Asianet Suvarna News Asianet Suvarna News

ಚಿರು- ಮೇಘನಾ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ; ಸರ್ಜಾ ಕುಟುಂಬದಲ್ಲಿ ಸಂಭ್ರಮ!

ಚಿರು- ಮೇಘನಾ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಗದಗದಿಂದ ವಿಶೇಷ ತೊಟ್ಟಿಲನ್ನು ತರಿಸಲಾಗಿದೆ. ಗುತ್ತಲ್ ವನಿತಾ ಎಂಬುವವರು ಈ ವಿಶೇಷ ತೊಟ್ಟಿಲನ್ನು ತಯಾರಿಸಿದ್ದಾರೆ. 
 

ಬೆಂಗಳೂರು (ನ. 12): ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಚಿರು- ಮೇಘನಾ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಗದಗದಿಂದ ವಿಶೇಷ ತೊಟ್ಟಿಲನ್ನು ತರಿಸಲಾಗಿದೆ. ಗುತ್ತಲ್ ವನಿತಾ ಎಂಬುವವರು ಈ ವಿಶೇಷ ತೊಟ್ಟಿಲನ್ನು ತಯಾರಿಸಿದ್ದಾರೆ. 

ಚಿರಂಜೀವಿ ಮಗನಿಗೆ ತೊಟ್ಟಿಲು ಶಾಸ್ತ್ರ; ಆರಂಭದಲ್ಲಿ ಬಾವುಕರಾದ ಮೇಘನಾ ರಾಜ್

ಮೊಮ್ಮಗನ ತೊಟ್ಟಿಲು ಶಾಸ್ತ್ರದ ಬಗ್ಗೆ ಅಜ್ಜ ಸುಂದರ್ ರಾಜ್ ಮಾತನಾಡಿದ್ದಾರೆ. 'ಮೇಘನಾ ಗರ್ಭಿಣಿಯಾಗಿದ್ದಾಗಲೇ ವನಿತಾ ಅವರು ತೊಟ್ಟಿಲು ಮಾಡಿಕೊಡುವುದಾಗಿ ಹೇಳಿದ್ದರು. ಅದೇ ರೀತಿ ವಿಶೇಷವಾಗಿ ಹ್ಯಾಂಡ್‌ ಮೇಡ್ ತೊಟ್ಟಿಲು ತಯಾರಿಸಿ ನಮಗೆ ಕೊಟ್ಟಿದ್ದಾರೆ. ಇದು ತವರು ಮನೆಯ ತೊಟ್ಟಿಲು ಶಾಸ್ತ್ರ.  11 ನೇ ದಿನ ಮಾಡಬೇಕಿತ್ತು. ಕಾರಣಾಂತರದಿಂದ ಮಾಡಲಾಗಲಿಲ್ಲ. ಇಂದು ತೊಟ್ಟಿಲು ಶಾಸ್ತ್ರ ಮಾಡಿದ್ದೇವೆ. ಇದು ನಾಮಕರಣವಲ್ಲ. ತೊಟ್ಟಿಲು ಶಾಸ್ತ್ರ' ಎಂದು ಹೇಳಿದರು. 

Video Top Stories