
ಶಿವರಾಜ್ಕುಮಾರ್ ಸಿನಿಕರೀಯರ್ಗೆ 40 ವರ್ಷ; ಯಾರೆಲ್ಲಾ 'ವಿಶ್' ಮಾಡಿದ್ರು ನೋಡಿ..!
ನೂರು ಸಿನಿಮಾಗಳನ್ನ ಮಾಡಿದ ಶಿವಣ್ಣನನ್ನ ಸೆಂಚ್ಯೂರಿ ಸ್ಟಾರ್ ಅಂತ ಕರೆದ್ರು. ಇವರ ಕಲಾಸೇವೆಯನ್ನ ನೋಡಿ ಕರುನಾಡ ಚಕ್ರವರ್ತಿ ಅಂತ ಗೌರವಿಸಿದ್ರು. ಇವತ್ತಿಗೆ ಶಿವರಾಜ್ಕುಮಾರ್ ಕನ್ನಡ ಸಿನಿರಂಗಕ್ಕೆ ಬಂದು 40 ವರ್ಷ ಕಳೆದಿವೆ. ಇವತ್ತಿಗೂ ಅದೇ ಎನರ್ಜಿ, ಅದೇ ಪವರ್, ಅದೇ ಲವಲವಿಕೆ..
ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಸಿನಿ ಬದುಕಿಗೆ 40 ವರ್ಷಗಳು ತುಂಬಿವೆ. 4 ದಶಕ, 130 ಸಿನಿಮಾ.. ಈಗಲೂ ಕೈ ತುಂಬಾ ಚಿತ್ರಗಳು.. ಇದು ಕಡಿಮೆ ಸಾಧನೆ ಏನಲ್ಲ. ಬಹುಶಃ ಮುಂದಿನ ತಲೆಮಾರಿನ ತಾರೆಯರು ಇಂಥದ್ದೊಂದು ಸಾಧನೆ ಮಾಡೋದು ಸಾಧ್ಯವಾ ಗೊತ್ತಿಲ್ಲ. ಅಂತೆಯೇ ಇಂಥದ್ದೊಂದು ಮೈಲಿಗಲ್ಲು ಮುಟ್ಟಿರುವ ಶಿವಣ್ಣನನ್ನ ಎಲ್ಲರೂ ಅಭಿನಂದಿಸ್ತಾ ಇದ್ದಾರೆ. ಅದ್ರಲ್ಲೂ ವಿಶೇಷವಾಗಿ ಕಾಲಿವುಡ್, ಟಾಲಿವುಡ್ನ ದಿಗ್ಗಜರೆಲ್ಲಾ ಶಿವಣ್ಣನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಯೆಸ್ ಹ್ಯಾಟ್ರಿಕ್ ಹೀರೋ , ಸೆಂಚೂರಿ ಸ್ಟಾರ್ ಶಿವರಾಜ್ಕುಮಾರ್ ಬಣ್ಣದ ಬದುಕಿಗೆ ಈಗ 4 ದಶಕಗಳು ತುಂಬಿವೆ. ಶಿವರಾಜ್ಕುಮಾರ್ ನಾಯಕನಾಗಿ ನಟಿಸಿದ ಮೊದಲ ಚಿತ್ರದ ಆನಂದ್ ತೆರೆಗೆ ಬಂದಿದ್ದು 1986ರಲ್ಲಿ. ಶಿವಣ್ಣ ಹಚ್ಚಿದ್ದು 1985ರಲ್ಲಿ. ಅಲ್ಲಿಂದ ಇಲ್ಲಿತನಕ ಬರೊಬ್ಬರಿ 40 ವರ್ಷ ಶಿವಣ್ಣ ಬಣ್ಣದ ನಂಟು ಬಿಟ್ಟಿಲ್ಲ.
ವರನಟ ಡಾ.ರಾಜ್ಕುಮಾರ್ ಹಿರಿಯ ಪುತ್ರನಾಗಿ ಜನಿಸಿದ ಶಿವಣ್ಣ ಮೊದಲು ಕ್ಯಾಮೆರಾ ಎದುರು ನಟಿಸಿದ ಸಿನಿಮಾ 1974ರಲ್ಲಿ ಬಂದ ಶ್ರೀನಿವಾಸ ಕಲ್ಯಾಣ. ಆಗ ಬಾಲನಟನಾಗಿ ನಟಿಸಿದ್ದ ಶಿವಣ್ಣ ಬಳಿಕ ನಾಯಕನಟನಾಗಿ ಇಂಡಸ್ಟ್ರಿಗೆ ಬರಬೇಕು ಅಂದುಕೊಂಡಾಗ ದೊಡ್ಡ ಮಟ್ಟದ ತಯಾರಿ ಮಾಡಿಕೊಂಡಿದ್ರು. ಅಣ್ಣಾವ್ರ ಮಗ ಅನ್ನೋ ನಿರೀಕ್ಷೆಯ ಭಾರವನ್ನ ಶಿವಣ್ಣ ಹೊರಬೇಕಿತ್ತು. ತನ್ನತ್ತ ನೆಟ್ಟಿರೋ ಕೋಟ್ಯಂತರ ಕಣ್ಣುಗಳ ನಿರೀಕ್ಷೆಗಳನ್ನ ತಣಿಸಬೇಕಿತ್ತು. ಅಂತೆಯೇ ಶಿವಣ್ಣ ಚೆನ್ನೈನ ಌಕ್ಟಿಂಗ್ ಸ್ಕೂಲ್ಗೆ ಹೋಗಿ ನಟನೆಯ ಪಟ್ಟುಗಳನ್ನ ಕಲಿತುಕೊಂಡ್ರು. ಹಲವು ನೃತ್ಯ ಪ್ರಕಾರಗಳನ್ನ ಕಲಿತು ಡ್ಯಾನ್ಸ್ನಲ್ಲಿ ಪ್ರಾವೀಣ್ಯ ಪಡೆದಿದ್ರು. ಎಲ್ಲಾ ಪಕ್ಕಾ ತಯಾರಿ ಮಾಡಿಕೊಂಡು ಆನಂದ್ ಸಿನಿಮಾ ಮೂಲಕ ‘ಟುವ್ವಿ ಟುವ್ವಿ’ ಅಂತ ಹಾಡ್ತಾ ಶಿವರಾಜ್ಕುಮಾರ್ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಾಗ ಕನ್ನಡ ಸಿನಿಪ್ರಿಯರು ಶಿಳ್ಳೆ ಹೊಡೆದು ವೆಲ್ ಕಮ್ ಮಾಡಿಕೊಂಡ್ರು.
ಶಿವಣ್ಣನ ನಟನೆ, ನೃತ್ಯ, ಲವಲವಿಕೆಯನ್ನ ನೋಡಿದ ಸಿನಿಪ್ರಿಯರು ತಂದೆಗೆ ತಕ್ಕ ಮಗ ಅಂತ ಕರೆದ್ರು. ನೋಡ್ ನೋಡ್ತಾನೇ 1980ರ ದಶಕದ ಯುವಜನತೆಯ ಫೆವರೀಟ್ ನಟನಾಗಿ ಬೆಳೆದ್ರು ಶಿವಣ್ಣ. ಮೊದಲ ಮೂರು ಸಿನಿಮಾ ನೂರು ದಿನ ಓಡಿದಾಗ ಹ್ಯಾಟ್ರಿಕ್ ಹೀರೋ ಅಂತ ಬಿರುದು ಅಂತ ಕೊಟ್ರು.
