ಅ. 25 ರಿಂದ 1-5 ನೇ ಕ್ಲಾಸ್ ಶುರು, ಶಿಕ್ಷಣ ಇಲಾಖೆಗೆ ತಲೆನೋವು ತಂದ ತಜ್ಞರ ಸಲಹೆಗಳು

ರಾಜ್ಯದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 25 ರಿಂದ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 23): ರಾಜ್ಯದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 25ರಿಂದ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. 

ಎಲ್‌ಕೆಜಿ, ಯುಕೆಜಿ ಆರಂಭಕ್ಕೂ ಚಿಂತನೆ: ಸಚಿವ ನಾಗೇಶ್

ಪ್ರತಿ ತರಗತಿ ಕೊಠಡಿ ಸಾಮರ್ಥ್ಯದ ಶೇ.50ರಷ್ಟುಹಾಜರಾತಿ, ಹಾಜರಾತಿಗೆ ಪೊಷಕರ ಒಪ್ಪಿಗೆ ಪತ್ರ ಕಡ್ಡಾಯ ಸೇರಿದಂತೆ ಕೆಲ ಸೂಚನೆಗಳೊಂದಿಗೆ ಶಾಲೆ ಆರಂಭಕ್ಕೆ ಅಧಿಕೃತ ಆದೇಶ ಮಾಡಿದೆ. ತಜ್ಞರ ಸಲಹೆಗಳು ಶಿಕ್ಷಣ ಇಲಾಖೆಗೆ ತಲೆನೋವಾಗಿದೆ. ಶಾಲಾ ಮಕ್ಕಳು ಮಾನಸಿಕವಾಗಿ ಸದೃಢರಾಗಿರಬೇಕು. 20 ತಿಂಗಳಿನಿಂದ ಶಾಲೆ ಇಲ್ಲದೇ ಮಕ್ಕಳಿಗೆ ಮಾನಸಿಕ, ದೈಹಿಕ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ಧಾರೆ. 

Related Video