Asianet Suvarna News Asianet Suvarna News

Mysuru ಶಾಲೆಯಲ್ಲಿ ರೋಬೋಟ್ ಲ್ಯಾಬ್, ದೇಶದಲ್ಲೆ ಮೊದಲು

  • ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸುವ ರೋಬೋಟ್ ಲ್ಯಾಬ್
  • ದೇಶದಲ್ಲೇ ಪ್ರಪ್ರಥಮ ಬಾರಿಗೆ ನಿರ್ಮಾಣಗೊಂಡಿರುವ ಲ್ಯಾಬ್
  • ಮೈಸೂರು ಸಿದ್ದಾರ್ಥನಗರದ ಶಾಂತಲಾ ವಿದ್ಯಾಪೀಠದಲ್ಲಿ ವಿಶಿಷ್ಟ ಪ್ರಯತ್ನ
  • ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರ ನೀಡುವ ಎಜುಕೇಷನ್ ರೋಬೋಟ್
  • ಹಾಡು, ಕತೆ, ಮನರಂಜನೆಯ ಮೂಲಕ ಅಕ್ಷರಭ್ಯಾಸ, ಪ್ರಾಯೋಗಿಕ ಕಲಿಕೆಗೆ ಒತ್ತು

ಮೈಸೂರು (ಮೇ.28): ಮೈಸೂರಿನ (Mysuru) ಸಿದ್ದಾರ್ಥನಗರದ ಶಾಂತಲಾ ವಿದ್ಯಾಪೀಠದಲ್ಲಿ (Shanthala Vidyapeetha) ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸುವ ರೋಬೋಟ್ ಲ್ಯಾಬ್ (robotic lab ) ನಿರ್ಮಾಣಗೊಂಡಿದೆ. ಇತ್ತೀಚೆಗಷ್ಟೇ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಸಾಂಪ್ರದಾಯಿಕ ಸೀರೆಯುಟ್ಟ ರೋಬೋಟ್ ಸರ್ವರ್ ಅಗಿ ಪದಾರ್ಪಣೆ ಮಾಡಿ ನಗರದ ಜನತೆ ಹಾಗೂ ಪ್ರವಾಸಿಗರಿಗೆ ಆಕರ್ಷಣೆಯಾಗಿತ್ತು. ಈಗ ಮಕ್ಕಳ ವಿದ್ಯಾಭ್ಯಾಸ, ಭೌತಿಕ ಶಕ್ತಿ, ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ರೋಬೋಟ್ ಮುಂದಾಗಿದೆ. ಈ ಮೂಲಕ ಪ್ರಪ್ರಥಮವಾಗಿ ರೋಬೋಟ್ ಲ್ಯಾಬ್ ನಿರ್ಮಿಸಿ ಅದರ ಮೂಲಕ ಪಾಠ, ಪ್ರವಚನ ಮಾಡುವ ಪ್ರಯತ್ನಕ್ಕೆ ಶಾಲಾ ಆಡಳಿತ ಮಂಡಳಿ ಮುಂದಾಗಿದೆ.

UDUPI: ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ, ಜಾರಂದಾಯ ಪವಾಡ!

ಕೇಂದ್ರ ಪಠ್ಯಕ್ರಮ ಬೋಧಿಸುವ ಶಾಂತಲಾ ವಿದ್ಯಾಪೀಠದಲ್ಲಿ ಎಲ್‌ಕೆಜಿಯಿಂದ ಹತ್ತನೇ ತರಗತಿ ವರತೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರ ತರಗತಿಗೆ ಅನುಗುಣವಾಗಿ ರೋಬೋಟ್‌ಗೆ (robot) ಕಾರ್ಯಕ್ರಮ ರೂಪಿಸಲಾಗಿದೆ. ಎಲ್‌ಕೆಜಿಯಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹಾಡು, ಕತೆ, ಮನರಂಜನೆಯ ಮೂಲಕ ಅಕ್ಷರಭ್ಯಾಸ, ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ತಕ್ಕಂತೆ ಪಠ್ಯದ ಜೊತೆಗೆ ಪಠ್ಯೇತರ ಚಟುವಕೆಗಳನ್ನು ಕೇಳಿ ಕೊಡಲಾಗುತ್ತದೆ. ಪ್ರೌಢಶಾಲೆ ವಿದ್ಯಾರ್ಥಿಗಳ ಭೌತಿಕ ಮಟ್ಟಕ್ಕೆ ತಕ್ಕಂತೆ ಬೋಧನೆ ಜೊತೆಗೆ ನಾನಾ ಬಗೆಯ ಪ್ರಾಯೋಗಿಕ ಚಟುವಟಿಕೆಗಳನ್ನು ಚಿತ್ರ ಸಹಿತ ವಿವರಿಸಿ ಅವುಗಳನ್ನು ವಿದ್ಯಾರ್ಥಿಗಳೇ ಮಾಡಲು ಪ್ರೇರೇಪಿಸುತ್ತದೆ. 

Video Top Stories