ಮೂರು ನೂರಾಯ್ತು.. ನೂರು ಸಿನಿಮಾಗಳನ್ನ ಮಾಡಿದ ಶಿವಣ್ಣನನ್ನ ಸೆಂಚ್ಯೂರಿ ಸ್ಟಾರ್ ಅಂತ ಕರೆದ್ರು. ಇವರ ಕಲಾಸೇವೆಯನ್ನ ನೋಡಿ ಕರುನಾಡ ಚಕ್ರವರ್ತಿ ಅಂತ ಗೌರವಿಸಿದ್ರು. ಇವತ್ತಿಗೆ ಶಿವರಾಜ್ಕುಮಾರ್ ಕನ್ನಡ ಸಿನಿರಂಗಕ್ಕೆ ಬಂದು 40 ವರ್ಷ ಕಳೆದಿವೆ. ಇವತ್ತಿಗೂ ಅದೇ ಎನರ್ಜಿ, ಅದೇ ಪವರ್, ಅದೇ ಲವಲವಿಕೆ.. ಅಂತೆಯೇ ಇವರನ್ನ ಎಲ್ಲರೂ ಚಿರಯುವಕ ಅಂತಾರೆ.
ಸದ್ಯ ಶಿವರಾಜ್ ಕುಮಾರ್ ಅಮೇರಿಕ ಪ್ರವಾಸದಲ್ಲಿದ್ದಾರೆ. ಅಲ್ಲಿ ಶಿವಣ್ಣ ಬಯೋಗ್ರಫಿ ರಿಲೀಸ್ ಆಗಿದೆ. ಇತ್ತ ಅಭಿಮಾನಿಗಳೆಲ್ಲಾ ಶಿವಣ್ಣನಿಗೆ ಅಭಿನಂದನೆ ಹೇಳ್ತಾ ಇದ್ದಾರೆ. ಫ್ಯಾನ್ಸ್ ಅಷ್ಟೇ ಅಲ್ಲ ಸಿನಿಲೋಕದ ದಿಗ್ಗಜರು ಕೂಡ ಶಿವರಾಜ್ಕುಮಾರ್ಗೆ ವಿಶ್ ಮಾಡಿದ್ದಾರೆ.
ಟಾಲಿವುಡ್ನ ಹಿರಿಯ ನಟರಾದ ಚಿರಂಜೀವಿ, ನಾಗಾರ್ಜುನ್.. ಯುವ ನಟರಾದ ನಾನಿ, ವಿಜಯ್ ದೇವರಕೊಂಡ ಶಿವಣ್ಣನಿಗೆ ವಿಡಿಯೋ ಬೈಟ್ ಮೂಲಕ ವಿಶ್ ಮಾಡಿದ್ದಾರೆ. ಇನ್ನೂ ರಜನಿಕಾಂತ್ ನಟನೆಯ ಜೈಲರ್ ಮೂವಿಯಲ್ಲಿ ಶಿವಣ್ಣನನ್ನ ಅದ್ಭುತವಾಗಿ ತೋರಿಸಿದ್ದ ಕಾಲಿವುಡ್ ನಿರ್ದೇಶಕ ನೆಲ್ಸನ್ ಕೂಡ ಶಿವಣ್ಣನಿಗೆ ವಿಶ್ ಮಾಡಿದ್ದಾರೆ.
ಇತ್ತೀಚಿಗೆ ಕಮಲ್ ಹಾಸನ್ ಕಾರಣಕ್ಕೆ ಉಂಟಾದ ವಿವಾದ ಶಿವಣ್ಣನಿಗೆ ಕೊಂಚ ಬೇಸರ ತರಿಸಿತ್ತು. ಅದ್ರಲ್ಲೂ ಕೆಲವರು ಈ ಪ್ರಕರಣದಲ್ಲಿ ಶಿವರಾಜ್ಕುಮಾರ್ ಮೌನ ವಹಿಸಿದ್ದಾರೆ ಅಂತ ಖಾರವಾಗಿ ಪ್ರಶ್ನೆ ಮಾಡಿದ್ರು. ಇದು ಸಹಜವಾಗೇ ಶಿವರಾಜ್ಕುಮಾರ್ಗೆ ಇರಿಸು ಮುರಿಸು ಉಂಟು ಮಾಡಿತ್ತು. ಆದ್ರೆ ಆ ನೋವನ್ನ ಈ 40 ವರ್ಷದ ಸಂಭ್ರಮ ಮರೆಸಿದೆ. ನಗು ಮೂಡಿಸಿದೆ.
ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ..