Araga Jnanendra ಹೆಲ್ಮೆಟ್ ಹಾಕದೆ ಪೊಲೀಸರಿಗೆ ಸಿಕ್ಕಿಬಿದ್ದ ಅಸಾಮಿ, ಬಿಡಿಸಿಕೊಳ್ಳಲು ರಾತ್ರಿ 11 ಗಂಟೆಗೆ ಗೃಹ ಮಂತ್ರಿಗೆ ಕರೆ!

  • 50 ಮೀಟರ್‌ ದೂರದ ಮೆಡಿಕಲ್‌ ಶಾಪ್‌ಗೆ ತೆರಳಿದಾಗ ಘಟನೆ
  • ಹೆಲ್ಮೆಟ್ ಹಾಕಿಲ್ಲದ ಕಾರಣ ಪೊಲೀಸರು ಕೈಗೆ ಸಿಕ್ಕಿಬಿದ್ದ ವ್ಯಕ್ತಿ
  • ರಾತ್ರಿ 11 ಗಂಟೆಗೆ ಗೃಹ ಮಂತ್ರಿಗೆ ಕರೆ ಮಾಡಿ ಬಿಡಿಸಲು ಮನವಿ
Man Caught for without helmet called Home Minister araga jnanendra in midnight shivamogga ckm

ಶಿವಮೊಗ್ಗ(ಜ.23): ‘ಹೆಲ್ಮೆಟ್‌ ಧರಿಸದ(Helmet) ಕಾರಣ ಪೊಲೀಸರು(Police) ದಂಡ ಹಾಕುತ್ತಿದ್ದಾರೆ. ಅವರಿಗೆ ಹೇಳಿ’ ಎಂದು ವ್ಯಕ್ತಿಯೊಬ್ಬ ಸ್ವತಃ ಗೃಹ ಸಚಿವರಿಗೇ ತಡರಾತ್ರಿ ಕರೆ ಮಾಡಿ ಮನವಿ ಮಾಡಿದ ಪ್ರಸಂಗ ನಡೆದಿದೆ!.ನಗರದಲ್ಲಿ ಶನಿವಾರ ಮಾಧ್ಯಮದ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸ್ವತ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರೇ ಈ ವಿಚಾರ ಬಹಿರಂಗಪಡಿಸಿದ್ದಾರೆ.

‘ಒಂದು ರಾತ್ರಿ ಸುಮಾರು 11 ಗಂಟೆಗೆ ತಾವು ಮಲಗಿದ್ದ ಸಮಯದಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿದ. ಮನೆಯಿಂದ ಕೇವಲ 50 ಮೀಟರ್‌ ದೂರದ ಮೆಡಿಕಲ್‌ ಶಾಪ್‌ಗೆಂದು ಹೆಲ್ಮೆಟ್‌(Traffic Rules Violation) ಇಲ್ಲದೆ ಹೋಗುತ್ತಿದ್ದೆ. ಆಗ ಪೊಲೀಸರು ತಡೆದು ದಂಡ ವಿಧಿಸಿದ್ದಾರೆ. ಅವರಿಗೆ ಹೇಳಿ ಎಂದು ಮನವಿ ಮಾಡಿದ. ಅದಕ್ಕೆ ಐವತ್ತು ಮೀಟರ್‌ ಅಲ್ಲ, ಐವತ್ತು ಅಡಿ ದೂರ ಹೋಗುವಾಗಲೂ ಬಿದ್ದು ತಲೆ ಒಡೆಯಬಹುದೆಂದು ಹೇಳಿ ಫೋನ್‌ ಇಟ್ಟೆ’ ಎಂದರು.

Shivamogga Accident: ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

ಜನರಿಗೆ ಕಾನೂನಿಗೆ ಗೌರವ ಕೊಡುವ ಮನಸ್ಥಿತಿ ಇಲ್ಲ. ಬೆಂಗಳೂರಿನಲ್ಲಿ ಮೂರು ದಿನ ನಿಯಮ ಸಡಿಲಗೊಳಿಸಿ ನೋಡಿದೆವು. ಶೇ.60 ಮಂದಿ ಸಂಪೂರ್ಣವಾಗಿ ಕಾನೂನನ್ನು ಉಲ್ಲಂಘಿಸಿದ್ದರು. ಹೀಗಾಗಿ ಕಾನೂನು ಬಿಗಿ ಅನಿವಾರ್ಯ ಎಂದರು.

