ನಟರು ಡ್ರಗ್ಸ್ ತೆಗೆದುಕೊಳ್ಳುವುದನ್ನು ಕಣ್ಣಾರೆ ನೋಡಿದ್ದೇನೆ: ನಟನಿಂದ ಹೊಸ ಬಾಂಬ್ !

ಇಂದ್ರಜಿತ್ ಲಂಕೇಶ್ ಆಯ್ತು, ಈಗ ನಟ ಆದಿ ಲೋಕೇಶ್ ಡ್ರಗ್ಸ್ ಬಾಂಬ್ ಸಿಡಿಸಿದ್ದಾರೆ. 'ಇವತ್ತಿನ ನಟರಲ್ಲಿ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದಾರೆ. ಅವರ ಹೆಸರನ್ನು ಯಾರು ಹೇಳಬೇಕೋ ಅವರೇ ಹೇಳಬೇಕು. ಡ್ರಗ್ಸ್‌ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ನನ್ನ ಗಮನಕ್ಕೂ ಬಂದಿದೆ. ತಮ್ಮ ಕೆಲಸ ಆಗಬೇಕು ಅಂದ್ರೆ ಏನ್ ಬೇಕಾದ್ರೂ ಮಾಡ್ತಾರೆ' ಎಂದು ಆದಿ ಲೋಕೇಶ್ ಹೇಳಿದ್ದಾರೆ. 

First Published Aug 30, 2020, 5:34 PM IST | Last Updated Aug 30, 2020, 5:45 PM IST

ಬೆಂಗಳೂರು (ಆ. 30): ಇಂದ್ರಜಿತ್ ಲಂಕೇಶ್ ಆಯ್ತು, ಈಗ ನಟ ಆದಿ ಲೋಕೇಶ್ ಡ್ರಗ್ಸ್ ಬಾಂಬ್ ಸಿಡಿಸಿದ್ದಾರೆ. 'ಇವತ್ತಿನ ನಟರಲ್ಲಿ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದಾರೆ. ಅವರ ಹೆಸರನ್ನು ಯಾರು ಹೇಳಬೇಕೋ ಅವರೇ ಹೇಳಬೇಕು. ಡ್ರಗ್ಸ್‌ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ನನ್ನ ಗಮನಕ್ಕೂ ಬಂದಿದೆ. ತಮ್ಮ ಕೆಲಸ ಆಗಬೇಕು ಅಂದ್ರೆ ಏನ್ ಬೇಕಾದ್ರೂ ಮಾಡ್ತಾರೆ' ಎಂದು ಆದಿ ಲೋಕೇಶ್ ಹೇಳಿದ್ದಾರೆ.  

ಇಂದ್ರಜಿತ್ ಹೇಳಿಕೆ ಸ್ಯಾಂಡಲ್‌ವುಡ್‌ನಲ್ಲೊಂದು ಕಿಚ್ಚು ಹೊತ್ತಿಸಿತ್ತು. ಅದಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದಾರೆ ನಟ ಆದಿ ಲೋಕೇಶ್. ಇಬ್ಬರೂ ಕೂಡಾ ಇದಮಿತ್ಥಂ ಎಂದು ಯಾರೊಬ್ಬರ ಹೆಸರನ್ನೂ ಹೇಳುತ್ತಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ತೆಗೆದುಕೊಳ್ಳುವವರು ಇದ್ದಾರೆ, ಇದ್ದಾರೆ, ನಮಗೆ ಗೊತ್ತಿದೆ ಎನ್ನುತ್ತಿದ್ದಾರೆಯೇ ವಿನಃ ಸಾಕ್ಷ್ಕ್ಯಗಳನ್ನು ನೀಡುತ್ತಿಲ್ಲ. 

ಚಿರು ಸಾವಿನ ಬಗ್ಗೆ ಇಂದ್ರಜಿತ್ ಪ್ರಶ್ನೆ; ಮೇಘನಾ ರಿಯಾಕ್ಷನ್ ಇದು!