ಅಪ್ಪುನಂತಹ ತಮ್ಮನನ್ನು ಪಡೆಯಲು ಪುಣ್ಯ ಮಾಡಿದ್ವಿ, ಜೇಮ್ಸ್ ಪ್ರೀ ರಿಲೀಸ್‌ನಲ್ಲಿ ಶಿವಣ್ಣ ಭಾವುಕ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರ ಜೇಮ್ಸ್ ಮಾ. 17 ರಂದು ರಿಲೀಸ್ ಅಗುತ್ತಿದೆ. ಇದರ ಪ್ರೀ ರಿಲೀಸ್ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿಮಾನಿಗಳು ಅಪ್ಪು ಹೆಸರನ್ನು ಮುಗಿಲು ಮುಟ್ಟಿಸಿದರು. ಈ ಕಾರ್ಯಕ್ರಮ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರ ಜೇಮ್ಸ್ ಮಾ. 17 ರಂದು ರಿಲೀಸ್ ಅಗುತ್ತಿದೆ. ಇದರ ಪ್ರೀ ರಿಲೀಸ್ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿಮಾನಿಗಳು ಅಪ್ಪು ಹೆಸರನ್ನು ಮುಗಿಲು ಮುಟ್ಟಿಸಿದರು. ಈ ಕಾರ್ಯಕ್ರಮ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. 'ಅಪ್ಪುವನ್ನು ಹುಡುಕಿಕೊಂಡು ನಾನು ಹೋಗುತ್ತೇನೆ. ನಮ್ಮತ್ರ ಇರೋದಕ್ಕೆ ಆಗಲ್ಲಪ್ಪ' ಎಂದು ರಾಘವೇಂದ್ರ ರಾಜ್‌ಕುಮಾರ್ ಭಾವುಕರಾದರು. 

ಜೇಮ್ಸ್ ತಂಡದವರು ಪುಣ್ಯವಂತರು ರೀ, ನನ್ನ ತಮ್ಮನ ಜೊತೆ 3-4 ತಿಂಗಳು ಕಳೆದ್ರಿ, ನಮಗೆ ಹೊಟ್ಟೆಕಿಚ್ಚಾಗುತ್ತೆ. ಜೇಮ್ಸ್‌ನ್ನು ಕಣ್ತುಂಬಾ ನೋಡಿಕೊಂಡು ಹೋಗ್ತೀನಿ ಎಂದು ಹೇಳುತ್ತಿದ್ದಂತೆ ಶಿವಣ್ಣ, ವೇದಿಕೆಗೆ ಬಂದು ಅಣ್ಣನನ್ನು ತಬ್ಬಿ ಕಣ್ಣೀರು ಹಾಕ್ತಾರೆ. 

Related Video