
ಗತವೈಭವ ಸಾಂಗ್ ಮೆಚ್ಚಿದ ಶಿವರಾಜ್‌ಕುಮಾರ್ – ದುಷ್ಯಂತ್-ಆಶಿಕಾ ಜೋಡಿ ಹಾಡಿಗೆ ಶಿವಣ್ಣನಿಂದ ಶ್ಲಾಘನೆ!
ಸಿಂಪಲ್ ಸುನಿ ನಿರ್ದೇಶನದ ಗತವೈಭವ ಸಿನಿಮಾದಲ್ಲಿ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ಗತವೈಭವ ಸಿನಿಮಾದಲ್ಲಿ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಲೀಸ್ ಮುನ್ನ ಬಂದಿರುವ ವೈಭವಯುತ ಸಾಂಗ್‌ಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಸ್ಕೋ ಡಿ ಗಾಮಾ ಸ್ಪೂರ್ತಿಯ ಹಳೆಯ ಬೋಟ್ ಸೆಟ್‌ನಲ್ಲಿ, ಪೋರ್ಚುಗೀಸ್ ನರ್ತಕರೊಂದಿಗೆ ವಿಭಿನ್ನ ರೀತಿಯಲ್ಲಿ ಸಾಂಗ್ ಚಿತ್ರಿತವಾಗಿದೆ. ಹಾಡಿನ ಲಾಂಚ್ ವೇಳೆ ಶಿವಣ್ಣ ನಾಯಕ-ನಾಯಕಿಯರನ್ನು ಹೊಗಳಿ ಸ್ಟೆಪ್ ಹಾಕಿ, ಸಿನಿಮಾಗೆ ಯಶಸ್ಸು ಹಾರೈಸಿದರು.