Asianet Suvarna News Asianet Suvarna News

ಸೆಲೆಬ್ರೆಟಿಗಳ ತಡರಾತ್ರಿ ಪಾರ್ಟಿ: ನಿಯಮ ಮೀರಿ ಸೈಮಾ ಪಾರ್ಟಿ ಮಾಡಿದ್ದಕ್ಕೆ ಬಿತ್ತು ಕೇಸ್!

ಸೈಮಾ ಪ್ರಶಸ್ತಿ ಪ್ರಧಾನದ ಬಳಿಕ ಐಷಾರಾಮಿ ಹೋಟೆಲ್‌ನಲ್ಲಿ ಸೈಮಾ ಪಾರ್ಟಿ ನಡೆದಿತ್ತು. ಇದರಲ್ಲಿ ಕನ್ನಡ, ತೆಲುಗು, ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ರು. ನಿಯಮ ಮೀರಿ ನಸುಕಿನ ಜಾವ 3.30ರವರೆಗೆ ಎಲ್ಲಾ ಸೆಲೆಬ್ರೆಟಿಗಳು ಸೇರಿ ಪಾರ್ಟಿ ಮಾಡಿದ್ದಾರೆ ಅನ್ನೋ ಆರೋಪ ಇದೆ. 

ಈ ಭಾರಿಯ ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಕೆಲವೇ ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದಿತ್ತು. ಮಾತ್ರವಲ್ಲದೇ ಈ ಸೈಮಾ ಪ್ರೋಗ್ರಾಂಗೆ ಇಡೀ ಸೌತ್ ಸಿನಿಮಾ ರಂಗದ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಯಶ್, ಅಲ್ಲು ಅರ್ಜುನ್, ಅಭಿಶೇಕ್ ಅಂಬರೀಶ್, ಪೂಜಾ ಹೆಗ್ಡೆ ಕಮಲ್ ಹಾಸನ್ ಹೀಗೆ ದಕ್ಷಿಣ ಭಾರತದ ಘಟಾನುಘಟಿ ಸ್ಟಾರ್ಸ್ ಈ ಭಾರಿಯ ಸೈಮಾದ ಭಾಗವಾಗಿದ್ರು. ಆದ್ರೆ ಈ ಸೈಮಾ ಪ್ರೋಗ್ರಾಂ ಮುಗಿತಿದ್ದ ಹಾಗೆ ಕಾನೂನಿನ ತೊಡಕು ಎದುರಾಗಿದೆ. ಸೈಮಾ ಪ್ರಶಸ್ತಿ ಪ್ರಧಾನದ ಬಳಿಕ ಐಷಾರಾಮಿ ಹೋಟೆಲ್‌ನಲ್ಲಿ ಸೈಮಾ ಪಾರ್ಟಿ ನಡೆದಿತ್ತು. ಇದರಲ್ಲಿ ಕನ್ನಡ, ತೆಲುಗು, ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ರು. ನಿಯಮ ಮೀರಿ ನಸುಕಿನ ಜಾವ 3.30ರವರೆಗೆ ಎಲ್ಲಾ ಸೆಲೆಬ್ರೆಟಿಗಳು ಸೇರಿ ಪಾರ್ಟಿ ಮಾಡಿದ್ದಾರೆ ಅನ್ನೋ ಆರೋಪ ಇದೆ. ಈ ಸಂಬಂಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೈಮಾ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್, ಅಲ್ಲು ಅರ್ಜುನ್, ರಣ್ವೀರ್ ಸಿಂಗ್  ಭಾಗಿಯಾಗಿದ್ದ ವಿಡಿಯೋ ಇತ್ತೀಷೆಗಷ್ಟೆ ವೈರಲ್ ಆಗಿದ್ದವು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment