Puneeth Rajkumar: ಅಪ್ಪು ಜನ್ಮದಿನಕ್ಕೆ ಸ್ಯಾಂಡಲ್‌ವುಡ್‌ನಿಂದ ಡಬಲ್‌ ಸರ್ಪ್ರೈಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನು ಒಂದುವರೆ ತಿಂಗಳು ಬಾಕಿ ಇದೆ. ಮಾರ್ಚ್ 17ಕ್ಕೆ ಕರುನಾಡ ಕಣ್ಮಣಿ ಅಪ್ಪುಗೆ ಹುಟ್ಟುಹಬ್ಬ. ಈ ಬಾರಿ ಪುನೀತ್ ಜನ್ಮದಿನಕ್ಕೆ ಅಂತ ಕನ್ನಡದಲ್ಲಿ ಎರಡು ಸಿನಿಮಾಗಳು ಬೆಳ್ಳಿತೆರೆ ಮೇಲೆ ಸರ್ಪ್ರೈಸ್ ಎಂಟ್ರಿ ಕೊಡಲಿವೆ. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನು ಒಂದುವರೆ ತಿಂಗಳು ಬಾಕಿ ಇದೆ. ಮಾರ್ಚ್ 17ಕ್ಕೆ ಕರುನಾಡ ಕಣ್ಮಣಿ ಅಪ್ಪುಗೆ ಹುಟ್ಟುಹಬ್ಬ. ಈ ಬಾರಿ ಪುನೀತ್ ಜನ್ಮದಿನಕ್ಕೆ ಅಂತ ಕನ್ನಡದಲ್ಲಿ ಎರಡು ಸಿನಿಮಾಗಳು ಬೆಳ್ಳಿತೆರೆ ಮೇಲೆ ಸರ್ಪ್ರೈಸ್ ಎಂಟ್ರಿ ಕೊಡಲಿವೆ. ಒಂದು ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಆದ್ರೆ ಮತ್ತೊಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾಗಳು ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್ ಆಗ್ತಿವೆ. 

ಗೌಳಿಗೆ ಭಾರಿ ಬೇಡಿಕೆ: ಅದ್ದೂರಿ ಮೇಕಿಂಗ್ ಹಾಗೂ ಟೈಟಲ್‌ ಟೀಸರ್ ಮೂಲಕ ಗಮನ ಸೆಳೆಯುತ್ತಿರೋ ಗೌಳಿ ಸಿನಿಮಾಗೆ ಭಾರಿ ಭೇಡಿಗೆ ಬಂದಿದೆ. ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ‌. ಗೌಳಿ ಸಿನಿಮಾ ನಿರ್ಮಾಪಕ ರಘು ಸಿಂಗಂ ನಿರ್ಮಾಣದಲ್ಲಿ ಗೌಳಿ ಸಿನಿಮಾ ಸಿದ್ಧವಾಗುತ್ತಿದೆ. ಶ್ರೀನಗರ ಕಿಟ್ಟಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇತರೆ ಭಾಷೆಯವರ ಗಮನ ಸೆಳೆದಿದೆ. ಚಿತ್ರದ ನಾಯಕಿ ಪಾವನಾಗೌಡ ಮೊದಲಬಾರಿಗೆ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು, ಯಶ್‌ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹೀಗೆ ದೊಡ್ಡ ಸ್ಟಾರ್ ಕಾಸ್ಟ್ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಇದೆ. ಚಿತ್ರಕ್ಕೆ ಸೂರಾ ಆಕ್ಷನ್ ಕಟ್ ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video