Chanakya Career Academy: ಸರಕಾರಿ ಉದ್ಯೋಗದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿದೆ ಚಾಣಕ್ಯ ಅಕಾಡೆಮಿ

ಸಾವಿರಾರು ಸರಕಾರಿ ಅಧಿಕಾರಿಗಳನ್ನು ನಾಡಿಗೆ ಸಮರ್ಪಿಸಿದ ಕೀರ್ತಿ ಚಾಣಕ್ಯ ಅಕಾಡೆಮಿಯದ್ದಾಗಿದೆ. ಅಕಾಡೆಮಿಯು ಮಾಜಿ ಯೋಧ, ವಿಧವೆ, ದೇವದಾಸಿ ಮಕ್ಕಳಿಗೆ  ಉಚಿತ ತರಬೇತಿ ನೀಡುತ್ತಿದೆ.

First Published Feb 21, 2022, 6:21 PM IST | Last Updated Feb 21, 2022, 6:21 PM IST

ವಿಜಯಪುರ(ಫೆ.21): ಒಂದೊಳ್ಳೆ ಉದ್ದೇಶದಿಂದ ಆರಂಭವಾದ ಕೋಚಿಂಗ್ ಸೆಂಟರ್ (Coaching Centre) ಈಗ ಮುಗಿಲೆತ್ತರ ಬೆಳೆದು ನಿಂತಿದೆ. ಸಾವಿರಾರು ಸರಕಾರಿ ಅಧಿಕಾರಿಗಳನ್ನು ನಾಡಿಗೆ ಸಮರ್ಪಿಸಿದ ಕೀರ್ತಿ ಚಾಣಕ್ಯ ಅಕಾಡೆಮಿಯದ್ದಾಗಿದೆ. ಎನ್‌.ಎಂ ಬಿರಾದಾರ್ ಐಎಎಸ್ ಕನಸಿನೊಂದಿಗೆ ಆರಂಭವಾದ ಚಾಣಕ್ಯ ಕರಿಯರ್ ಅಕಾಡೆಮಿಯು (Chanakya Career Academy) ಮಾಜಿ ಯೋಧ, ವಿಧವೆ, ದೇವದಾಸಿ ಮಕ್ಕಳಿಗೆ  ಉಚಿತ ತರಬೇತಿ ನೀಡುತ್ತಿದೆ. ಸರಕಾರಿ ಉದ್ಯೋಗ ಪಡೆಯುವ ಕನಸು ಮತ್ತು ಗುರಿ ಹೊತ್ತ ಅದೆಷ್ಟೋ ಮಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು (competitive exams) ಬರೆಯಲು  ಗುರುವಿನಂತೆ ನಿಂತಿರುವುದು ಗಡಿ ಜಿಲ್ಲೆ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ.

50 Year Old Seeks MBBS Course: 50ನೇ ವಯಸ್ಸಿನಲ್ಲಿ ಮೆಡಿಕಲ್ ಓದಬೇಕೆಂದು ಕೋರ್ಟ್‌

ಬೀದರ್ , ಕಲಬುರಗಿ, ವಿಜಯಪುರ, ಯಾದಗಿರಿ  ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಅದೆಷ್ಟೋ ಮಂದಿ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯಲು ದೂರದ ಊರಿಗೆ ಬರುವುದು ಬಹಳ ಕಷ್ಟವಾಗಿತ್ತು. ಹೀಗಾಗಿ ಅವರ ಕನಸಿಗೆ ಕೊಳ್ಳಿ ಬಿದ್ದಿತ್ತು. ಇಂತಹ ಸಂದರ್ಭದಲ್ಲಿ ಬಡ ಮಕ್ಕಳ ಭವಿಷ್ಯಕ್ಕೆ ಬೆಳಕಾಗಿ ಬಂದಿದ್ದೇ ಚಾಣಕ್ಯ ಕರಿಯರ್ ಅಕಾಡೆಮಿ. ಇಲ್ಲಿ ಐಎಎಸ್,ಕೆಎಎಸ್ ಸೇರಿದಂತೆ ಉನ್ನತ ಪರೀಕ್ಷೆ ಬರೆಯಲು ಅತ್ಯುನ್ನತ ತರಬೇತಿ ನೀಡಲಾಗುತ್ತದೆ.

Video Top Stories