Chikkamagaluru: ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ
* ನಿವೃತ್ತ ಯೋಧನಿಗೆ ನಿವೇಶನ ವಿಚಾರದಲ್ಲಿ ವಂಚನೆ
* ಅತ್ತ ಹಣವೂ ಇಲ್ಲ ಇತ್ತ ನಿವೇಶನವೂ ಇಲ್ಲ ಎನ್ನುವ ಪರಿಸ್ಥಿತಿ
* ನಗರಸಭೆ ಜಾಗ ಎಂದು ಕಂದಾಯ ಜಾಗ ಮಾರಿ ವಂಚನೆ
ಚಿಕ್ಕಮಗಳೂರು(ಜ.24): ಚಿಕ್ಕಮಗಳೂರು ಜಿಲ್ಲೆಯ ದಂಟರಮಕ್ಕಿ ನಿವಾಸಿಯಾದ ಪ್ರಸನ್ನ ಎಂಬುವರು ಕಳೆದ ಮೂರು ವರ್ಷದ ಹಿಂದಷ್ಟೇ ಮಿಲಿಟರಿಯಿಂದ ನಿವೃತ್ತಿಯಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ದೇಶ ಸೇವೆಯಲ್ಲಿ ತೊಡಗಿದ್ದ ಸಮಯದಲ್ಲಿ ಹುಟ್ಟೂರಿನಲ್ಲಿ ಮನೆಯೊಂದನ್ನು ಕಟ್ಟುವ ಆಸೆಯಿಂದ ನಿವೇಶನವೊಂದನ್ನು ಖರೀದಿ ಮಾಡಿದ್ದರು. ಅದೇ ನಿವೇಶನ ಇವರ ಬದುಕಿಗೆ ಈಗ ಮುಳ್ಳಾಗಿ ಪರಿಣಮಿಸಿದೆ. 1987ರಲ್ಲಿ ದಂಟರಮಕ್ಕಿ ಹತ್ತಿರ ಸರ್ವೆ ನಂಬರ್ 145ರಲ್ಲಿ ನಿವೇಶನವೊಂದನ್ನು ಖರೀದಿ ಮಾಡಿದ್ದರು, ಇದನ್ನು ಮಾರಾಟ ಮಾಡಿರುವವರು ಪ್ರಸನ್ನ ಅವರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಗರಸಭೆಯ ಅಸೆಸ್ಮೆಂಟ್ ನಂಬರ್ ಹಾಕಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿಯನ್ನು ನೋಂದಣಿ ಮಾಡಿಕೊಡಲಾಗಿದೆ. ಆದರೆ ಮನೆ ಕಟ್ಟಲು ಮುಂದಾದ ಪ್ರಸನ್ನ ಅವರಿಗೆ ನಗರಸಭೆಯಲ್ಲಿ ಖಾತೆ ಇಲ್ಲದಿರುವುದನ್ನು ಖಚಿತವಾದ ಮೇಲೆ ಇವರಿಗೆ ದಿಗ್ಬ್ರಮೆ ಉಂಟಾಗಿದೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಗರಸಭೆಯ ಅಸೆಸ್ಬೆಂಟ್ ನಂಬರನ್ನು ನಮೂದಿಸಿ ಸೈಟನ್ನು ಮಾರಾಟ ಮಾಡಲಾಗಿದೆ. ಅಲ್ಲದೆ ಸರ್ವೆ ನಂಬರ್ 145ರ ಪಹಣಿಯಲ್ಲೂ ಕೂಡ ಇವರ ಹೆಸರು ಬರುವ ಬದಲು ಬೇರೆಯವರ ಹೆಸರು ಬರುತ್ತಿದೆ. ನಗರಸಭೆಯ ಖಾತೆ ಬದಲಾಗಿ ಕಂದಾಯ ಜಾಗವೆಂದು ಖಾತೆಯಲ್ಲಿ ತೋರಿಸುತ್ತಿದೆ. ನಗರಸಭೆಯ ಜಾಗವೆಂದು ಲಕ್ಷಾಂತರ ಹಣ ಖರ್ಚುಮಾಡಿ ಪ್ರಸನ್ನ ಜಾಗವನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಟು ಮಾರಾಟ ಮಾಡಿರುವವರು ಎಲ್ಲಾ ದಾಖಲಾತಿಗಳು ಕೂಡ ಸರಿಯಾಗಿದೆ, ಅದು ಕಂದಾಯ ಜಾಗವೇ ಇದನ್ನು ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳುವ ಜವಾಬ್ದಾರಿ ಅವರದ್ದು ಇದಕ್ಕೆ ನಾನು ಹೊಣೆಯಲ್ಲ ಉತ್ತರವನ್ನು ನೀಡುತ್ತಿದ್ದಾರೆ.
Covid 19 Guidelines: ಜ. 27ಕ್ಕೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ: ಕೋವಿಡ್ ರೂಲ್ಸ್‌ನಿಂದ ಮತ್ತಷ್ಟು ರಿಲೀಫ್?
ದೇಶ ಕಾಯುವ ಯೋಧ ಸೈಟು ಖರೀದಿ ಮಾಡಿ ಕಚೇರಿಗಳನ್ನು ಅಲೆದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೇಶನ ಖರೀದಿ ಮಾಡುವ ವೇಳೆಯಲ್ಲಿ ನಗರಸಭೆ ಜಾಗವೆಂದು ಹೇಳಿ ವಂಚನೆ ಮಾಡಿರುವ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಟ್ಟಾರೆ ಸೈಟು ಖರೀದಿ ಮಾಡಿರುವ ಪ್ರಸನ್ನ ಹಣವೂ ಇಲ್ಲ ,ಸೈಟು ಇಲ್ಲ ಎನ್ನುವ ಸ್ಥಿತಿಯಲ್ಲಿ ದಿನಕಳೆಯುತ್ತಿದ್ದಾರೆ.