ಕಡಬ ಸರಕಾರಿ ಶಾಲೆಯ ತರಗತಿಯಲ್ಲಿ ನಮಾಜ್ , ಶಿಕ್ಷಣಾಧಿಕಾರಿ ಭೇಟಿ ಬಳಿಕ ಸೌಹಾರ್ದಯುತವಾಗಿ ಬಗೆ ಹರಿದ ಸಮಸ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯ ಮಕ್ಕಳು ನಮಾಜ್ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತುರ್ತು ಸಭೆ ಬಳಿಕ ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆ ಹರಿದಿದೆ ಎಂದು ಬಿಇಒ ಹೇಳಿದ್ದಾರೆ.

First Published Feb 12, 2022, 7:55 PM IST | Last Updated Feb 12, 2022, 8:22 PM IST

ಕಡಬ(ಫೆ.12): ದಕ್ಷಿಣ ಕನ್ನಡ ಜಿಲ್ಲೆಯ ಕಡಬ (Kadaba) ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯ ಮಕ್ಕಳು ನಮಾಜ್ (Namaz) ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ.  6 ನೇ ಮತ್ತು 7 ನೇ ತರಗತಿ ಮಕ್ಕಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ನಮಾಜ್ ಮಾಡುತ್ತಿದ್ದರೂ ಶಾಲಾ ಸಿಬ್ಬಂದಿ ಗಮನ ಹರಿಸಿಲ್ಲ ಎನ್ನಲಾಗಿದೆ. 

Global remarks on hijab row: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ, ವಿದೇಶಗಳಿಗೆ ಭಾರತದ ಖಡಕ್ ಎಚ್ಚರಿಕೆ

ನಮಾಜ್ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ  ಲೋಕೇಶ್  ನೇತೃತ್ವದಲ್ಲಿ  ಎಸ್ ಡಿಎಂಸಿ ಸದಸ್ಯರ  ತುರ್ತು ಸಭೆ ನಡೆಸಲಾಗಿದೆ. ಸಭೆಯಲ್ಲಿ ಸವಣೂರು ಪಂಚಾಯತ್ ಆಡಳಿತ, ಪೊಲೀಸ್ ಇಲಾಖೆ ಕೂಡ ಭಾಗವಹಿಸಿತ್ತು. ಜೊತೆಗೆ ಶಾಲಾ ಕೊಠಡಿಯಲ್ಲಿ ನಮಾಜ್ ಹಿನ್ನೆಲೆ ಮುಸ್ಲಿಂ ‌ಮಕ್ಕಳ ಪೋಷಕರೂ ಭಾಗಿಯಾಗಿದ್ದರು.  ಸಭೆ ವೇಳೆ ಎಸ್ ಡಿಎಂಸಿ ಅಧ್ಯಕ್ಷರು ನಮಾಜ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಬಳಿಕ ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆ ಹರಿದಿದೆ ಎಂದು ಬಿಇಒ ಹೇಳಿದ್ದಾರೆ.