ವಠಾರ ಶಾಲೆಯ 4 ಮಕ್ಕಳಿಗೆ ಸೋಂಕು; ಶಾಲೆ ಪ್ರಾರಂಭಿಸುವ ಮುನ್ನ ಈ ವರದಿ ನೋಡಲೇಬೇಕು
ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಶಾಲೆ ಪ್ರಾರಂಭ ಮಾಡಬೇಕೆ? ಬೇಡವೇ ಎಂಬ ಚರ್ಚೆ ಶುರುವಾದ ಸಂದರ್ಭದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.
ಬೆಂಗಳೂರು (ಅ. 09): ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಶಾಲೆ ಪ್ರಾರಂಭ ಮಾಡಬೇಕೆ? ಬೇಡವೇ ಎಂಬ ಚರ್ಚೆ ಶುರುವಾದ ಸಂದರ್ಭದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.
ವಠಾರ ಶಾಲೆ ಮಕ್ಕಳಿಗೂ ಅಂಟಿದ ಕೊರೊನಾ ಸೋಂಕು..!
ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಶುರುವಾಗಿದೆ. ಈ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಕೋವಿಡ್ ಸೋಂಕು ತಗುಲಿದ್ದು, ಆ ಶಿಕ್ಷಕರಿಂದ 4 ಮಕ್ಕಳಿಗೂ ಸೋಂಕು ತಗುಲಿರುವ ಘಟನೆ ಕಲಬುರಗಿ ಜಿಲ್ಲೆ ಅಫ್ಜಲ್‌ಪುರ ತಾಲೂಕಿನ ಮಾಶಾಳದಲ್ಲಿ ವರದಿಯಾಗಿದೆ. ಶಾಲೆಯ 207 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಾಗಿದೆ.