Shivamogga : ಶಾಲೆ ಬಿಡುತ್ತೇವೆ ಆದ್ರೆ ಹಿಜಾಬ್‌ ತೆಗೆಯೊಲ್ಲ ಎಂದು ಪರೀಕ್ಷೆ ಬರೆಯದೆ ಹಿಂತಿರುಗಿದ ವಿದ್ಯಾರ್ಥಿನಿಯರು

ಶಿವಮೊಗ್ಗ ಜಿಲ್ಲೆಯಲ್ಲಿ ಹಿಜಾಬ್‌ ಧರಿಸಿ ಶಾಲೆಗೆ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದು, ನಮಗೆ ಧರ್ಮ ಬೇಕು ಶಾಲೆ ಬೇಡವೇ ಬೇಡ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು ಮನೆಗೆ ತೆರಳಿದರು ಎಂದು ತಿಳಿದುಬಂದಿದೆ.

Share this Video
  • FB
  • Linkdin
  • Whatsapp

ಶಿವಮೊಗ್ಗ(ಫೆ.14): ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಹಿಜಾಬ್‌ (Hijab) ಧರಿಸಿ ಶಾಲೆಗೆ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಇಂದು ಇಂಗ್ಲೀಷ್‌ ಮತ್ತು ಸೈನ್ಸ್‌ ಪರೀಕ್ಷೆ ಇತ್ತು. ಹಿಜಾಬ್‌ ಧರಿಸಿದ್ದಕ್ಕೆ ಎಕ್ಸಾಂಗೆ ಅವಕಾಶ ಕೊಟ್ಟಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರು ಎಕ್ಸಾಂಗಿಂತ ಹಿಜಾಬ್‌ ಮುಖ್ಯ ಅಂತ ಹೇಳಿ ಪರೀಕ್ಷೆ ಬರೆಯದೇ ಮನೆಗೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.

Nalanda University Past Glory: ಸಾವಿರ ವರ್ಷಗಳ ನಂತರ ಗತವೈಭವಕ್ಕೆ ಮರಳಿದ ನಳಂದಾ ವಿಶ್ವವಿದ್ಯಾಲಯ

ನಾವು ಹಿಜಾಬ್‌ ಧರಿಸಿಯೇ ಶಾಲೆಗೆ ಹೋಗುತ್ತೇವೆ. ಹೆತ್ತವರು ಹಿಜಾಬ್‌ ತೆಗೆಯಬೇಡಿ ಎಂದಿದ್ದಾರೆ. ಇಷ್ಟು ವರ್ಷ ಹಿಜಾಬ್‌ ತೆಗೆಯಲು ಸೂಚಿಸಿಲ್ಲ. ಆದರೆ ಇಂದು ಹಿಜಾಬ್‌ ತೆಗೆಯಿರಿ ಎಂದರೆ ಹೇಗೆ ತೆಗೆಯಲಿ. ಇಸ್ಲಾಂ ಧರ್ಮದಲ್ಲಿ ಹಿಜಾಬ್‌ ತೆಗೆಯಲು ಅವಕಾಶವಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಶಾಲೆ ಬಿಡುತ್ತೇವೆ ಆದ್ರೆ ಹಿಜಾಬ್‌ ತೆಗೆಯೊಲ್ಲ. ನಮಗೆ ಧರ್ಮ ಬೇಕು ಶಾಲೆ ಬೇಡವೇ ಬೇಡ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು ಮನೆಗೆ ತೆರಳಿದರು ಎಂದು ತಿಳಿದುಬಂದಿದೆ.

Related Video