Asianet Suvarna News Asianet Suvarna News

KPSC Examination: ಭರವಸೆಗೆ ಒಪ್ಪಿ ಹೋರಾಟ ಕೈಬಿಟ್ಟರು.. ಪರಿಹಾರ ಕೊಡೋರು ಯಾರು?

* ಕೆಪಿಎಸ್‌ಸಿ  ಪರೀಕ್ಷಾರ್ಥಿಗಳ ಹೋರಾಟ ಅಂತ್ಯ
* ತಡವಾಗಿ ಆಗಮಿಸಿದ ರೈಲು ದೊಡ್ಡ ಸಮಸ್ಯೆ ತಂದಿಟ್ಟಿತ್ತು
* ರೈಲಿನಲ್ಲಿ ಆಗಮಿಸಿ ಸಮಸ್ಯೆ ಆದವರಿಗೆ ಪರ್ಯಾಯ ಕ್ರಮ  ಸರ್ಕಾರದ ಭರವಸೆ
* ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮೇಗೌಡರಿಂದ ಮನವೊಲಿಕೆ

ರಾಯಚೂರು/ ಕಲಬುರಗಿ(ಡಿ. 14)  ಕೆಪಿಎಸ್‌ಸಿ  (KPSC) ಪರೀಕ್ಷಾರ್ಥಿಗಳು ಹೋರಾಟ ಅಂತ್ಯ ಮಾಡಿದ್ದಾರೆ. ಸರ್ಕಾರದ ಪರವಾಗಿಯೂ ಬೆಳಗಾವಿ (Belagavi) ಅಧಿವೇಶನದಲ್ಲಿ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ.

Indian Railway Service: ಗುಡ್ ನ್ಯೂಸ್ : ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು

ರಾಯಚೂರಿನಿಂದ (Raichur) ಕಲಬುರಗಿಗೆ ಹೊರಟ ರೈಲು ಐದು ಗಂಟೆ ತಡವಾಗಿ ಬಂದಿದ್ದು ಪರೀಕ್ಷೆ ಬರೆಯಲು ಬಂದವರು ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರ್ಕಾರದ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು. ರೈಲಿನಲ್ಲಿ ಆಗಮಿಸಿದ್ದ ಸುಮಾರು 1500  ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ್ದು ಪರಿಹಾರ ಕಲ್ಪಿಸಿಕೊಡಲೇಬೇಕಾಗಿದೆ. 

 

 

Video Top Stories