Hijab Row 'ಹಿಜಾಬ್‌ಗೆ ಅವಕಾಶ ಕೊಡಿ, ನಾನೊಬ್ಬ ಸಾಂಪ್ರದಾಯಿಕ ಬ್ರಾಹ್ಮಣನಾಗಿ ಮನವಿ ಮಾಡ್ತೇನೆ'

ಇದೀಗ ಮತ್ತೋರ್ವ ವಕೀಲ ಡಾ ವಿನೋದ್ ಕುಲಕರ್ಣಿ ಅವರು ಹಿಜಾಬ್ ಬ್ಯಾನ್ ಮಾಡಿದರೆ ಕುರಾನ್‌ ಅನ್ನೇ ಬ್ಯಾನ್ ಮಾಡಿದಂತೆ ವಾದ ಮಾಡಿದ್ದಾರೆ. ಹಾಗಾದ್ರೆ, ವಕೀಲ ವಿನೋದ್ ಅವರ ವಾದ-ಪ್ರತಿವಾದ ಹೇಗಿತ್ತು ಎನ್ನುವುದನ್ನು ನೋಡಿ

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.17): ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ.

ಹಿಜಾಬ್ ವಿವಾದ, ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

ಕರ್ನಾಟಕ ಕೋರ್ಟ್‌ನಲ್ಲಿ ಈ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಒಂದು ಅರ್ಜಿಯ ಪರ ಒಬ್ಬೊಬ್ಬ ವಕೀಲ ವಾದ ಮಂಡಿಸುತ್ತಿದ್ದಾರೆ. ದೇವದತ್ ಕಾಮತ್ ವಾದ ಮಂಡನೆ ಮುಗಿದೆ. ಇದೀಗ ಅರ್ಜಿದಾರರ ಪರವಾಗಿ ಮತ್ತೋರ್ವ ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅವರು ಹೈಕೋರ್ಟ್ ತ್ರಿದಸ್ಯ ಪೀಠದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದಾರೆ. ಆದ್ರೆ, ನ್ಯಾಯಪೀಠ ಗರಂ ಆಗಿದ್ದು, ಯಾವ ಆಧಾರದ ಮೇಲೆ ವಾದ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ರೆಹಮತ್ ಉಲ್ಲಾ ಅವರ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.

ಇದೀಗ ಮತ್ತೋರ್ವ ವಕೀಲ ಡಾ ವಿನೋದ್ ಕುಲಕರ್ಣಿ ಅವರು ಹಿಜಾಬ್ ಬ್ಯಾನ್ ಮಾಡಿದರೆ ಕುರಾನ್‌ ಅನ್ನೇ ಬ್ಯಾನ್ ಮಾಡಿದಂತೆ ವಾದ ಮಾಡಿದ್ದಾರೆ. ಹಾಗಾದ್ರೆ, ವಕೀಲ ವಿನೋದ್ ಅವರ ವಾದ-ಪ್ರತಿವಾದ ಹೇಗಿತ್ತು ಎನ್ನುವುದನ್ನು ನೋಡಿ

Related Video