Hijab Row ಶಿವಮೊಗ್ಗದಲ್ಲಿ ಹೆಚ್ಚಾಗ್ತಿದೆ ಸಮವಸ್ಟ್ರ ಸಂಘರ್ಷ
ಕರ್ನಾಟಕದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದಿದ್ದು, ಒಂದು ಕಡೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ರೆ, ಇತ್ತ ಶಾಲಾ೦ಕಾಲೇಜುಗಳಲ್ಲಿ ಹೈಡ್ರಾಮಾಗಳು ನಡೆಯುತ್ತಿವೆ.
ಶಿವಮೊಗ್ಗ, (ಫೆ.17): ಕರ್ನಾಟಕದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದಿದ್ದು, ಒಂದು ಕಡೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ರೆ, ಇತ್ತ ಶಾಲಾ೦ಕಾಲೇಜುಗಳಲ್ಲಿ ಹೈಡ್ರಾಮಾಗಳು ನಡೆಯುತ್ತಿವೆ.ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ.
Hijab Row Vijayapura: ಹಿಜಾಬ್ ತೆಗೆಯಲು ನಕಾರ: 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ವಾಪಸ್!
ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಬಿಡಲ್ಲ ಅಂತ ಕೆಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಇದೀಗ ಶಿವಮೊಗ್ಗದಲ್ಲಿ ಈ ಹಿಜಾಬ್ ಸಂಘರ್ಷ ಇಂದು (ಗುರುವಾರ) ಸಹ ಮುಂದುವರಿದಿದೆ. ಶಿವಮೊಗ್ಗದ DVS ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡೇ ಬಂದಿದ್ದಾರೆ. ಆದ್ರೆ, ಕಾಲೇಜು ಸಿಬ್ಬಂದಿ ದಯವಿಟ್ಟು ಹಿಜಾಬ್ ತೆಗೆದು ಕ್ಲಾಸ್‌ಗೆ ಬನ್ನಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ವಿದ್ಯಾರ್ಥಿಗಳು ಮಾತ್ರ ಹಿಜಾಬ್ ಹಾಕಿಯೇ ಕ್ಲಾಸ್‌ಗೆ ಬರುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ.