Asianet Suvarna News Asianet Suvarna News

Global remarks on hijab row: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ, ವಿದೇಶಗಳಿಗೆ ಭಾರತದ ಖಡಕ್ ಎಚ್ಚರಿಕೆ

ಹಿಜಾಬ್ ವಿವಾದ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿದೇಶಗಳ ಕಾಮೆಂಟ್ ಗೆ ಉತ್ತರಿಸಿರುವ ಭಾರತ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದೆ.

India replies after Global remarks on Hijab Row gow
Author
Bengaluru, First Published Feb 12, 2022, 3:29 PM IST | Last Updated Feb 12, 2022, 6:59 PM IST

ನವದೆಹಲಿ(ಫೆ.12): ರಾಜ್ಯದಲ್ಲಿನ ಹಿಬಾಬ್-ಕೇಸರಿ ಶಾಲು ವಿವಾದ (hijab and saffron shawl Row) ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು,  ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಡ್ರೆಸ್ ಕೋಡ್‌ನ (dress code) ಬಗ್ಗೆ ಕೆಲ ದೇಶಗಳು ಟೀಕಿಸಿವೆ. ಇದನ್ನು ಭಾರತವು ತಿರಸ್ಕರಿಸಿದ್ದು, ದೇಶದ ಆಂತರಿಕ ಸಮಸ್ಯೆಗಳ ಕುರಿತ "ಪ್ರಚೋದಿತ ಕಾಮೆಂಟ್‌ಗಳನ್ನು" ಸ್ವಾಗತಿಸುವುದಿಲ್ಲ  ಎಂದು ಖಡಕ್ ಉತ್ತರ ನೀಡಿದೆ.

ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ ಕುರಿತು ಕೆಲವು ದೇಶಗಳು ಕಾಮೆಂಟ್‌ ಮಾಡಿದ್ದು, ಇದಕ್ಕೆ  ಭಾರತ ಪ್ರತಿಕ್ರಿಯೆ ಏನು ಎಂದು  ಮಾಧ್ಯಮಗಳು ಕೇಳಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ವಿದೇಶಿ ವ್ಯವಹಾರಗಳ ಅಧಿಕೃತ ವಕ್ತಾರ ಶ್ರೀ ಅರಿಂದಮ್ ಬಾಗ್ಚಿ,(Arindam Bagchi) ಕರ್ನಾಟಕ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್‌ಗೆ ಸಂಬಂಧಿಸಿದ ವಿಷಯವು ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ನ್ಯಾಯಾಂಗ ಪರೀಕ್ಷೆಯಲ್ಲಿದೆ. 

"

ನಮ್ಮ ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನಗಳು, ಹಾಗೆಯೇ ನಮ್ಮ ಪ್ರಜಾಸತ್ತಾತ್ಮಕ ನೀತಿ ಮತ್ತು ರಾಜಕೀಯ  ಸಮಸ್ಯೆಗಳನ್ನು ಪರಿಗಣಿಸುವ ಮತ್ತು ಪರಿಹರಿಸುವ ಸಂದರ್ಭವಾಗಿದೆ. ಭಾರತವನ್ನು ಚೆನ್ನಾಗಿ ತಿಳಿದುಕೊಂಡಿರುವವರಿಗೆ ನೈಜತೆಯ ಅರಿವಿದ್ದು ಮೆಚ್ಚುಗೆಯನ್ನು ಹೊಂದಿರುತ್ತಾರೆ. ಭಾರತದ ಆಂತರಿಕ ಸಮಸ್ಯೆಗಳ ಕುರಿತು ಪ್ರೇರಿತ ಕಾಮೆಂಟ್‌ಗಳು ಸ್ವಾಗತಾರ್ಹವಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

Hijab Row ಶಾಲೆಗೂ ವ್ಯಾಪಿಸಿದ ಹಿಜಾಬ್ ಸಂಘರ್ಷ: ಬೆಂಗ್ಳೂರಿನ ಖಾಸಗಿ ಶಾಲೆಯಲ್ಲಿ ಗಲಾಟೆ

ಫೆಬ್ರವರಿ 11 ರಂದು US ರಾಯಭಾರಿ (IRF) ರಶಾದ್ ಹುಸೇನ್, ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಮಹಿಳೆಯರು ಮತ್ತು ಹುಡುಗಿಯರನ್ನು ಕಳಂಕಗೊಳಿಸುತ್ತದೆ ಮತ್ತು ಕಡೆಗಣಿಸುತ್ತದೆ ಎಂದು ಟ್ವೀಟ್ ಮಾಡಿದ್ದರು. 

 

Rahul Kumar Das Neet: ಅಸ್ಸಾಂ ಚಹಾ ಮಾರಾಟಗಾರ ನೀಟ್ ಪಾಸ್ ಮಾಡಿದ್ದು ನಕಲಿ!

ಕರ್ನಾಟಕ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಫೆಬ್ರವರಿ 9 ರಂದು ಪಾಕಿಸ್ತಾನ ಸರಕಾರ ಇಸ್ಲಾಮಾಬಾದಿನ ಭಾರತೀಯ ಹೈಕಮಿಷನ್ ಗೆ ಸಮನ್ಸ್ ವಿಧಿಸಿತ್ತು. ಹಿಜಾಬ್ ಧರಿಸಿದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ನಿರಾಕರಿಸಿರುವುದಕ್ಕೆ ಪಾಕ್ ಆತಂಕ ವ್ಯಕ್ತಪಡಿಸಿ, ಭಾರತ ಸರ್ಕಾರ ಈ ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. 

ಮಾತ್ರವಲ್ಲ ಈ ಬಗ್ಗೆ ಪಾಕ್ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯೆ ನೀಡಿ, ಹಿಜಾಬ್ ಧರಿಸುವುದು ಬಿಡುವುದು ಅವರವರ ವೈಯಕ್ತಿಕ ನಿರ್ಧಾರ. ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Latest Videos
Follow Us:
Download App:
  • android
  • ios