
‘ಒಂದೇ ಒಂದು ಸಲ’ ಹಾಡು-ಪಾಡು; 20 ವರ್ಷಗಳ ಹಿಂದೆ ಹೋದ್ರಾ ನಟ ದರ್ಶನ್?
ಈ ಮೆಲೋಡಿ ನಂಬರ್ ಕೇಳೋದಕ್ಕೆ ಎಷ್ಟು ಸೊಗಸಾಗಿದೆಯೋ ಕಣ್ಣಿಗೂ ಅಷ್ಟೇ ಹಿತವಾಗಿದೆ. ಥೈಲ್ಯಾಂಡ್ನಲ್ಲಿ ಹಾಡನ್ನ ಚಿತ್ರಿಸಿದ್ದು ನಾಯಕಿ ರಚನಾ ರೈ ಸಖತ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.
ದಿ ಡೆವಿಲ್ ಸಿನಿಮಾದ ಮೊದಲ ಸಾಂಗ್ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ದಾಸನ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸಿತ್ತು. ಇದೀಗ ಡೆವಿಲ್ ಎರಡನೇ ಹಾಡು ರಿಲೀಸ್ ಆಗಿದೆ. ದರ್ಶನ್-ರಚನಾ ಕ್ಯೂಟ್ ಕೆಮೆಸ್ಟ್ರಿ ಇರೋ ಈ ರೊಮ್ಯಾಂಟಿಕ್ನ ಸಾಂಗ್ನ ಮೋಡಿ ಹೇಗಿದೆ ನೋಡೋಣ ಬನ್ನಿ.
ದಿ ಡೆವಿಲ್ ಮೂವಿಯ ಎರಡನೇ ಹಾಡು ‘ಒಂದೇ ಒಂದು ಸಲ’ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್, ಪ್ರಮೋದ್ ಮರವಂತೆ ಲಿರಿಕ್ಸ್ ಇರುವ ಈ ಮೆಲೋಡಿ ರೊಮ್ಯಾಂಟಿಕ್ ಸಾಂಗ್ ಕೇಳುಗರಿಗೆ ಮೋಡಿ ಮಾಡುವಂತಿದೆ.
ಈ ಮೆಲೋಡಿ ನಂಬರ್ ಕೇಳೋದಕ್ಕೆ ಎಷ್ಟು ಸೊಗಸಾಗಿದೆಯೋ ಕಣ್ಣಿಗೂ ಅಷ್ಟೇ ಹಿತವಾಗಿದೆ. ಥೈಲ್ಯಾಂಡ್ನಲ್ಲಿ ಹಾಡನ್ನ ಚಿತ್ರಿಸಿದ್ದು ನಾಯಕಿ ರಚನಾ ರೈ ಸಖತ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.
ಈ ಹಾಡಲ್ಲಿ ದರ್ಶನ್ನ ನೋಡ್ತಾ ಇದ್ರೆ 20 ವರ್ಷಗಳ ಹಿಂದಿನ ದರ್ಶನ್ ಲುಕ್ ನೆನಪಾಗುತ್ತೆ. ದರ್ಶನ್ ಕಾಸ್ಟೂಮ್ಸ್ ಕೂಡ ಸಖತ್ ಸ್ಟೈಲಿಶ್ ಆಗಿವೆ. ಇತ್ತೀಚಿಗೆ ದರ್ಶನ್ ಇಂಥಾ ಕೂಲ್ ಲುಕ್ ಕಾಣಿಸಿಕೊಂಡೇ ಇರಲಿಲ್ಲ.
ದಿ ಡೆವಿಲ್ ಮೂವಿಗೆ ಸುಧಾಕರ್ ರಾಜ್ ಸಿನಿಮಾಟೋಗ್ರಫಿ ಇದ್ರೆ, ಪ್ರಕಾಶ್ ವೀರ್ ಚಿತ್ರದ ನಿರ್ದೇಶಕ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಎರಡನೇ ಹಾಡಿನ ಮೂಲಕ ಸದ್ಯ ಸದ್ದು ಮಾಡ್ತಾ ಇದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...