ಧ್ರುವ ಸರ್ಜಾ 'ಕೆಡಿ' ಚಿತ್ರಕ್ಕೆ ಕಿಚ್ಚ ಸುದೀಪ್; ಈ ಎಂಟ್ರಿ ಹಿಂದಿದ್ಯಾ ಏನೋ ಸೀಕ್ರೆಟ್ ಸ್ಟೋರಿ..?

ಕೆಡಿ ಸಿನಿಮಾ ನಿರ್ಮಾಣ ಮಾಡ್ತಿರೋದು ಕೂಡ ಇದೇ ಕೆವಿಎನ್ ಪ್ರೊಡಕ್ಷನ್ಸ್. ಆಗಲೇ ಪ್ರೇಮ್ ಕೆಡಿನಲ್ಲೂ ಬರುವ ಸ್ಪೆಷಲ್​ ರೋಲ್​ನ ದರ್ಶನ್ ಕೈಲಿ ಮಾಡಿಸೋದು ಅಂತ ಫಿಕ್ಸ್ ಆಗಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಧ್ರುವ ಮತ್ತು ದರ್ಶನ್ ನಡುವಿನ ಸಂಬಂಧ ಮುರಿದುಬಿದ್ದಿತ್ತು.

Share this Video
  • FB
  • Linkdin
  • Whatsapp

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಸ್ಪೆಷಲ್ ರೋಲ್​ವೊಂದನ್ನ ಮಾಡಿರೋ ವಿಷ್ಯ ಈಗಾಗ್ಲೇ ಗೊತ್ತಾಗಿದೆ. ಆದ್ರೆ ಸುದೀಪ್ ಮಾಡಿರೋ ಆ ಪಾತ್ರವನ್ನ ಮೊದಲು ದರ್ಶನ್ ಮಾಡಬೇಕಿತ್ತಾ,.? ದಾಸನ ಜಾಗಕ್ಕೆ ಕಿಚ್ಚ ಬಂದ್ರಾ,.? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಕೆಡಿ ಅಡ್ಡಾಗೆ ಎಂಟ್ರಿ ಕೊಟ್ಟಿದ್ಹೇಗೆ ಕಿಚ್ಚ ಸುದೀಪ್..?
ಯೆಸ್ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ, ಶೋಮ್ಯಾನ್ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಸ್ಪೆಷಲ್ ಅಪೀಯರೆನ್ಸ್ ಇದೆ. ಎರಡು ಭಾಗಗಳ ಅಂಡರ್​ವರ್ಲ್ಡ್ ರೆಟ್ರೋ ಕಥೆ ಹೊಂದಿರುವ ಕೆಡಿ ಸಿನಿಮಾದಲ್ಲಿ ಸುದೀಪ್​ಗೆ ದೊಡ್ಡ ಪಾತ್ರವೇ ಇದೆ. ಆಧ್ರೆ ಮೊದಲ ಭಾಗದಲ್ಲಿ ಕಿಚ್ಚನ ಚಿಕ್ಕ ಅಪೀಯರೆನ್ಸ್ ಮಾತ್ರ ಇರಲಿದೆ. ಪಾರ್ಟ್​​-2ನಲ್ಲಿ ಸುದೀಪ್ ಇಡೀ ಚಿತ್ರದುದ್ದಕ್ಕೂ ಮಿಂಚಿಲಿದ್ದಾರೆ.

ಕೆಡಿ ಪಾರ್ಟ್​​-1 ನಲ್ಲಿನ ಸುದೀಪ್ ಭಾಗದ ಶೂಟಿಂಗ್ ಈಗಾಗ್ಲೇ ಮುಗಿದಿದೆ. ಪ್ರೇಮ್ ಈ ಹಿಂದೆ ಸುದೀಪ್ ಜೊತೆಗೆ ದಿ ವಿಲನ್ ಸಿನಿಮಾ ಮಾಡಿದ್ರು. ವಿಲನ್ ಮೆಚ್ಚಿದ್ದ ಕಿಚ್ಚ ಪ್ರೇಮ್ ಯಾವ ಚಿತ್ರಕ್ಕೆ ಕರೆದರೂ ನಟಿಸ್ತಿನಿ ಅಂದಿದ್ರು. ಧ್ರುವ ಜೊತೆಗೂ ಸುದೀಪ್​ಗೆ ಒಳ್ಳೆ ನಂಟಿದೆ. ಸೋ ಸುದೀಪ್ ಇವರಿಬ್ಬರಿಗಾಗಿ ಕೆಡಿ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ.

