ಹಿಜಾಬ್ ವಿವಾದ, ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

ಹಿಜಾಬ್ ವಿವಾದಕ್ಕೆ ಸಬಂಬಂಧಿಸಿದಂತೆ ಒಂದು ಅರ್ಜಿಯ ಪರ ಒಬ್ಬೊಬ್ಬ ವಕೀಲ ವಾದ ಮಂಡಿಸುತ್ತಿದ್ದಾರೆ. ದೇವದತ್ ಕಾಮತ್ ವಾದ ಮಂಡನೆ ಮುಗಿದೆ. ಇದೀಗ ಅರ್ಜಿದಾರರ ಪರವಾಗಿ ಮತ್ತೋರ್ವ ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅವರು ಹೈಕೋರ್ಟ್ ತ್ರಿದಸ್ಯ ಪೀಠದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದಾರೆ. ಆದ್ರೆ, ನ್ಯಾಯಪೀಠ ಗರಂ ಆಗಿದ್ದು, ಯಾವ ಆಧಾರದ ಮೇಲೆ ವಾದ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ರೆಹಮತ್ ಉಲ್ಲಾ ಅವರ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.17): ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. ಕೋರ್ಟ್‌ನಲ್ಲಿ ಈ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಒಂದು ಅರ್ಜಿಯ ಪರ ಒಬ್ಬೊಬ್ಬ ವಕೀಲ ವಾದ ಮಂಡಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತ್ತ ವಿದ್ಯಾರ್ಥಿನಿಯರ ಗದ್ದಲ, ಗಲಾಟೆ, ಇತ್ತ ಹಿಜಾಬ್ ಸಂಗ್ರಾಮದ ಮಧ್ಯೆ ಸಚಿವರ ಸ್ನೇಹ ಸಭೆ, ತಬ್ಬಿಕೊಂಡ ಜಮೀರ್

ದೇವದತ್ ಕಾಮತ್ ವಾದ ಮಂಡನೆ ಮುಗಿದೆ. ಇದೀಗ ಅರ್ಜಿದಾರರ ಪರವಾಗಿ ಮತ್ತೋರ್ವ ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅವರು ಹೈಕೋರ್ಟ್ ತ್ರಿದಸ್ಯ ಪೀಠದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದಾರೆ. ಆದ್ರೆ, ನ್ಯಾಯಪೀಠ ಗರಂ ಆಗಿದ್ದು, ಯಾವ ಆಧಾರದ ಮೇಲೆ ವಾದ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ರೆಹಮತ್ ಉಲ್ಲಾ ಅವರ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.

 ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸಿದ್ದಾರೆ. ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಬಿಡಲ್ಲ ಅಂತ ಕೆಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ.

Related Video