ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?

ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್ ಅವರು ತಮ್ಮ ತಂಗಿಯ ವಿರುದ್ಧವೇ ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮ ತಂಗಿ ಬೆಟ್ಟಿಂಗ್ ಚಟದಿಂದಾಗಿ ಸಾಲದ ಸುಳಿಗೆ ಸಿಲುಕಿದ್ದು, ಇದರಿಂದಾಗಿ ತಮಗೆ ಕೆಲವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. 

Share this Video
  • FB
  • Linkdin
  • Whatsapp

ಆಕೆ ಸ್ಯಾಂಡಲ್‌ವುಡ್​​ ನಟಿ. ಕನ್ನಡದ ಸೂಪರ್​​ ಸ್ಟಾರ್‌ಗಳ ಜೊತೆ ಸ್ಕ್ರೀನ್​​​ ಶೇರ್​​ ಮಾಡಿದವರು. ಆದ್ರೆ ಇವತ್ತು ಇದೇ ನಟಿ ಕಣ್ಣೀರು ಹಾಕುತ್ತಾ ಜನರ ಮುಂದೆ ಕೂತಿದ್ದಾರೆ. ನನಗೆ ಕೆಲವರು ಬ್ಲ್ಯಾಕ್‌ಮೇಲ್​ ಮಾಡ್ತಿದ್ದಾರೆ ಅಂತ ಆರೋಪಿಸಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನೂ ಶಾಕಿಂಗ್​ ಏನ್​ ಗೊತ್ತಾ? ಆಕೆ ತನ್ನ ತಂಗಿ ವಿರುದ್ಧವೇ ದೂರು ನೀಡಿದ್ದಾರೆ. ತಂಗಿ ಮಾಡಿದ ತಪ್ಪಿಗೆ ಇವತ್ತು ನಾನು ಅನುಭವಿಸುತ್ತಿದ್ದೇನೆ ಅಂತ ಗೋಳಾಡುತ್ತಿದ್ದಾರೆ. ಅಷ್ಟಕ್ಕೂ ಏನು ಆ ನಟಿಯ ಕಥೆ? ಯಾರು ಆಕೆಯ ತಂಗಿ? ಆ ತಂಗಿ ಮಾಡಿದ ಮೋಸವಾದ್ರೂ ಏನು? ಒಬ್ಬ ಸಿನಿಮಾ ನಟಿಯ ಕುಟುಂಬದ ಗೋಳಿನ ಕಥೆ ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ಬೆಟ್ಟಿಂಗ್​ ಚಟ ಹತ್ತಿಸಿಕೊಂಡು ಲಕ್ಷ ಲಕ್ಷ ಕಳೆದು ಸಾಲದ ಸುಳಿಗೆ ಸಿಲುಕಿದ್ದು ತಂಗಿ. ಇಲ್ಲಿ ದುಡ್ಡು ಕಳೆದುಕೊಂಡವರು ಆಕೆಯ ಸ್ನೇಹಿತರು. ಆದ್ರೆ ನೋವು ಅನುಭವಿಸುತ್ತಿರೋದು ನಟಿ ಕಾರುಣ್ಯಾ ರಾಮ್​​​. ನಿಜಕ್ಕೂ ಬೆಟ್ಟಿಂಗ್​ ಅನ್ನೋದು ಒಬ್ಬ ಮನುಷ್ಯ ಮತ್ತು ಆತನ ಕುಟುಂಬವನ್ನ ಹೇಗೆ ಹಿಂಡಿಬಿಡುತ್ತೆ ನೋಡಿ. ಅಷ್ಟಕ್ಕೂ ಕಾರುಣ್ಯಾ ರಾಮ್ ತಂಗಿ ಹೇಳೋದೇನು? ಆಕೆ ಎಲ್ಲಿದ್ದಾಳೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Related Video