ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ; ಮೈಸೂರು ವಿವಿಯಿಂದ ಸ್ಪಷ್ಟನೆ
ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ. ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು.
ಮೈಸೂರು (ಸೆ. 05): ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ. ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು.
ಈ ಆರೋಪವನ್ನು ಮೈಸೂರು ವಿವಿ ಆಡಳಿತ ವರ್ಗ ತಳ್ಳಿ ಹಾಕಿದೆ. ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯನ್ನು ನಾವು ಅತ್ಯುತ್ತಮವಾಗಿ ಸಂರಕ್ಷಣೆ ಮಾಡಿದ್ದೇವೆ. ಫ್ಯುಮಿಗೇಷನ್ ಟ್ರೀಟ್‌ಮೆಂಟ್ ಮೂಲಕ ಕೃತಿ ರಕ್ಷಣೆ ಮಾಡಲಾಗಿದೆ. ಇದರಿಂದ ಕೃತಿಯಲ್ಲಿ 300-400 ವರ್ಷದ ಕೆಡದಂತೆ ಇಡಬಹುದು. ಇದು ಎಸಿಯಲ್ಲಿ ಇಡುವುದಕ್ಕಿಂದ ಅತ್ಯುತ್ತಮ ಮಾರ್ಗ.ಇದರಿಂದ ತಾಳೆಗರಿಗಳಿಗೆ ಯಾವುದೇ ಯಾವುದೇ ಕೀಟ ಬಾದೆ ಆಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.