ರಮ್ಯಾ ಬಳಿಕ ದೂರು ದಾಖಲಿಸಿದ ಪ್ರಥಮ್, ಅಸ್ಸಾಂಗೆ ಹೋಗಿ 'ಕಾಮಾಕ್ಯ ದೇವಿ' ದರ್ಶನ ಪಡೆದ ದರ್ಶನ್

ಇಷ್ಟೆಲ್ಲಾ ಹೈಡ್ರಾಮಾ ನಡೀತಿರೋ ಹೊತ್ತಲ್ಲಿ ದರ್ಶನ್ ಅಸ್ಸಾಂನ ಪುರಾತನವಾದ ಶಕ್ತಿಪೀಠ, ಕಾಮಾಕ್ಯ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಕಾಮಕ್ಯ ದೇಗುಲ ಭಾರತದ ದರ್ಶನ್​ ಜೈಲಿನಲ್ಲಿದ್ದಾಗ ವಿಜಯ ಲಕ್ಷ್ಮೀ ದರ್ಶನ್ ಇಲ್ಲಿಗೆ ಪೂಜೆ ಸಲ್ಲಿಸಿದ್ರು. ಇದಾಗಿ ಕೆಲವೇ ದಿನಗಳಲ್ಲಿ ದರ್ಶನ್​ಗೆ ಬೇಲ್ ಸಿಕ್ಕಿತ್ತು.

Share this Video
  • FB
  • Linkdin
  • Whatsapp

ರಮ್ಯಾಗೆ (Ramya) ಅಶ್ಲೀಲ ಮೆಸೇಜ್ ಮಾಡಿದ್ದ ಕೆಡಿ ಫ್ಯಾನ್ಸ್ ವಿರುದ್ದ ಖಾಕಿಬೇಟೆ ಮುಂದುವರೆದಿದೆ. ಸ್ಯಾಂಡಲ್​ವುಡ್​ನ ದೊಡ್ಮನೆ ಸದಸ್ಯರು ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ. ಈ ನಡುವೆ ಪ್ರಥಮ್ ಕೂಡ ಬೆದರಿಕೆ ಹಾಕಿದ ಫ್ಯಾನ್ಸ್ ವಿರುದ್ದ ದೂರು ದಾಖಲಿಸಿದ್ದಾನೆ. ಇಷ್ಟೆಲ್ಲಾ ಡ್ರಾಮಾ ನಡುವೆ ದರ್ಶನ್ ಎಲ್ಲಿದ್ದಾರೆ..? ಏನ್ ಮಾಡ್ತಿದ್ದಾರೆ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಹೌದು, ನಟಿ ರಮ್ಯಾ ತಮ್ಮನ್ನ ಸೋಷಿಯಲ್ ಮಿಡಿಯಾದಲ್ಲಿ ಅಶ್ಲೀಲವಾಗಿ ನಿಂದಿಸಿದ ಫ್ಯಾನ್ಸ್ ವಿರುದ್ದ ಕಮೀಷನರ್​ಗೆ ದೂರು ನೀಡಿದ್ದಾರೆ. ಈ ಕೇಸ್ ನಲ್ಲಿ 43 ಜನರ ಅಕೌಂಟ್​ಗಳ ಮೇಲೆ ಎಫ್.ಐ.ಆರ್ ಆಗಿದೆ. ಈ ಅಕೌಂಟ್​ ಮೂಲಕ ಅಶ್ಲೀಲ ಮೆಸೇಜ್ ಕಳಿಸಿದವರನ್ನ ಹುಡುಕುವ ಕೆಲಸ ಭರದಿಂದ ನಡೀತಾ ಇದೆ. ಇಷ್ಟೆಲ್ಲದರ ನಡುವೆಯೂ ಮತ್ತಷ್ಟು ಕಿಡಿಗೇಡಿಗಳು ರಮ್ಯಾಗೆ ಕೆಟ್ಟದಾಗಿ ಮೆಸೇಜ್ ಮಾಡ್ತಾ ಇದ್ದಾರೆ. ಇದನ್ನೂ ರಮ್ಯಾ ಪೊಲೀಸರ ಗಮನಕ್ಕೆ ತಂದಿದ್ದಾರೆ.

