ನಟ ದರ್ಶನ್ ತೂಗುದೀಪ 'ಬೆಡ್' ವಿಚಾರಕ್ಕೆ ಸಿಕ್ಕಾಪಟ್ಟೆ ಸಿಟ್ಟಿಗೆದ್ದ ನಟಿ ಚಿತ್ರಾಲ್ ರಂಗಸ್ವಾಮಿ!

ದರ್ಶನ್​ ಅಂದ್ರೆ ಸ್ಯಾಂಡಲ್​ವುಡ್​ನ ಬಾಕ್ಸಾಫೀಸ್ ಸುಲ್ತಾನ್ ಅಂತ ಹೆಸರು ವಾಸಿ ಆದವ್ರು. ಹಣ ಗೌರವ ಕೈ ಕಾಲಿಗೆ ಆಳು ಕಾಳು ಎಲ್ಲವೂ ದಾಸನ ಕಾಲು ಬುಡದಲ್ವಿದ್ವು. ಆದ್ರೆ ಕೊಲೆ ಕೇಸ್ ದರ್ಶನ್​​ರನ್ನ ಅದೆಲ್ಲದರಿಂದ ದೂರ ಮಾಡಿದೆ. ಅಷ್ಟೆ ಅಲ್ಲ ಗೌರವವೂ ಇಲ್ಲದಂತೆ ಮಾಡಿದೆ.

Share this Video
  • FB
  • Linkdin
  • Whatsapp

ಬೆಡ್​ಬೇಡಿಕೆಗೆ ಮಹಿಳೆಯ ಟಾಂಗ್, ಕೆಟ್ಟ ಸಮಯದಲ್ಲಿ ದರ್ಶನ್‌ಗೆ ಮತ್ತೆ ಬೆನ್ನು ಬಿದ್ದ ಬೆನ್ನು ನೋವು.!
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದಿನಕ್ಕೊಂದು ಚಾಲೆಂಜ್ ಎದುರಾಗುತ್ತಿವೆ. ಒಂದ್ ಕಡೆ ಕೊಲೆ ಕೇಸ್​ನಿಂದ ಬಚಾವ್ ಆಗೋಕೆ ಒದ್ದಾಡುತ್ತಿದ್ರೆ, ಮತ್ತೊಂದ್ ಕಡೆ ಬೆನ್ನು ನೋವು ಮತ್ತೆ ಬೆನ್ನು ಬಿದ್ದಿದೆ. ಬಳ್ಳಾರಿ ಜೈಲಿನಲ್ಲಿದ್ದಾಗ ನೋವು ತಡಿಲಾಗದೆ ಹೇಗೆ ಸೊಂಟ ಹಿಡಿದು ಓಡಾಡುತ್ತಿರೋ ಅದೇ ಪರಿಸ್ತಿತಿ ಈಗ ಮತ್ತೆ ಬಂದಿದೆ.

ಆಗ ದರ್ಶನ್ ಬೆನ್ನು ನೋವು ಅಂತ ಹೇಳಿ ಬೇಲ್​ಪಡೆದಿದ್ರು. ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ರೆ ಸ್ಟ್ರೋಕ್ ಆಗುತ್ತೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಆದ್ರೆ ಜೈಲಿನಿಂದ ಹೊರ ಬಂದ್ಮೇಲೆ ಮತ್ತೆ ಆ್ಯಕ್ಟೀವ್ ದಾಸ ಆಗಿದ್ರು. ಈಗ ಮತ್ತೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಅದೇ ರಾಗ ಎತ್ತಿದ್ದಾರೆ. ದರ್ಶನ್​​​ರ ನೋವು ಕೇಳಿರೋ ವೈಧ್ಯರು ವಾರಕ್ಕೆ 4 ಭಾರಿ ಫಿಸಿಯೋಥೆರೆಪಿ ಮಾಡಿಸೋಕೆ ಹೇಳಿದ್ದಾರೆ. ಆದ್ರೆ ಎರಡು ಭಾರಿ ಫಿಸಿಯೋಥೆರಪಿಗೆ ಅವಕಾಶ ಸಿಕ್ಕಿದೆ.

ದರ್ಶನ್​ ಬೆಡ್​ ಬೇಡಿಕೆಗೆ ಮಹಿಳೆಯ ಟಾಂಗ್; ಬೆಡ್ ವಿಚಾರಕ್ಕೆ ಸಿಟ್ಟಿಗೆದ್ದ ನಟಿ ಚಿತ್ರಲ್ ರಂಗಸ್ವಾಮಿ..!

ದರ್ಶನ್​ ಅಂದ್ರೆ ಸ್ಯಾಂಡಲ್​ವುಡ್​ನ ಬಾಕ್ಸಾಫೀಸ್ ಸುಲ್ತಾನ್ ಅಂತ ಹೆಸರು ವಾಸಿ ಆದವ್ರು. ಹಣ ಗೌರವ ಕೈ ಕಾಲಿಗೆ ಆಳು ಕಾಳು ಎಲ್ಲವೂ ದಾಸನ ಕಾಲು ಬುಡದಲ್ವಿದ್ವು. ಆದ್ರೆ ಕೊಲೆ ಕೇಸ್ ದರ್ಶನ್​​ರನ್ನ ಅದೆಲ್ಲದರಿಂದ ದೂರ ಮಾಡಿದೆ. ಅಷ್ಟೆ ಅಲ್ಲ ಗೌರವವೂ ಇಲ್ಲದಂತೆ ಮಾಡಿದೆ. ದರ್ಶನ್ ಜೈಲಿನಲ್ಲಿ ಬೆಡ್​ ಕೇಳಿದ್ದಕ್ಕೆ ಹೀಗಾಗೆ ವಿದೇಶದಲ್ಲಿರೋ ಮಹಿಳೆ ಒಬ್ರು, 'ಏನು ದರ್ಶನ್‌ಗೆ ಜೈಲಲ್ಲಿ ಬೆಡ್ ಸಿಗ್ತಿಲ್ಲವಾ.? ಆಚೆ ಇರೋವಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರದು ಎಂದು ಯೊಚಿಸಿ ಜೀವನ ಮಾಡಿದ್ದರೆ. ಇವತ್ತು ಜೈಲಲ್ಲಿ ಬೆಡ್ ಗೆ ಪರದಾಡೋ ದಿನ ಬರುತ್ತಿರಲಿಲ್ಲ' ಎಂದು ಅಪಹಾಸ್ಯ ಮಾಡಿದ್ದಾಳೆ.

ಹೀಗೆ ನಟ ದರ್ಶನ್​ರನ್ನ ಅಪಹಾಸ್ಯ ಮಾಡುತ್ತಿರೋದಕ್ಕೆ ಕಿರುತೆರೆ ನಟಿ ಚಿತ್ರಲ್​ ರಂಗಸ್ವಾಮಿ ಸಿಟ್ಟಿಗೆದ್ದಿದ್ದಾರೆ. 'ದರ್ಶನ್ ಸರ್ ಮತ್ತು ಪವಿತ್ರಾ ನಡುವೆ ಇರುವ ಸಂಬಂಧವನ್ನು ಜಡ್ಜ್ ಮಾಡಲು ನಾವ್ಯಾರು..? ಆ ಹುಡುಗಿ ವಿಡಿಯೋ ಮಾಡಿದ್ದಾಳಲ್ಲ. ಆಕೆಯ ವ್ಯೆಯಕ್ತಿಕ ಬದುಕಿನಲ್ಲಿ ಏನೇನಾಗಿದೆ ಎನ್ನುವುದು ನಮಗೇನಾದರೂ ಗೊತ್ತಿದೆಯಾ ಗೊತ್ತಿಲ್ಲ. ಹೀಗಿದ್ದಾಗ ಆ ಹುಡುಗಿಗೆ ಯಾಕೆ ಬೇರೆಯವರ ಚಿಂತೆ. ಬೇರೆಯವರು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಅವರನ್ನು ನೋಡಿ ನಗಲು ಇವರು ಯಾರು'' ಎಂದು ಕೆಂಡ ಕಾರಿದ್ದಾರೆ ಚಿತ್ರಲ್ ರಂಗಸ್ವಾಮಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video