
ಎಕ್ಸಾಂ ಇಲ್ಲದೆ ಪಾಸ್ ಇಲ್ಲ: ಕೊರೋನಾ ಸಮಯದಲ್ಲೇ ನಡೆಯುತ್ತೆ PUC, SSLC ಪರೀಕ್ಷೆ
* ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
* ಏ.16 ರಿಂದ ಮೇ.4 ರವರೆಗೆ ಪರೀಕ್ಷೆ
* ಈ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿಯೇ ಪಾಸಾಗಬೇಕು
ಬೆಂಗಳೂರು(ಜ.24): ಈ ಬಾರಿ ಕೊರೋನಾ ಕಾಲದಲ್ಲೇ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಹೌದು, ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನ ಹೊರಡಿಸಲಾಗಿದೆ. ಅದರಲ್ಲೇ ಅಂತಿಮ ಪರೀಕ್ಷೆ ನಡೆಯಲಿದೆ. ಏ.16 ರಿಂದ ಮೇ.4 ರವರೆಗೆ ಪರೀಕ್ಷೆ ನಡೆಯೋದು ಖಚಿತವಾಗಿದೆ ಅಂತ ಹೇಳಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿ ಪರೀಕ್ಷೆ ಇಲ್ಲದೆ ಪಾಸ್ ಮಾಡೋದಿಲ್ಲ ಅಂತ ತಿಳಿದು ಬಂದಿದೆ. ಈ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿಯೇ ಪಾಸಾಗಬೇಕಿದೆ. ಕಳೆದ ವರ್ಷದಂತೆ ಭಾಷಾ ವಿಷಯದಲ್ಲಿ ಶೇ. 30 ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಕೋರ್ ಮತ್ತು ಐಚ್ಚಿಕ ವಿಷಯದಲ್ಲಿ ಯಾವುದೇ ಪಠ್ಯ ಕಡಿತವಿಲ್ಲ ಅಂತ ಪಿಯು ಬೋರ್ಡ್‌ನ ನಿರ್ದೇಶಕಿ ಸ್ನೇಹಲ್ ಅವರು ಸ್ಪಷ್ಟಪಡಿಸಿದ್ದಾರೆ.
Chikkamagaluru: ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