ಆಟೋ ಚಾಲಕರ ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ಖಾಸಗಿ ಶಾಲೆ..!
ಆನ್‌ಲೈನ್ ತರಗತಿಯಿಂದ ವಿದ್ಯಾರ್ಥಿನಿಯನ್ನ ತೆಗೆದು ಹಾಕಿದ ಖಾಸಗಿ ಶಾಲೆ| ಕೆ.ಅರ್.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯಲ್ಲಿ ನಡೆದ ಘಟನೆ| ಕಣ್ಣೀರಲ್ಲಿ ಕೈತೊಳೆಯುತ್ತಿರುವ ವಿದ್ಯಾರ್ಥಿನಿ|
ಬೆಂಗಳೂರು(ಡಿ.22): ಫೀಸ್ ಕಟ್ಟಿಲ್ಲ ಅಂತ ಆನ್‌ಲೈನ್ ತರಗತಿಯಿಂದ ವಿದ್ಯಾರ್ಥಿನಿಯನ್ನ ತೆಗೆದು ಹಾಕಿದ ಘಟನೆ ನಗರದ ಕೆ.ಅರ್.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯಲ್ಲಿ ನಡೆದಿದೆ. ಆನ್‌ಲೈನ್ ಬೇಡ ಕೇವಲ ಪುಸ್ತಕಗಳನ್ನಾದ್ರೂ ನೀಡಿ ಎಂದು ಎಂದು ವಿದ್ಯಾರ್ಥಿನಿಯ ತಂದೆ ಅಂಗಲಾಚಿ ಬೇಡಿಕೊಂಡರೂ ಕೂಡ ಶಾಲಾ ಆಡಳಿತ ಮಂಡಳಿ ಡೋಂಟ್ ಕೇರ್ ಅನ್ನುತ್ತಿದೆ.
ಹೈಸ್ಪೀಡ್ ಕೊರೋನಾಗೆ ಮತ್ತೆ ಜಗತ್ತು ಗಢಗಢ: ಜನರ ಪ್ರಾಣ ಹಿಂಡುತ್ತಿದೆ ಹೊಸ ವೈರಸ್
ಹೀಗಾಗಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರು ಪ್ರರ್ಥನಾ ಎಂಬ ವಿದ್ಯಾರ್ಥಿನಿ ಕಣ್ಣೀರಲ್ಲಿ ಕೈತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಆದೇಶಕ್ಕೆ ಕೆಲ ಖಾಸಗಿ ಶಾಲೆಗಳು ಕಿಮ್ಮತ್ತು ನೀಡುತ್ತಿಲ್ಲ.