Textbook Revision ವಿವಾದಕ್ಕೆ ಅಂತ್ಯ ಹಾಡಲು ಸರ್ಕಾರ ಹೊಸ ಪ್ಲಾನ್!

ಪಠ್ಯ ಪುಸ್ತಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿರುವ ರಾಜ್ಯಸರಕಾರ ಇದೀಗ ಹೊಸದೊಂದು ಸಮಿತಿಯ ರಚನೆಗೆ ಮುಂದಾಗಿದೆ.

First Published Jun 24, 2022, 7:34 PM IST | Last Updated Jun 24, 2022, 7:34 PM IST

ಬೆಂಗಳೂರು (ಜೂನ್ 24): ರಾಜ್ಯ ಸರ್ಕಾರ ನೇಮಿಸಿದ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯು ಪರಿಷ್ಕರಣೆ ಮಾಡಿರುವ ಪಠ್ಯ ಪುಸ್ತಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿರುವ ರಾಜ್ಯಸರಕಾರ ಇದೀಗ ಹೊಸದೊಂದು ಸಮಿತಿಯ ರಚನೆಗೆ ಮುಂದಾಗಿದೆ. ಈ ಬಗ್ಗೆ ಸ್ವತಃ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕ ವಾಪಸಿಲ್ಲ: ಸಚಿವ ಅಶೋಕ್‌

ಶಿಕ್ಷಣ ಇಲಾಖೆ ಹೊಸ ಸಮಿತಿಯಲ್ಲಿ ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು ಯಾರೂ ಇರುವುದಿಲ್ಲ ಬದಲಾಗಿ  ಶಿಕ್ಷಣ ಇಲಾಖೆಯ ಡೈಯಟ್ ಪ್ರಾಶಂಪಾಲರು ಹಾಗೂ ನುರಿತ ಶಿಕ್ಷಕರು, ತಜ್ಞ ಶಿಕ್ಷಕರ ನೇತೃತ್ವದಲ್ಲಿ ತಪ್ಪುಗಳನ್ನು ಸರಿ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಬಸವಣ್ಣನ ವಿಚಾರದಲ್ಲಿ ಸ್ವಾಮೀಜಿಗಳ ಅಭಿಪ್ರಾಯ ತೆಗೆದುಕೊಳ್ಳಲಾಗುವುದು ಎಂದು ಬಿಸಿ ನಾಗೇಶ್ ಹೇಳಿದ್ದಾರೆ.