ಒಬ್ಬನ ವಿಚಾರ, ಇಬ್ಬರು ಹುಡುಗಿಯರಿಂದ ಧಾರವಾಡ ಬೀದಿಯಲ್ಲೇ ಬಡಿದಾಟ!
ಮಹಿಳಾ ದಿನಾಚರಣೆ ದಿನವೇ ಇಬ್ಬರು ಹುಡುಗಿಯರು ನಡು ಬೀದಿಯಲ್ಲಿ ಬಡಿದಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಹುಡುಗನ ವಿಚಾರವಾಗಿ ಆರಂಭಗೊಂಡ ವಾಗ್ವಾದ, ನಡು ರಸ್ತೆಯಲ್ಲಿ ಬಡಿದಾಡುವ ಮಟ್ಟಕ್ಕೆ ತಲುಪಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಧಾರವಾಡ(ಮಾ.07): ಮಹಿಳಾ ದಿನಾಚರಣೆ ಭಾರತದೆಲ್ಲೆಡೆ ಆಚರಿಸಲಾಗಿದೆ. ಆದರೆ ಇದೇ ದಿನ ಇಬ್ಬರು ಹುಡುಗಿಯರು ನಡು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ಧಾರವಾಡದ ಜಿಲ್ಲಾ ಕೋರ್ಟ್ ಸರ್ಕಲ್ ಬಳಿ ನಡೆದಿದೆ. ಹುಡುಗನ ವಿಚಾರ ಪ್ರಸ್ತಾಪ ಮಾಡಿ ಜಗಳ ಆರಂಭಿಸಿದ್ದಾರೆ. ಇದರ ನಡುವೆ ಚೈನ್ ವಿಚಾರವೂ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಕೆಲವೇ ಕ್ಷಣಗಳಲ್ಲಿ ಇವರ ವಾಗ್ವಾದ ಬಡಿದಾಟದ ರೂಪ ಪಡೆದುಕೊಂಡಿದೆ. ಬೀದಿಯಲ್ಲಿ ಇಬ್ಬರು ಹುಡುಗಿಯರು ಹೊಡೆದಾಡಿದ್ದಾರೆ. ಸಾರ್ವಜನಿಕರು ಬುದ್ಧಿ ಹೇಳಿದರೂ ಈ ಹುಡುಗಿಯರು ಮಾತ್ರ ಫೈಟಿಂಗ್ ನಿಲ್ಲಿಸುವ ಗೋಜಿಗೆ ಹೋಗಿಲ್ಲ. ಕಾರಿನಲ್ಲೂ ಒಬ್ಬರಿಗೊಬ್ಬರು ಚಚ್ಚಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.