ಕೊರೋನಾ ಹೆಚ್ಚಳಕ್ಕೆ ಕಾಂಗ್ರೆಸ್‌ನ ಪಾದಯಾತ್ರೆ ಒಂದು ಕಾರಣ
ರಾಜ್ಯದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯೂ ಒಂದು ಕಾರಣ. ಪಾದಯಾತ್ರೆಯ ಭದ್ರತೆಗೆ ನಿಯೋಜಿಸಿದ್ದ ಶೇ.60ರಷ್ಟುಪೊಲೀಸರಿಗೆ ಸೋಂಕು ತಗುಲಿದೆ. ಜತೆಗೆ ಪಾದಯಾತ್ರೆ ಬಳಿಕ ರಾಮನಗರ, ಬೆಂಗಳೂರು, ಮಂಡ್ಯ, ತುಮಕೂರು ಭಾಗದಲ್ಲಿ ಕೊರೋನಾ ಹೆಚ್ಚಳವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕೋವಿಡ್‌ಗೆ ಸಂಬಂಧಿಸಿ ಸರ್ಕಾರ ನೀಡುವ ಅಂಕಿ-ಅಂಶ ಸುಳ್ಳು ಎನ್ನುತ್ತಿದ್ದಾರೆ. ಅಂಕಿ-ಅಂಶಗಳನ್ನು ತಜ್ಞರು ನೀಡುತ್ತಿದ್ದು, ಇದರಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸುವುದಿಲ್ಲ. ಒಂದು ವೇಳೆ ಅಂಕಿ-ಅಂಶ ಸುಳ್ಳು ಎನ್ನುವುದಾದರೆ ಡಿ.ಕೆ.ಶಿವಕುಮಾರ್‌ ಅವರು ಅದಕ್ಕೆ ಸಾಕ್ಷ್ಯ ನೀಡಲಿ ಎಂದು ಸವಾಲು ಎಸೆದರು.

Weeked Curfew ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗ್ಳೂರು ರೌಂಡ್ಸ್, ಪ್ರಶ್ನೆ ಕೇಳಿದ ಪುಟ್ಟ ಮಕ್ಕಳು

ಮೇಕೆದಾಟು ಪಾದಯಾತ್ರೆ ನಡೆಸುವುದು ಬೇಡ ಎಂದು ಇದೇ ಕಾರಣಕ್ಕೆ ಈ ಕಾರಣಕ್ಕೇ ನಾವು ಮನವಿ ಮಾಡಿದ್ದು. ಆದರೆ ಅವರು ಅದರಲ್ಲಿ ರಾಜಕೀಯ ತಂದರು. ಪಾದಯಾತ್ರೆ ನಡೆಸಲು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ, ಸಮಯ, ಸಂದರ್ಭವನ್ನೂ ನೋಡಬೇಕಲ್ಲ ಎಂದರು. ಕಾಂಗ್ರೆಸ್‌ನ ಪಾದಯಾತ್ರೆಯನ್ನು ತಡೆಯಲು ಯಾವುದೇ ಷಡ್ಯಂತ್ರ ನಡೆಸಿಲ್ಲ. ಅವರ ವಿಫಲತೆಗೆ ಏನು ಬೇಕಾದರೂ ಮಾತನಾಡಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್‌ ವೇಳೆ ಪಾದಯಾತ್ರೆ ಮಾಡಿದ್ದೇ ಮಹಾತಪ್ಪು. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಮುಖಂಡರು ಪಾದಯಾತ್ರೆ ಕೈಗೊಂಡರು. ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು ಎಂದಿದ್ದಾರೆ.

ಎಚ್ಚರಿಕೆ ಅಗತ್ಯ: ಇದೇ ವೇಳೆ ವೀಕೆಂಡ್‌ ಕಫ್ರ್ಯೂ ತೆಗೆದು ಹಾಕಲಾಗಿದೆ ಎಂದಾಕ್ಷಣ ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆ ಆಗಿದೆ ಎಂದರ್ಥವಲ್ಲ. ದಿನನಿತ್ಯ ದುಡಿದು ತಿನ್ನುವ ಜನರಿಗಾಗಿ ವೀಕೆಂಡ್‌ ಕಫ್ರ್ಯೂ ತೆಗೆಯಲಾಗಿದೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣ ಜನರ ಹೊಣೆಗಾರಿಕೆ ಹೆಚ್ಚಿದೆ. ಸೋಂಕು ಹೆಚ್ಚಾದರೆ ಮತ್ತಷ್ಟುಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜನ ನಿರ್ಲಕ್ಷಿಸಿದರೆ ಲಾಕ್ಡೌನ್‌ ಅನಿವಾರ‍್ಯ
ಕಳೆದ ಎರಡು ವಾರದಲ್ಲಿ ಜನರು ಕೊರೋನಾ ಕುರಿತು ಎಚ್ಚೆತ್ತುಕೊಂಡಿರುವುದರಿಂದ ವಾರಾಂತ್ಯದ ಕಫ್ರ್ಯೂ ಹಿಂಪಡೆದಿದ್ದೇವೆ. ಮತ್ತೆ ನಿರ್ಲಕ್ಷ್ಯ ವಹಿಸಿದರೆ ಜನರನ್ನು ಸಾಯಲು ಬಿಡಲು ಆಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಲಾಕ್ಡೌನ್‌ ಮಾಡಬೇಕಾಗುತ್ತದೆ.

Latest Videos
Follow Us:
Download App:
  • android
  • ios