ಸುಮಾರು 6 ತಿಂಗಳ ನಂತರ ಸುಂದರ್ ರಾಜ್‌ ಹಾಗೂ ಸರ್ಜಾ ಕುಟುಂಬದಲ್ಲಿ ಸಂಭ್ರಮದ ವಾತಾವರಣವಿದೆ. ಜೂನಿಯರ್ ಚಿರು ಉರಫ್ ಚಿಂಟು ಇಂದು 21ನೇ ದಿನಕ್ಕೆ ಕಾಲಿಟ್ಟಿದ್ದಾನೆ. ಶಾಸ್ತ್ರ ಸಂಪ್ರದಾಯದ ಪ್ರಕಾರ ನಿವಾಸದಲ್ಲಿ ತೊಟ್ಟಿಲು ಪೂಜೆಯನ್ನು ನೆರವೇರಿಸಲಾಗಿದೆ. 

ಮೇಘನಾ ರಾಜ್‌ ಪುತ್ರನಿಗೆ ವಿಶೇ‍ಷ ಗಿಫ್ಟ್ ತಯಾರಿಸುತ್ತಿರುವ ಅಭಿಮಾನಿ; ಏನದು? 

ಬೆಳಗ್ಗೆ ಆರು ಗಂಟೆಗೆ ಐವರು ಮುತ್ತೈದೆಯರಿಂದ ಮೊದಲು ತೊಟ್ಟಿಲಿಗೆ ಪೂಜೆ ಮಾಡಿಸಲಾಗಿದೆ.  ಆನಂತರ ಗಂಗೆ ಪೂಜೆ ಹಾಗೂ ರುಬ್ಬುವ ಕಲ್ಲನ್ನಿಟ್ಟು ಗುಂಡಮ್ಮನ ಶಾಸ್ತ್ರ ಮಾಡಲಾಗಿದೆ. ಜೂನಿಯರ್‌ನನ್ನು ತೊಟ್ಟಿಲಿಗೆ ಹಾಕಿ ತಾಯಿ ಮೇಘನಾ ಸಂಭ್ರಮಿಸಿದ್ದಾರೆ.

ವಿಶೇಷ ಏನೆಂದರೆ ಗದಗದಿಂದ ಅಭಿಮಾನಿ ವನಿತಾ ಗುತ್ತಲ್ ಎಂಬುವವರು ಮೇಘನಾ ರಾಜ್‌ ಪುತ್ರನಿಗೆ ಮರದ ತೊಟ್ಟಿಲು ಮಾಡಿಸಿಕೊಂಡು ತಂದಿದ್ದಾರೆ. 'ನಾವು ತೊಟ್ಟಿಲು ಗಿಫ್ಟ್ ಕೊಡುವುದಕ್ಕೆ ಕಾರಣವೇ ನಮ್ಮ ಮಕ್ಕಳು. ಕಲಗಟಗಿಯಲ್ಲಿ ತಯಾರಾಗಿರೋ ತೊಟ್ಟಿಲು ಇದು. ಇದರಲ್ಲಿ ಮಹಾಭಾರತ ಹಾಗೂ ರಾಮಾಯಣದ ಚಿತ್ತಾರಗಳಿವೆ,' ಎಂದಿದ್ದಾರೆ ವಕೀಲೆ ವನಿತಾ ಗುತ್ತಲ್. 

ಮೊಮ್ಮಗ ಆಗಮನದ ನಂತರ ಹರಿಕೆ ತೀರಿಸಿದ ಸುಂದರ್ ರಾಜ್! 

ಎಲ್ಲಾ ಶಾಸ್ತ್ರದ ನಂತರ ಸುಂದರ್ ರಾಜ್ ಹಾಗೂ ಮೇಘನಾ ಮಾತನಾಡಿದ್ದಾರೆ. ಆರಂಭದಲ್ಲಿಯೇ ಮೇಘನಾ ತುಂಬಾ ಭಾವುಕರಾಗಿದ್ದರು. ಪೂಜೆಯಲ್ಲಿ ಚಿರು ತಾಯಿ ಅಮ್ಮಾಜಿ ಹಾಗೂ ಅಜ್ಜಿ ಲಕ್ಷ್ಮಿದೇವಿ ಭಾಗಿಯಾಗಿದ್ದರು. ಸುಂದರವಾದ ರಂಗೋಲಿಯಿಂದ ಮನೆ ಬಾಗಿಲನ್ನು ಅಲಂಕರಿಸಲಾಗಿತ್ತು.