Asianet Suvarna News Asianet Suvarna News

Udupi: ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ, ಜಾರಂದಾಯ ಪವಾಡ!

ಮಗುವಿನ ಕಳೆದುಹೋದ ಚಿನ್ನದ ಸರವೊಂದು ಕುಟುಂಬದ ದೈವ ಸಾನಿಧ್ಯದಲ್ಲಿ ಪತ್ತೆಯಾಗಿದೆ. ದೈವದ ಮುಂದೆ ಪ್ರಾರ್ಥಿಸಿದ ಮೂರೇ ದಿನಗಳಲ್ಲಿ ಉರಿಯುವ ಕಾಲುದೀಪದ ಕೆಳಗೆ ಸರ ಕಂಡುಬಂದಿದೆ.

Tulunadu daiva mystery at udupi gow
Author
Bengaluru, First Published May 28, 2022, 5:05 PM IST

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಮೇ.28): ಕರ್ನಾಟಕ ಕರಾವಳಿಯ ತುಳುನಾಡಿನಲ್ಲಿ (Tulunadu) ದೈವ ಗಳೆಂದರೆ ಅಪಾರ ನಂಬಿಕೆ. ದೈವದ ಮೇಲಿನ ನಂಬಿಕೆಯನ್ನು ಮತ್ತಷ್ಟು ಘಟ್ಟಿಗೊಳಿಸಲು ಆಗಿಂದಾಗ್ಗೆ ಕೆಲವೊಂದು ಪವಾಡಗಳು ನಡೆಯುತ್ತಲೇ ಇರುತ್ತವೆ. ಉಡುಪಿ (Udupi) ಜಿಲ್ಲೆಯ ಕಾಪು (Kapu) ತಾಲೂಕಿನ ಬೆಳಪು ಗ್ರಾಮದ ಪಣಿಯೂರು ಸಮೀಪ ದೈವ ಪವಾಡ ಮತ್ತೊಮ್ಮೆ ಸಾಬೀತಾಗಿದೆ.

ಮಗುವಿನ ಕಳೆದುಹೋದ ಚಿನ್ನದ (Gold) ಸರವೊಂದು ಕುಟುಂಬದ (Family) ದೈವ ಸಾನಿಧ್ಯದಲ್ಲಿ ಪತ್ತೆಯಾಗಿದೆ. ದೈವದ ಮುಂದೆ ಪ್ರಾರ್ಥಿಸಿದ ಮೂರೇ ದಿನಗಳಲ್ಲಿ ಉರಿಯುವ ಕಾಲುದೀಪದ ಕೆಳಗೆ ಸರ ಕಂಡುಬಂದಿದೆ.

ಘಟನೆಯ ಹಿನ್ನೆಲೆ: ಮೇ 18 ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ಸರ ಕಳ್ಳತನವಾಗಿತ್ತು. ನಾಂಜಾರು ದೈವ ಸ್ಥಾನಕ್ಕೆ ಒಳಪಟ್ಟ ಮನೆಯ ಮಗುವೊಂದರ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಕಣ್ಮರೆಯಾಗಿತ್ತು.  ಪಡುಬಿದ್ರಿಯ ಮದುವೆ (Wedding) ಸಮಾರಂಭದಲ್ಲಿ ತಂದೆ-ತಾಯಿ ಅಜ್ಜಿಯ ಜೊತೆಗೆ ಇದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮಧ್ಯಾಹ್ನದ ಬಳಿಕ ಕಾಣಸಿಗಲಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.

CHIKKAMAGALURU; ಕೊಟ್ಟಿಗೆಗೆ ಬೆಂಕಿ, ಜಾನುವಾರುಗಳು ಸಜೀವ ದಹನ

ಬಳಿಕ ಚಿನ್ನದ ಸರ ಕಣ್ಮರೆಯಾಗಿರುವ ಬಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ಮತ್ತು ಪರಿವಾರ ಶಕ್ತಿಗಳಿಗೆ ಕೈ ಮುಗಿದು, ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೊರಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದ್ದರು. ಮೇ 24ರಂದು ಹೂವಿನ ಪೂಜೆ ಕೊಟ್ಟು ಪ್ರಾರ್ಥನೆ ಸಲ್ಲಿಸಲಾಗಿತ್ತು.

ಚಿನ್ನದ ಸರ ಕಾಣೆಯಾದ 10ದಿನಗಳ ಬಳಿಕ ಶುಕ್ರವಾರ ಬೆಳಗ್ಗೆ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿರುವ ಸಾಣಾದಿಗೆಯಲ್ಲಿ ದೀಪ ಹಾಕಲೆಂದು ಬಂದಿದ್ದ ದೈವಸ್ಥಾನದ ಮನೆಯವರಿಗೆ  ಸಾಣಾದಿಗೆಯ ಜೊತೆಗೆ ಚಿನ್ನದ ಸರ ಇರುವುದು ಬೆಳಕಿಗೆ ಬಂದಿದೆ. ಪ್ರಾರ್ಥನೆ ಸಲ್ಲಿಸಿದ ಮೂರು ದಿನಗಳಲ್ಲಿ ಚಿನ್ನದ ಸರ ಪತ್ತೆಯಾಗಿದೆ.

ಸರ ಕಳೆದುಕೊಂಡಿದ್ದ ಮನೆಯವರು ಬಂದು ಪರಿಶೀಲಿಸಿದಾಗ ಅದು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವಾಗಿದ್ದು, ಕೂಡಲೇ ಮಗುವಿನ ತಾಯಿಗೆ ವಿಷಯ ಮುಟ್ಟಿಸಿದರು. ತಾಯಿ ಕೂಡಾ ಸರ ತನ್ನದೇ ಮಗುವಿನದ್ದೆಂದು ಧೃಡಪಡಿಸಿದ್ದಾರೆ.

ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿರುವ ದೇವನೂರು, Pratap Simha ಕಿಡಿ

ಜಾರಂದಾಯನ ಪವಾಡವೇ ಸರಿ: ಗುರುವಾರ ರಾತ್ರಿ ದೈವಸ್ಥಾನದ ಜಗಲಿಯಲ್ಲಿ ಕುಳಿತು ಮನೆಯವರು ಮಾತನಾಡುತ್ತಾ ಬಹಳ ಹೊತ್ತು ಕಳೆದಿದ್ದರು.  ಈ ವೇಳೆಯೂ ದೀಪ ಉರಿಯುತ್ತಲೇ ಇತ್ತು. ಆದರೂ ಯಾವುದೇ ಚಿನ್ನದ ಸರ ಕಂಡು ಬಂದಿರಲಿಲ್ಲ. ಶುಕ್ರವಾರ ಬೆಳಗ್ಗೆ ಸಾಣಾದಿಗೆಗೆ ಎಣ್ಣೆ ಹಾಕಿ, ದೀಪ ಬೆಳಗಿಸುವ ವೇಳೆ ಚಿನ್ನದ ಸರ ಕಂಡು ಬಂದಿದ್ದು ಕೂಡಲೇ ಮನೆಯವರನ್ನು ಕರೆದು ತೋರಿಸಿದಾಗ ಅದು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವೆಂದು ಗುರುತಿಸಲ್ಪಟ್ಟಿದೆ. ಧರ್ಮ ಜಾರಂದಾಯನ ಕೃಪೆಯಿಂದಲೇ ಕಳೆದು ಹೋಗಿದ್ದ ಚಿನ್ನದ ಸರ ಮರಳಿ ದೊರಕಿದೆ ಎಂದು ಮನೆಯವರು ಭಾವುಕರಾಗಿದ್ದಾರೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಜಾವದ ನಡುವೆ ಈ ಬೆಳವಣಿಗೆ ನಡೆದಿದೆ. ಧರ್ಮ ಜಾರಂದಾಯ ದೈವದ ಕಾರಣಿಕ ಇದಾಗಿದೆ ಎಂದು ನಾಂಜಾರು ಸಾನದ ಮನೆ ಕಿಶೋರ್ ಪೂಜಾರಿ ಹಾಗೂ ರಾಕೇಶ ಕುಂಜೂರ್ ತಿಳಿಸಿದ್ದಾರೆ.

ಆರು ವರ್ಷಗಳ ಹಿಂದೆ ಸಮಗ್ರ ಜೀರ್ಣೋದ್ದಾರಗೊಂಡು ಹಲವಾರು ಪವಾಡಗಳಿಗೆ ಸಾಕ್ಷಿಯಾಗಿರುವ ಬೆಳಪು ಗ್ರಾಮದ ಪಣಿಯೂರು ರೈಲ್ವೈ ನಿಲ್ದಾಣದ ಬಳಿಯಿರುವ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವು ಮತ್ತೊಂದು ಕಾರಣಿಕತೆಗೆ ಸಾಕ್ಷಿಯಾಗಿದೆ.

CHITRADURGA ಶಿರಡಿಯಲ್ಲಿ ಭಕ್ತರ ವೇಷದಲ್ಲಿದ್ದ ಗಾಂಜಾ ಕಿಂಗ್ ಪಿನ್ ಅರೆಸ್ಟ್

ಎಂದೂ ಕೈಬಿಡದ ಕುಟುಂಬ ದೈವ: ತುಳುನಾಡಿನಲ್ಲಿ ಕುಟುಂಬದ ದೈವಗಳ ಬಗ್ಗೆ ವಿಶೇಷ ಭಕ್ತಿ ಶ್ರದ್ಧೆ ಇರುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನನ್ನು ದೈವ ತನ್ನ ಮನೆಯ ಕುಡಿ ಎಂದು ಭಾವಿಸುತ್ತದೆ. ಮನೆ ಮಕ್ಕಳ ಕಷ್ಟಸುಖಗಳಲ್ಲಿ ದೈವ ಕೂಡ ಭಾಗಿಯಾಗುತ್ತದೆ ಅನ್ನೋದು ನಂಬಿಕೆ.‌ ಯಾವುದೇ ಕಷ್ಟ ಬಂದರೂ ದೇವರ ಮೊರೆ ಹೋಗುವ ಮೊದಲು ದೈವ ಸನ್ನಿಧಾನದಲ್ಲಿ ಕಣ್ಣೀರು ಹಾಕಿ ಬೇಡಿಕೊಳ್ಳುವುದು ತುಳುವರ ಪದ್ಧತಿ.‌ ಮನೆ ಮಕ್ಕಳ ಕಷ್ಟಕ್ಕೆ ಸುಲಭವಾಗಿ ಕರಗುವ ದೈವವು ಹೇಳಿದ ಕೆಲಸವನ್ನು ಮಾಡಿಕೊಡುವ ಮೂಲಕ ಅನೇಕ ಪವಾಡಗಳು ಕುಟುಂಬಗಳಲ್ಲಿ ನಡೆಯುತ್ತಲೇ ಇರುತ್ತವೆ. ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬ ಮಾತಿನಂತೆ ದೈವದ ಮೇಲಿನ ಭಯದಿಂದ ಕಳ್ಳರು ತಾವಾಗಿಯೇ ಶರಣಾಗಿರುವ ಅನೇಕ ಉದಾಹರಣೆಗಳಿವೆ.

Follow Us:
Download App:
  • android
  • ios