ಮಾದಕ ಹೆಜ್ಜೆ ಇಟ್ಟು ಮತ್ತೆ ಮತ್ತೇರಿಸಲು ಬಂದ ಗಡಂಗ್ ರಕ್ಕಮ್ಮ! ಜಾಕ್ವಲಿನ್ ಕುಣಿತಕ್ಕೆ ಬಹುಪರಾಕ್!

ಸದ್ಯ ಸೋಷಿಯಲ್ ಮಿಡಿಯಾ ತುಂಬಾ ಈ ಹಾಡಿನದ್ದೇ ಹವಾ. ಟೀ ಸಿರೀಸ್ ನಿರ್ಮಿಸಿರೋ ಹೊಚ್ಚ ಹೊಸ ಆಲ್ಬಂ ಸಾಂಗ್ ಧಂ ಧಂ ಫುಲ್ ಟ್ರೆಂಡ್​​ನಲ್ಲಿದೆ. ಅದ್ರಲ್ಲೂ ಈ ಹಾಡಿನಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಕುಣಿದಿರುವ ರೀತಿ ನೋಡಿವದರು, ರಕ್ಕಮ್ಮನಿಗಿಲ್ಲ ಸರಿಸಾಟಿ ಅಂತಿದ್ದಾರೆ.

Share this Video
  • FB
  • Linkdin
  • Whatsapp

ಗಡಂಗ್ ರಕ್ಕಮ್ಮ ಮತ್ತೆ ಮತ್ತೇರಿಸೋದಕ್ಕೆ ಬಂದಿದ್ದಾಳೆ. ಜಾಕ್ವಲಿನ್ ಫರ್ನಾಂಡಿಸ್ (Jacqueline Fernandez) ಮಸ್ತ್ ಆಗಿ ಕುಣಿದಿರೋ ದಂ ದಂ ಅನ್ನೋ ಹೊಸ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಸೋಷಿಯಲ್ ಮಿಡಿಯಾ ತುಂಬಾ ಧಗ ಧಗ ಕಿಚ್ಚು ಹಚ್ಚಿದೆ. ಈ ಹಾಡಲ್ಲಿ ಜಾಕ್ವಲಿನ್ ಕುಣಿತ ಕಂಡವರು ರಕ್ಕಮ್ಮನಿಗೆ ಸರಿಸಾಟಿಯೇ ಇಲ್ಲ ಅಂತಿದ್ದಾರೆ.

ಯೆಸ್, ಸದ್ಯ ಸೋಷಿಯಲ್ ಮಿಡಿಯಾ ತುಂಬಾ ಈ ಹಾಡಿನದ್ದೇ ಹವಾ. ಟೀ ಸಿರೀಸ್ ನಿರ್ಮಿಸಿರೋ ಹೊಚ್ಚ ಹೊಸ ಆಲ್ಬಂ ಸಾಂಗ್ ಧಂ ಧಂ ಫುಲ್ ಟ್ರೆಂಡ್​​ನಲ್ಲಿದೆ. ಅದ್ರಲ್ಲೂ ಈ ಹಾಡಿನಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಕುಣಿದಿರುವ ರೀತಿ ನೋಡಿವದರು, ರಕ್ಕಮ್ಮನಿಗಿಲ್ಲ ಸರಿಸಾಟಿ ಅಂತಿದ್ದಾರೆ.

ಅಸೀಸ್ ಕೌರ್ ಹಾಡಿರೋ ಈ ಹಾಡಿಗೆ ಬನ್ನಿ ಕಂಪೋಸಿಷನ್ ಇದ್ದು ಟೀ ಸೀರಿಸ್ ಸಂಸ್ಥೆ ಈ ಮ್ಯೂಸಿಕ್ ವಿಡಿಯೋನ ನಿರ್ಮಾಣ ಮಾಡಿದೆ. ಪಿಯುಶ್ & ಸಾಜಿಯಾ ಈ ಹಾಡಿಗೆ ನಿರ್ದೇಶನ ಮಾಡಿದ್ದಾರೆ. ರಿಲೀಸ್ ಆದ ಕೆಲವೇ ಘಂಟೆಗಳಲ್ಲಿ ಈ ಹಾಡು ಲಕ್ಷ ಲಕ್ಷ ವೀವ್ಸ್ ಗಳಿಸ್ತಾ ಇದೆ.

ಈ ಹಾಡನ್ನ ಚಿತ್ರಿಸಿರೋ ಅದ್ದೂರಿ ಸೆಟ್​ಗಳು, ಜಾಕ್ವೆಲಿನ್ ಫರ್ನಾಂಡಿಸ್ ಸೌಂದರ್ಯವನ್ನ ಇಮ್ಮಡಿ ಗೊಳಿಸೋ ಕಾಸ್ಟೂಮ್ಸ್.. ಎಲ್ಲಕ್ಕಿಂತ ಹೆಚ್ಚಾಗಿ ರಕ್ಕಮ್ಮನ ಮೈಮಾಟ, ಆ ಕುಣಿತ ಕಮಾಲ್ ಮಾಡುವಂತಿದೆ. ಗಡಂಗ್ ಹೊಡೆದಷ್ಟೇ ಕಿಕ್ ಕೊಡ್ತಾ ಇದೆ.

ಭರತನಾಟ್ಯ, ಪಾಶ್ಚಿಮಾತ್ಯ ನೃತ್ಯ ಸೇರಿದಂತೆ ಈ ಹಾಡಲ್ಲಿ ಹಲವು ನೃತ್ಯ ಭಂಗಿಗಳಿವೆ. ಎಲ್ಲದರಲ್ಲೂ ಜಾಕ್ವಲಿನ್ ಅಚ್ಚುಕಟ್ಟು. ರಕ್ಕಮ್ಮನ ಭಾವ ಭಂಗಿ, ಮಾದಕ ಮೈಮಾಟ ಹಾಡಿಗೆ ಕಳೆ ತಂದಿದೆ. ಈ ಸಾಂಗ್ ನೋಡಿದವರು ಕುಣಿತದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮೀರಿಸುವವರು ಯಾರೂ ಇಲ್ಲ ಬಿಡ್ರಿ ಅಂತಿದ್ದಾರೆ..!

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…

Related Video