Udupi Hijab Controversy: ಮುಗಿಯದ ಹಿಜಾಬ್‌ ವಿವಾದ

ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 6 ಮುಸ್ಲಿಂ  ವಿದ್ಯಾರ್ಥಿನಿಯರು ಸರ್ಕಾರದ ಆದೇಶ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಎಚ್ಚರಿಕೆಯ ನಡುವೆಯೂ ಮಂಗಳವಾರ ಹಿಜಾಬ್‌  ಧರಿಸಿಕೊಂಡು ಬಂದಿದ್ದು ಪ್ರಾಂಶುಪಾಲರು ಅವರಿಗೆ ತರಗತಿ ಪ್ರವೇಶವನ್ನು ನಿರಾಕರಿಸಿದ್ದಾರೆ.

First Published Feb 3, 2022, 3:28 PM IST | Last Updated Feb 3, 2022, 3:28 PM IST

ಉಡುಪಿಯ (Udupi) ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 6 ಮುಸ್ಲಿಂ (Muslim) ವಿದ್ಯಾರ್ಥಿನಿಯರು (Student) ಸರ್ಕಾರದ ಆದೇಶ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಎಚ್ಚರಿಕೆಯ ನಡುವೆಯೂ ಮಂಗಳವಾರ ಹಿಜಾಬ್‌  (Hijab)ಧರಿಸಿಕೊಂಡು ಬಂದಿದ್ದು ಪ್ರಾಂಶುಪಾಲರು ಅವರಿಗೆ ತರಗತಿ ಪ್ರವೇಶವನ್ನು ನಿರಾಕರಿಸಿದ್ದಾರೆ.ಇದರಿಂದ ಅಸಮಾಧಾನಗೊಂಡ ಆ ಆರು ವಿದ್ಯಾರ್ಥಿನಿಯರು ಕ್ಯಾಂಪಸ್‌ನೊಳಗೆ ಕೂತು ಪ್ರತಿಭಟನೆ ನಡೆಸಿದ್ದು, ವಿವಾದ ಜೀವಂತವಾಗಿರುವಂತೆ ಮಾಡಿದ್ದಾರೆ.

Hijab Controversy: ಹಿಜಾಬ್‌ ಧರಿಸುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಪಾಠ ಎಂದ ಶಾಸಕ ರಘುಪತಿ ಭಟ್‌

ಈ ವಿದ್ಯಾರ್ಥಿಗಳು ಕಳೆದೊಂದು ತಿಂಗಳಿಂದ ಕಾಲೇಜಿನ ಸಮವಸ್ತ್ರದ ಜೊತೆಗೆ ತಮ್ಮ ಧಾರ್ಮಿಕ ಉಡುಪು ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶ ನೀಡಬೇಕು ಎಂದು ಹಠ ಹಿಡಿದಿದ್ದು, ಅವರ ತರಗತಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕಾಲೇಜು ನಿಗದಿಪಡಿಸಿದ ಸಮವಸ್ತ್ರವನ್ನಷ್ಟೇ ಧರಿಸುವಂತೆ ಆದೇಶಿಸಿದೆ. ಅದರಂತೆ ಕಾಲೇಜು ಅಭಿವೃದ್ಧಿ ಸಮಿತಿಯು, ಹಿಜಾಬ್‌ ಧರಿಸಿದರೆ ಕ್ಯಾಂಪಸ್‌ ಒಳಗೆ ಬರಬೇಡಿ, ಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.ಹಿಜಾಬ್‌ ಧರಿಸುವುದು ಸಂವಿಧಾನದ ಮೂಲಭೂತ ಹಕ್ಕೆಂದು(Fundamental Right) ಘೋಷಿಸಬೇಕು ಹಾಗೂ ಹಿಜಾಬ್‌ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು(Muslim Student) ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Video Top Stories