Asianet Suvarna News Asianet Suvarna News

ಹಾಫ್ ಹೆಲ್ಮೆಟ್ ಧರಿಸಿದರೆ ಇನ್ನು ದಂಡ, ಪ್ರಾಣ ರಕ್ಷಣೆಗೆ ಸಂಚಾರಿ ಪೊಲೀಸರು ಬದ್ಧ!

*ಹಾಫ್‌ ಹೆಲ್ಮೆಟ್‌ ಧರಿಸಿದರೆ ದಂಡ ಬೀಳುವುದ ಗ್ಯಾರಂಟಿ
*ಬೆಂಗಳೂರಿನಲ್ಲಿ  ಹೆಲ್ಮೆಟ್‌ ಬಗ್ಗೆ ಪೊಲೀಸ್ ಜನ ಜಾಗೃತಿ
*ಐಎಸ್‌ಐ ಮಾರ್ಕ್‌ ಇಲ್ಲದೆ ಹಾಫ್‌ ಹೆಲ್ಮೆಟ್‌ ಧರಿಸಿ ಸಂಚರಿಸುವಂತಿಲ್ಲ

ಬೆಂಗಳೂರು (ಜ. 23): ಬೆಂಗಳೂರಿನ (Bengaluru) ದ್ವಿಚಕ್ರ ವಾಹನ ಸವಾರರಿಗೆ (Two Wheeler) ಇನ್ನುಮುಂದೆ ಹಾಫ್‌ ಹೆಲ್ಮೆಟ್‌̈ (Helmet) ಧರಿಸಿದರೆ ದಂಡ ಬೀಳುವುದ ಗ್ಯಾರಂಟಿ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಪೋಲೀಸರು ಹೆಲ್ಮೆಟ್‌ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಸಿಟಿ ಮಾರ್ಕೆಟ್‌ ಠಾಣೆಯ ಪಿಎಸ್‌ಐ (PSI)  ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬೆನ್ನಲ್ಲೇ ಐಎಸ್‌ಐ ಮಾರ್ಕ್‌ ಇಲ್ಲದೆ ಹಾಫ್‌ ಹೆಲ್ಮೆಟ್‌ ಧರಿಸಿ ಸಂಚರಿಸುವಂತಿಲ್ಲ ಎಂದು ಸಿಟಿ ಸಂಚಾರಿ ಪೋಲಿಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಇದನ್ನೂ ಓದಿ: Araga Jnanendra: ಹೆಲ್ಮೆಟ್ ಹಾಕದೆ ಪೊಲೀಸರಿಗೆ ಸಿಕ್ಕಿಬಿದ್ದ ಅಸಾಮಿ, ಬಿಡಿಸಿಕೊಳ್ಳಲು ರಾತ್ರಿ 11 ಗಂಟೆಗೆ ಗೃಹ ಮಂತ್ರಿಗೆ ಕರೆ!

ಬೆಂಗಳೂರಿನಲ್ಲಿ ಗುಣಮಟ್ಟದ ಹೆಲ್ಮೆಟ್ ಬಗ್ಗೆ ಪೋಲೀಸರು ಜಾಗೃತಿ ಮೂಡಿಸಿದ್ದಾರೆ. ಐಎಸ್‌ಐ (ISI) ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸುವಂತಿಲ್ಲ ಜತೆಗೆ ಬೈಕ್‌ ಸವಾರರು ಫುಲ್‌ ಹೆಲ್ಮೆಟ್ ಧರಿಸಬೇಕು ಎಂದು ಪೋಲೀಸರು ತಿಳಿಸಿದ್ದಾರೆ. ಹಾಗಾಗಿ ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಇನ್ನು ಮುಂದೆ ದಂಡ ಬೀಳಲಿದೆ.