Asianet Suvarna News Asianet Suvarna News

ಹತ್ತಿರದ ಪಿಯು ಕೇಂದ್ರಗಳಲ್ಲೇ ಪರೀಕ್ಷೆಗೆ ಅವಕಾಶ ನೀಡಿ: ರುಪ್ಸಾ ಸಲಹೆ

May 26, 2021, 11:23 AM IST

ಬೆಂಗಳೂರು (ಮೇ. 26): 'ರಾಜ್ಯದ ಎಲ್ಲಾ ಪಿಯು ಕಾಲೇಜುಗಳನ್ನೂ ಪರೀಕ್ಷಾ ಕೇಂದ್ರಗಳಾಗಿಸಿ ವಿದ್ಯಾರ್ಥಿಗಳಿಗೆ ತಮಗೆ ಹತ್ತಿರವಾದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ. ಪರೀಕ್ಷಾ ಅವಧಿ ಅರ್ಧದಷ್ಟು ಇಳಿಸಿ, ಸರಳ ಪ್ರಶ್ನೆಗಳೊಂದಿಗೆ ಪ್ರಶ್ನೆ ಪತ್ರಿಕೆ ರಚಿಸಿ, ಪರೀಕ್ಷೆಗೆ ಅರ್ಧಗಂಟೆ ಮುನ್ನ ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ರವಾನಿಸಿ ಕೇಂದ್ರಗಳಲ್ಲೇ ಮುದ್ರಿಸಿಕೊಳ್ಳಲು ವ್ಯವಸ್ಥೆ ಮಾಡಿ' ಎಂದು 'ರುಪ್ಸಾ' ಸಲಹೆ ನೀಡಿದೆ.  ತನ್ನ ವ್ಯಾಪ್ತಿಯ 250ಕ್ಕೂ ಹೆಚ್ಚು ಪಿಯು ಕಾಲೇಜುಗಳ ಅಭಿಪ್ರಾಯ ಪಡೆದು ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದೆ. 

ದ್ವಿತೀಯ ಪಿಯು ಪರೀಕ್ಷೆ ಯಾವಾಗ? ಮಹತ್ವದ ಸುಳಿವು ಕೊಟ್ಟ ಸರ್ಕಾರ