ಶಾಲಾ ಶುಲ್ಕ ಕಡಿತ ವಿಚಾರಕ್ಕೆ ಬಿಜೆಪಿ ಎಂಎಲ್‌ಸಿಯಿಂದಲೇ ವಿರೋಧ..!
ಶುಲ್ಕ ಕಡಿತ ಪುನರ್ ಪರೀಶೀಲಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯ| ಫೆ. 23ರೊಳಗೆ ಬೇಡಿಕೆ ಈಡೇರಬೇಕು, ಇಲ್ಲದಿದ್ದರೆ ಬೃಹತ್ ಪ್ರತಿಭಟನೆಗೆ ನಿರ್ಧಾರ| ಖಾಸಗಿ ಶಾಲೆಗಳ ಹೋರಾಟಕ್ಕೆ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಸಾಥ್|
ಬೆಂಗಳೂರು(ಫೆ.10): ಶಾಲಾ ಶುಲ್ಕ ಕಡಿತ ವಿಚಾರದಲ್ಲಿ ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ತೊಡೆತಟ್ಟಿವೆ. ಹೌದು, ಶುಲ್ಕ ಕಡಿತ ಪುನರ್ ಪರೀಶೀಲಿಸುವಂತೆ ಒಕ್ಕೂಟ ಒತ್ತಾಯ ಮಾಡಿದೆ. ಫೆ. 23ರೊಳಗೆ ಬೇಡಿಕೆ ಈಡೇರಬೇಕು, ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟ ಹೇಳಿದೆ.
ಹೆಚ್ಚಿದ ಮೀಸಲು ಹೋರಾಟದ ಬಿಸಿ.. ಸಿದ್ದು ಹಳೆ ನೆನಪು; ನ್ಯೂಸ್ ಅವರ್
ಖಾಸಗಿ ಶಾಲೆಗಳ ಹೋರಾಟಕ್ಕೆ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಕಾಲೇಜು ಶುಲ್ಕ ಕಡಿತಕ್ಕೂ ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ, ಶುಲ್ಕ ವಿಚಾರದಲ್ಲಿ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಅವರಿಂದಲೇ ವಿರೋಧ ವ್ಯಕ್ತವಾಗಿದೆ.
"