
ಎರಡನೇ ಹೆಜ್ಜೆಯಿಟ್ಟ ಮಾಲಾಶ್ರೀ ಮಗಳು; ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಕೊಟ್ಟ ಆರಾಧನಾ!
ಕಾಟೇರ ಸಿನಿಮಾದಲ್ಲಿ ದರ್ಶನ್ರಂಥಾ ಜನಪ್ರಿಯ ಸ್ಟಾರ್ ಜೊತೆ ನಟಿಸೋ ಅವಕಾಶ ಪಡೆದ ಆರಾಧನಾ ಮೊದಲ ಹೆಜ್ಜೆಯಲ್ಲೇ ಸೂಪರ್ ಹಿಟ್ ಕೊಟ್ರು. ಕಾಟೇರ ಮೂವಿ ಇಂಡಸ್ಟ್ರಿ ಹಿಟ್ ಆಯ್ತು. ಪಸಂದಾಗವ್ನೆ ಅಂತ ಹಾಡಿ ಕುಣಿದ ಆರಾಧನಾ ನಟನೆಯೂ ಪಸಂದಾಗೇ ಇತ್ತು.
ಕಾಟೇರ ಸಿನಿಮಾ ಮೂಲಕ ಬಣ್ಣದ ದುನಿಯಾಗೆ ಬಂದ ಆರಾಧನಾ (Aradhana) ಅದಾದ್ ಮೇಲೆ ಎಲ್ಲಿ ಕಾಣೆಯಾದ್ರು ಅಂತ ಫ್ಯಾನ್ಸ್ ಹುಡುಕ್ತಾ ಇದ್ರು. ಇದೀಗ ಆರಾಧನಾ ಮತ್ತೊಂದು ಸ್ಟಾರ್ ಸಿನಿಮಾ ಮೂಲಕವೇ ಮತ್ತೆ ಸಿನಿಪ್ರಿಯರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ.
ಮತ್ತೊಂದು ಸ್ಟಾರ್ ಚಿತ್ರಕ್ಕೆ ನಾಯಕಿಯಾದ ಆರಾಧನಾ
ಹೌದು, ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆ ನಾಯಕಿಯಾಗೋ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು ಆರಾಧನಾ. ಕನಸಿನ ರಾಣಿ ಮಾಲಾಶ್ರೀ (Malashri) ಮತ್ತು ಕೋಟಿ ನಿರ್ಮಾಪಕ ರಾಮು ಅವರ ಪುತ್ರಿ ಈಕೆ. ಸೋ ಚಿಕ್ಕಂದಿನಿಂದಲೂ ಸಿನಿರಂಗದ ಒಡನಾಟದೊಂದಿಗೆ ಬೆಳೆದ ಆರಾಧನಾ ನಾಯಕಿಯಾಗ್ತಿನಿ ಅಂದಾಗ ಸಿಕ್ಕಿದ್ದು ಬಿಗ್ ಸ್ಟಾರ್ ಸಿನಿಮಾ.
ಕಾಟೇರ ಸಿನಿಮಾದಲ್ಲಿ ದರ್ಶನ್ರಂಥಾ ಜನಪ್ರಿಯ ಸ್ಟಾರ್ ಜೊತೆ ನಟಿಸೋ ಅವಕಾಶ ಪಡೆದ ಆರಾಧನಾ ಮೊದಲ ಹೆಜ್ಜೆಯಲ್ಲೇ ಸೂಪರ್ ಹಿಟ್ ಕೊಟ್ರು. ಕಾಟೇರ ಮೂವಿ ಇಂಡಸ್ಟ್ರಿ ಹಿಟ್ ಆಯ್ತು. ಪಸಂದಾಗವ್ನೆ ಅಂತ ಹಾಡಿ ಕುಣಿದ ಆರಾಧನಾ ನಟನೆಯೂ ಪಸಂದಾಗೇ ಇತ್ತು.
ಆದ್ರೆ ಇಷ್ಟು ದೊಡ್ಡ ಹಿಟ್ ಸಿನಿಮಾ ಕೊಟ್ಟ ಮೇಲೂ ಆರಾಧನಾ ಸೈಲೆಂಟ್ ಆಗಿದ್ದೇಕೆ..? ಕಾಟೇರ ಬಂದು ಒಂದೂವರೇ ವರ್ಷ ಕಳೆದರೂ ಒಂದೇ ಒಂದು ಸಿನಿಮಾ ಮಾಡಿಲ್ಲವೇಕೆ..? ಈ ಪಸಂದ್ ಚೆಲುವೆಗೆ ಆಫರ್ಸ್ ಬರ್ತಾ ಇಲ್ವಾ..? ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ರು. ಅದಕ್ಕೀಗ ಉತ್ತರ ಸಿಕ್ಕಿದೆ.
ರಿಯಲ್ ಸ್ಟಾರ್ ಉಪ್ಪಿಗೆ (Real Star Upendra) ನಾಯಕಿಯಾದ ಆರಾಧನಾ, ಉಪೇಂದ್ರ ನೆಕ್ಸ್ಟ್ ಲೆವೆಲ್ ಮೂವಿನಲ್ಲಿ ಕಾಟೇರ ಬ್ಯೂಟಿ:
ಯೆಸ್ ಉಪೇಂದ್ರ ನಟನೆಯಲ್ಲಿ ಬರಲಿರೋ ನೆಕ್ಸ್ಟ್ ಲೆವೆಲ್ ಸಿನಿಮಾಗೆ ಆರಾಧನಾ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ತರುಣ್ ಶಿವಪ್ಪ ನಿರ್ಮಾಣ ಮಾಡ್ತಾ ಇರೋ ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಆರಾಧನಾ ನಾಯಕಿಯಾಗಿ ನಟಿಸಲಿದ್ದಾರೆ.
ಅಲ್ಲಿಗೆ ಇಷ್ಟು ದಿನ ಕಾದಿದ್ದಕ್ಕೂ ಆರಾಧನಾಗೆ ಮತ್ತೊಂದು ಸ್ಟಾರ್ ಸಿನಿಮಾನೇ ಸಿಕ್ಕಿದೆ. ಕಾಟೇರ ಬ್ಯೂಟಿ ರಿಯಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದು, ನೆಕ್ಸ್ಟ್ ಲೆವಲ್ ಮೂವಿ ಬಗ್ಗೆ ನೆಕ್ಸ್ಟ್ ಲೆವೆಲ್ ನಿರೀಕ್ಷೆ ಮೂಡ್ತಾ ಇದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...