Hijab Row ಸಂಯಮ ಕಾಯ್ದುಕೊಂಡ ಕೇಸರಿ ಪಡೆ, ಪಟ್ಟು ಸಡಿಲಿಸದ ಹಿಜಾಬ್ ಧಾರಿಗಳು
ಮಂಡ್ಯದಲ್ಲಿ ಮೂರನೇ ದಿನವೂ ಕೇಸರಿ ಪಡೆ ಸಂಯಮ ಕಾಯ್ದುಕೊಂಡಿದೆ. ಕಾನೂನಿಗೆ ಗೌರವ ಕೊಟ್ಟ ಕಾಲೇಜಿಲ್ಲ ಸಮವಸ್ತ್ರ ಧಾರಣೆ ಮಾಡಿದ್ದಾರೆ. ಆದ್ರೆ, ಹಿಜಾಬ್ ಧಾರಿಗಳು ಪಟ್ಟು ಸಡಿಲಿಸುತ್ತಿಲ್ಲ.
ಶಿವಮೊಗ್ಗ, (ಫೆ.17): ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದಿದ್ದು, ಒಂದು ಕಡೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ರೆ, ಇತ್ತ ಶಾಲಾ-ಕಾಲೇಜುಗಳಲ್ಲಿ ಹೈಡ್ರಾಮಾಗಳು ನಡೆಯುತ್ತಿವೆ.
Hijab Row ಹಿಜಾಬ್ ತೆಗೆಯಲ್ಲ, ಪರೀಕ್ಷೆ ಬರೆಯಲ್ಲ, ಉಡುಪಿಯಲ್ಲಿ ವಿದ್ಯಾರ್ಥಿಗಳ ಹಠ
ಇನ್ನು ಹಿಜಾಬ್ ವಿರುದ್ಧ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಆದ್ರೆ, ಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸದೇ ಕಾಲೇಜಿಗೆ ಆಗಮಿಸಿದ್ದಾರೆ.
ಹೌದು..ಮಂಡ್ಯದಲ್ಲಿ ಮೂರನೇ ದಿನವೂ ಕೇಸರಿ ಪಡೆ ಸಂಯಮ ಕಾಯ್ದುಕೊಂಡಿದೆ. ಕಾನೂನಿಗೆ ಗೌರವ ಕೊಟ್ಟ ಕಾಲೇಜಿಲ್ಲ ಸಮವಸ್ತ್ರ ಧಾರಣೆ ಮಾಡಿದ್ದಾರೆ. ಆದ್ರೆ, ಹಿಜಾಬ್ ಧಾರಿಗಳು ಪಟ್ಟು ಸಡಿಲಿಸುತ್ತಿಲ್ಲ.