
ಸಾಲು ಸಾಲು ಹಬ್ಬ, ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ದರದಲ್ಲಿ ಕಾರು, ಲಕ್ಷ ಲಕ್ಷ ರೂ ಇಳಿಕೆ
ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತ, ಮತ್ತೊಂದೆಡೆ ಸಾಲು ಸಾಲು ಹಬ್ಬದ ಆಫರ್ ಇದೀಗ ಕಾರು ಕೈಗೆಟುವ ದರದಲ್ಲಿ ಲಭ್ಯವಾಗುತ್ತಿದೆ. ಸೆ.22ರಿಂದ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ.
ದಸರಾ, ದೀಪಾವಳಿ ಹೀಗೆ ಹಬ್ಬದ ಸಾಲುಗಳೇ ನಿಮ್ಮ ಮುಂದಿದೆ. ಹಬ್ಬದ ಖುಷಿ ಹೆಚ್ಚಳಕ್ಕೆ ನೀವಾನಾದ್ರೂ ಹೊಸ ಕಾರು, ಬೈಕ್ ಕೊಳ್ಳುವ ಆಲೋಚನೆಯಲ್ಲಿದ್ದೀರಾ. ನಾಳೇನೇ ಬುಕ್ ಮಾಡೋಣ ಅಂತಾ ಹೊರಟಿದ್ದೀರಾ..? ಸೆಪ್ಟೆಂಬರ್ 22ರ ವರೆಗೆ ಕಾದು ನೋಡಿದರೆ ಉತ್ತಮ. ಕಾರಣ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದ ಪರಿಣಾಮ ಕಾರುಗಳ ದರದಲ್ಲಿ ಭಾರೀ ಇಳಿಕೆಯಾಗಲಿದೆ. ಆಗಲೇ ಕಾರು ತಯಾರಿಕಾ ಕಮಪನಿಗಳೂ ಕೂಡ ತಮ್ಮ ಕಾರುಗಳ ಮೇಲಿನ ದರ ಕಡಿತದ ಪಟ್ಟಿ ಬಿಡುಗಡೆ ಮಾಡಿವೆ.