ರಮ್ಯಾ ಕಂಪ್ಲೆಟ್ ದಾಖಲಿಸುವ ಮುನ್ನವೇ ವಿನಯ್ ರಾಜ್​ಕುಮಾರ್ ರಮ್ಯಾ ಪರ ಪೋಸ್ಟ್ ಹಾಕಿದ್ರು. ಡಾ.ಶಿವರಾಜ್​ಕುಮಾರ್ ಮತ್ತು ಗೀತಾ ಶಿವರಾಜ್​ಕುಮಾರ್ ಕೂಡ ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ. ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು ಅಂತ ಶಿವರಾಜ್​ಕುಮಾರ್ ದಂಪತಿ ಪೋಸ್ಟ್ ಮಾಡಿದ್ದಾರೆ. ಯುವರಾಜ್​ಕುಮಾರ್ ಕೂಡ ಇದನ್ನ ಶೇರ್ ಮಾಡಿ ರಮ್ಯಾಗೆ ಸಪೋರ್ಟ್​ಗೆ ನಿಂತಿದ್ದಾರೆ.

ರಮ್ಯಾ ದೂರು ನೀಡಿದ ಬಳಿಕ ಪ್ರಥಮ್ (Olle Huduga Pratham) ಕೂಡ ದರ್ಶನ್ ಅಭಿಮಾನಿಗಳಿಂದ ತನಗೆ ಜೀವಬೆದರಿಕೆ ಇರೋದ್ರ ಬಗ್ಗೆ ದೂರು ಕೊಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ SP ಸಿ.ಕೆ ಬಾವಾ ಅವರನ್ನ ಭೇಟಿ ಮಾಡಿ ಲಿಖಿತ ದೂರು ನೀಡಿದ್ದಾನೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಎಸ್.ಪಿ ಭರವಸೆ ಕೊಟ್ಟಿದ್ದಾರೆ.

ಯೆಸ್ ದರ್ಶನ್​ರ ಅಭಿಮಾನಿ ಸಂಘಗಳು ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡು , ಪ್ರಥಮ್​ಗೆ ಕೆಲವು ಪ್ರಶ್ನೆ ಕೇಳಿವೆ. ನೀನುಯಾವುದೋ ಕಾರ್ಯಕ್ರಮಕ್ಕೆ ಹೋಗಿ, ಅಲ್ಲೇನೋ ಗಲಾಟೆ ನಡೆದು ನಿನಗ್ಯಾರೋ ಬೆದರಿಕೆ ಹಾಕಿದ್ರೆ ಅದಕ್ಕೆ ದರ್ಶನ್ ಹೇಗೆ ಕಾರಣ ಆಗ್ತಾರೆ ಅಂತ ಪ್ರಶ್ನೆ ಮಾಡಿದ್ದಾರೆ.

ಈ ರೀತಿ ಎರಡು ಸಾವಿರಕ್ಕೂ ಹೆಚ್ಚು ಅಕೌಂಟ್​ಗಳಲ್ಲಿ ಪೋಸ್ಟ್ ಹಾಕಲಾಗಿದ್ದು, ಅದನ್ನ ನೋಡಿ ಪ್ರಥಮ್ ಉರಿದು ಬಿದ್ದಿದ್ದಾನೆ. ಇದಕ್ಕೆ ದರ್ಶನ್ನೇ ಕಾರಣ, ಅಂತ ದರ್ಶನ್​ ಮತ್ತವರ ಅಭಿಮಾನಿಗಳನ್ನ ಹಿಗ್ಗಾಮುಗ್ಗಾ ನಿಂದಿಸಿದ್ದಾನೆ.

ಯೆಸ್ ದರ್ಶನ್ ಬಂದು ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಅಲ್ಲೀತನಕ ಎಸ್.ಪಿ ಆಫೀಸ್ ಮುಂದೆ ಆಮರಣಾಂತ ಉಪವಾಸ ಮಾಡ್ತಿನಿ ಅಂದಿದ್ದ, ಪ್ರಥಮ್ ಅಲ್ಲಿ ಪ್ರತಿಭಟನೆಗೆ ಅವಕಾಶ ಸಿಗದ ಹಿನ್ನೆಲೆ ಫಿಲ್ಮ್ ಚೇಂಬರ್ ಎದುರು ಉಪವಾಸಕ್ಕೆ ಕುಳಿತುಕೊಂಡಿದ್ದಾನೆ. ದರ್ಶನ್ ಬರೋತನಕ ನೀರೂ ಕೂಡ ಕುರಿಯ್ವಂತೆ ಈ ನಟಭಯಂಕರ.

ಇಲ್ಲಿ ಇಷ್ಟೆಲ್ಲಾ ಡ್ರಾಮಾ ನಡೀತಾ ಇದ್ರೆ ದರ್ಶನ್ ಎಲ್ಲಿದ್ದಾರೆ..? ಏನ್ ಮಾಡ್ತಾ ಇದ್ದಾರೆ ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಸದ್ಯ ದರ್ಶನ್ ಸುಪ್ರೀಂ ಕೋರ್ಟ್​ನ ಬೇಲ್ ತೀರ್ಪಿನ ಬಗ್ಗೆ ಟೆನ್​ಶನ್​ನಲ್ಲಿದ್ದಾರೆ. ಅದರ ನಡುವೆ ಈ ಅಭಿಮಾನಿಗಳ ಫೈಟ್ ಬಗ್ಗೆ ಅವರು ತಲೆಕೆಡಿಸಿಕೊಂಡಂತಿಲ್ಲ.

