ಚಿತ್ರರಂಗದ ಕೆಲ ಸಂಗೀತ ಮಾಂತ್ರಿಕರು ಈ ಯುವಕನಿಗೆ ಆಫರ್'ಗಳನ್ನು ಕೊಡುತ್ತಿದ್ದಾರೆ ಅಂತ ವರದಿ ಆಗಿದೆ. ಬಾಲಿವುಡ್ ಗಾಯಕ ಅಂಕಿತ್ ತಿವಾರಿ ಕೂಡ ಈ ಯುವಕನ ವಾಯ್ಸ್'ಗೆ ಫಿದಾ ಆಗಿದ್ದು, ತಮ್ಮ ಮ್ಯೂಸಿಕ್ ಕಂಪನಿಗೆ ಹಾಡಲು ಆಫರ್ ಮಾಡಿದ್ದಾರೆ.