PU Exam: 6 ಲಕ್ಷ ವಿದ್ಯಾರ್ಥಿಗಳು ಮುಖ್ಯವೇ ಹೊರತು, 6 ವಿದ್ಯಾರ್ಥಿಗಳಲ್ಲ: ಸಚಿವ ನಾಗೇಶ್
ಪಿಯು ಪರೀಕ್ಷೆಗೆ PU Exam) ವಿದ್ಯಾರ್ಥಿಗಳ ಗೈರು ಬಗ್ಗೆ ಪ್ರಶ್ನಿಸಿದಾಗ, ನಮಗೆ 6 ಲಕ್ಷ ವಿದ್ಯಾರ್ಥಿಗಳು ಮುಖ್ಯವೇ ಹೊರತು 6 ವಿದ್ಯಾರ್ಥಿಗಳಲ್ಲ, ವಿದ್ಯಾರ್ಥಿಗಳನ್ನು ಎಳೆದು ಕೊಂಡು ಬಂದು ಕೂರಿಸಲು ಸಾಧ್ಯವಿಲ್ಲ, ಗೈರು ಅಜರಿ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ' ಎಂದು ಚಿಕ್ಕಮಗಳೂರಿನಲ್ಲಿ ಶಿಕ್ಷಣ ಸಚಿವ ನಾಗೇಶ್ (BC Nagesh) ಹೇಳಿದ್ದಾರೆ.
ಚಿಕ್ಕಮಗಳೂರು (ಏ. 22): ಪಿಯು ಪರೀಕ್ಷೆಗೆ PU Exam) ವಿದ್ಯಾರ್ಥಿಗಳ ಗೈರು ಬಗ್ಗೆ ಪ್ರಶ್ನಿಸಿದಾಗ, ನಮಗೆ 6 ಲಕ್ಷ ವಿದ್ಯಾರ್ಥಿಗಳು ಮುಖ್ಯವೇ ಹೊರತು 6 ವಿದ್ಯಾರ್ಥಿಗಳಲ್ಲ, ವಿದ್ಯಾರ್ಥಿಗಳನ್ನು ಎಳೆದು ಕೊಂಡು ಬಂದು ಕೂರಿಸಲು ಸಾಧ್ಯವಿಲ್ಲ, ಗೈರು ಅಜರಿ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ' ಎಂದು ಚಿಕ್ಕಮಗಳೂರಿನಲ್ಲಿ ಶಿಕ್ಷಣ ಸಚಿವ ನಾಗೇಶ್ (BC Nagesh) ಹೇಳಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ (PU Exam) ಪರೀಕ್ಷೆಗಳು ಆರಂಭವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೆ (SSLC Exam) ಪಿಯು ಪರೀಕ್ಷೆಗೂ ಯಾವುದೇ ಧರ್ಮ ಸೂಚಕ ಉಡುಪು ಧರಿಸಿ ಬರುವುದನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಅದರಂತೆ ತಮ್ಮ ಕಾಲೇಜಿನಲ್ಲಿ ನಿಗದಿಪಡಿಸಿದ ಸಮವಸ್ತ್ರ (Dress Code) ಧರಿಸಿ ಪರೀಕ್ಷೆಗೆ ಹೊರಡಿ, ಸಮವಸ್ತ್ರ ಇಲ್ಲದಿದ್ದಲ್ಲಿ ಯಾವುದೇ ಧರ್ಮಸೂಚಕವಲ್ಲದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರದಂತಹ ಉಡುಪು ಧರಿಸಿ ಹಾಜರಾಗಲು ಸೂಚಿಸಿದೆ. ಇದನ್ನು ಪಾಲಿಸದಿದ್ದರೆ ಪರೀಕ್ಷೆಯಿಂದ ವಂಚಿತರಾಗಬೇಕಾದೀತು ಎಚ್ಚರ. ಈ ಬಾರಿ ಪರೀಕ್ಷೆಗೆ 5241 ಕಾಲೇಜುಗಳಿಂದ 6,84,255 ವಿದ್ಯಾರ್ಥಿಗಳು ನೋಂದಾಯಿಸಿಕೋಂಡಿದ್ದು, ಒಟ್ಟು 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.