ಹೌದು ಬೆಂಗಳೂರಿನಲ್ಲಿ ಇಷ್ಟೆಲ್ಲಾ ಹೈಡ್ರಾಮಾ ನಡೀತಿರೋ ಹೊತ್ತಲ್ಲಿ ದರ್ಶನ್ ಅಸ್ಸಾಂಗೆ ಹೋಗಿ ಕಾಮಾಕ್ಯ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಅಸಲಿಗೆ ಕಾಮಕ್ಯ ದೇಗುಲ ಭಾರತದ ಅತ್ಯಂತ ಪುರಾಣವಾದ ಶಕ್ತಿಪೀಠ ಅಂತ ಕರೆಸಿಕೊಂಡಿದೆ. ದರ್ಶನ್​ ಜೈಲಿನಲ್ಲಿದ್ದಾಗ ವಿಜಯ ಲಕ್ಷ್ಮೀ ದರ್ಶನ್ ಇಲ್ಲಿಗೆ ಪೂಜೆ ಸಲ್ಲಿಸಿದ್ರು. ಇದಾಗಿ ಕೆಲವೇ ದಿನಗಳಲ್ಲಿ ದರ್ಶನ್​ಗೆ ಬೇಲ್ ಸಿಕ್ಕಿತ್ತು.

ಇದೀಗ ದರ್ಶನ್​ಗೆ ಸುಪ್ರೀಂ ಕೋರ್ಟ್​ನಿಂದ ಬೇಲ್ ರದ್ದಾಗುವ ಭೀತಿ ಕಾಡ್ತಾ ಇದೆ. ಈ ಸಮಯದಲ್ಲಿ ಖುದ್ದು ದರ್ಶನ್ ಪತ್ನಿ ಜೊತೆಗೆ ಶಕ್ತಿಪೀಠ ಕಾಮಾಕ್ಯ ದೇಗುಲಕ್ಕೆ ಹೋಗಿ ದರ್ಶನ ಪಡೆದುಕೊಂಡಿದ್ದಾರೆ.

ದರ್ಶನ್ ಬೇಲ್ ಪಡೆದು ಹೊರಬಂದ ಮೇಲೆ ನಾನಾ ದೇಗುಲಗಳಿಗೆ ಭೇಟಿ ಕೊಟ್ಟಿದ್ದಾರೆ. ಕೇರಳದ ಮಾಡಾಯಿಕಾವು ಭಗವತಿ, ಕೊಟ್ಟಿಯೂರು ಶಿವನ ಸನ್ನಿಧಾನದಲ್ಲಿ ಪೂಜೆ ಮಾಡಿಸಿದ್ದಾರೆ. ಮತ್ತೀಗ ಕಾಮಾಕ್ಯದ ಶಕ್ತಿದೇವಿ ಎದುರು ಕಾಪಾಡುವಂತೆ ಮೊರೆಯಿಟ್ಟಿದ್ದಾರೆ.

ಸೋ ತನ್ನದೇ ಸಂಕಟಗಳನ್ನ ಪರಿಹರಿಸಿಕೊಳ್ಳುವ ಒತ್ತಡದಲ್ಲಿರೋ ದರ್ಶನ್, ಅಭಿಮಾನಿಗಳು ಮತ್ತು ಇತರ ಸೆಲೆಬ್ರೀಟಿಗಳ ನಡುವೆ ನಡೀತಾ ಇರೋ ಜಟಾಪಟಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮೊದಲು ತನ್ನ ಬೇಲ್ ವಿಷ್ಯ ಇತ್ಯರ್ಥ ಆಗಲಿ ಮುಂದೆ ನೋಡಿಕೊಳ್ಳೋಣ ಅಂತ ದಾಸ ಯೋಚಿಸಿದಂತಿದೆ. ಆದ್ರೆ ದರ್ಶನ್ ಅಭಿಮಾನಿಗಳ ಹುಚ್ಚಾಟ ನೋಡಿದವರು ಮಾತ್ರ,ದರ್ಶನ್ ಈ ಬಗ್ಗೆ ಮಾತನಾಡಲಿ ಅಂತ ಒತ್ತಾಯಿಸ್ತಾ ಇದ್ದಾರೆ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Related Video