ದಾಸ ಮಾಡಬೇಕಿದ್ದ ಪಾತ್ರ ಕಿಚ್ಚನಿಗೆ ಒಲಿಯಿತಾ..?
ಯೆಸ್ ಸದ್ಯ ಸುದೀಪ್ ಮಾಡಿರೋ ಪಾತ್ರವನ್ನ ಈ ಹಿಂದೆ ದರ್ಶನ್ ಮಾಡೋದು ಅಂತ ಫಿಕ್ಸ್ ಆಗಿತ್ತಾ,? ಹೌದು ಅಂತಾರೆ ಹತ್ತಿರದವರು. ಅಸಲಿಗೆ ಪ್ರೇಮ್ ಮತ್ತು ದರ್ಶನ್ ನಡುವಿನ ಸಂಬಂಧ ಹಳಸಿ ಇಬ್ಬರೂ ಹಾವು ಮುಂಗಸಿಯಂತೆ ಆಗಿದ್ರು. ಈ ನಡುವೆ ಕಳೆದ ವರ್ಷ ಫೆಬ್ರುವರಿನಲ್ಲಿ ರಕ್ಷಿತಾ ಇಬ್ಬರಿಗೂ ಕಾಂಪ್ರಮೈಸ್ ಮಾಡ್ಸಿ, ಕೆವಿಎನ್ ಪ್ರೊಡಕ್ಷನ್ಸ್​​ನಲ್ಲಿ ಒಂದು ಸಿನಿಮಾ ಮಾಡ್ಲಿಕ್ಕೆ ಕಮಿಟ್ ಮಾಡಿಸಿದ್ರು.

ಕೆಡಿ ಸಿನಿಮಾ ನಿರ್ಮಾಣ ಮಾಡ್ತಿರೋದು ಕೂಡ ಇದೇ ಕೆವಿಎನ್ ಪ್ರೊಡಕ್ಷನ್ಸ್. ಆಗಲೇ ಪ್ರೇಮ್ ಕೆಡಿನಲ್ಲೂ ಬರುವ ಸ್ಪೆಷಲ್​ ರೋಲ್​ನ ದರ್ಶನ್ ಕೈಲಿ ಮಾಡಿಸೋದು ಅಂತ ಫಿಕ್ಸ್ ಆಗಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಧ್ರುವ ಮತ್ತು ದರ್ಶನ್ ನಡುವಿನ ಸಂಬಂಧ ಮುರಿದುಬಿದ್ದಿತ್ತು. ಖುದ್ದು ಧ್ರುವ , ದರ್ಶನ್​ಗೂ ತನಗೂ ಕೆಲ ಮನಸ್ಥಾಪ ಇವೆ ಅಂತ ಓಪನ್ ಆಗೇ ಹೇಳಿದ್ರು.

ಸೋ ಧ್ರುವ ಅಂಡ್ ದರ್ಶನ್ ಕಾಂಬಿನೇಷನ್​ ಒಂದು ಮಾಡೋಕೆ ಆಗ್ಲಿಲ್ಲ. ಈ ನಡುವೆ ದರ್ಶನ್ ಬೇರೆ ಜೈಲು ಸೇರಿದ್ದರಿಂದ ಕೆಡಿ ನಲ್ಲಿ ದಾಸ ನಟಿಸೋದು ಅಸಾಧ್ಯ ಅನ್ನೋ ಪರಿಸ್ಥಿತಿ ಬಂತು. ಆಗ ಕಿಚ್ಚನನ್ನ ಆ ಜಾಗಕ್ಕೆ ಕರೆತರಲಾಯ್ತು.

ದೀಪಾವಳಿಗೆ ಪ್ಯಾನ್ ಇಂಡಿಯಾ ಕೆಡಿ ಎಂಟ್ರಿ..!
ಈಗಾಗ್ಲೇ ಪ್ಯಾನ್ ಇಂಡಿಯ ಪ್ರೆಸ್ ಮೀಟ್ ಮಾಡಿ ಹವಾ ಸೃಷ್ಟಿಸಿರೋ ಕೆಡಿ ಬಹುತೇಕ ದೀಪಾವಳಿಗೆ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಧ್ರುವ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ಬಹುಭಾಷಾ ತಾರೆಯರ ದಂಡೇ ಇದೆ. ಜೊತೆಗೆ ಕಿಚ್ಚನ ಮಾಸ್ ಆಪೀಯರೆನ್ಸ್ ಬೇರೆ ಇದೆ.

ಕ್ರಿಸ್​ಮಸ್​ಗೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಿಲೀಸ್ ಆಗೋದು ಫಿಕ್ಸ್ ಆಗಿದೆ. ಈಗ ಕೆಡಿ ದೀಪಾವಳಿಗೆ ಬಂದ್ರೆ ಕಿಚ್ಚನ ಫ್ಯಾನ್ಸ್​ಗೆ ಡಬಲ್ ಧಮಾಕಾ. ಮಾರ್ಕ್​​ಗೂ ಮುನ್ನ ಕೆಡಿಯಲ್ಲಿ ಕಿಚ್ಚನ ದರ್ಶನ ಆಗಲಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video