Mangaluru Students Stranded Ukraine: ಉಕ್ರೇನ್ ನಲ್ಲಿ ಸಿಲುಕಿರುವ ಮಂಗಳೂರು ವಿದ್ಯಾರ್ಥಿಗಳು

ರಷ್ಯಾದ ದಾಳಿಯಿಂದಾಗಿ ತತ್ತರಿಸಿರುವ ಯುದ್ಧ ಬಾಧಿತ  ಉಕ್ರೇನ್ ನಲ್ಲಿ ಮಂಗಳೂರು ಮೂಲಕ ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ನಿತ್ಯವೂ ಅವರ ಸಂಪರ್ಕದಲ್ಲಿ ಇದೆ .

Share this Video
  • FB
  • Linkdin
  • Whatsapp

ರಷ್ಯಾದ (Russia) ದಾಳಿಯಿಂದಾಗಿ ತತ್ತರಿಸಿರುವ ಯುದ್ಧ ಬಾಧಿತ ಉಕ್ರೇನ್ ನಲ್ಲಿ (Ukraine) ಮಂಗಳೂರು ಪಡೀಲ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಕ್ಲೇಟನ್ ಹಾಗೂ ದೇರೆಬೈಲ್ ಮೂಲದ ಅನೈನಾ ಅನ್ನ ಎಂಬುವವರು ಸಿಲುಕಿಕೊಂಡಿದ್ದಾರೆ. ಕ್ಲೇಟನ್ ಸದ್ಯ ಉಕ್ರೇನ್ ಕ್ಯಾಪಿಟಲ್ ಕೀವ್ ನಗರದಲ್ಲೇ ಇದ್ದು, ಬೆಳಗ್ಗೆ ಅಷ್ಟು ಆತಂಕ ಇರಲಿಲ್ಲ. ಆದರೆ, ಈಗ ಸ್ವಲ್ಪ ಭಯದಲ್ಲಿ ಇದ್ದು, ಬೆಳಗ್ಗೆ 9 ಗಂಟೆಯಿಂದ ಪ್ರತೀ ಅರ್ಧ ಗಂಟೆಗೊಮ್ಮೆ ನಮ್ಮ ಜೊತೆ ಮಾತನಾಡುತ್ತಿದ್ದಾನೆ.

ಸಹಾಯ ಇಲ್ಲ ಸಪೋರ್ಟ್ ಮಾತ್ರ... ಐಫೆಲ್‌ ಟವರ್‌ ಮೇಲೆ ಉಕ್ರೇನ್‌ ಪರ ಲೈಟ್ ಉರಿಸಿ ಫ್ರಾನ್ಸ್‌ ಬೆಂಬಲ

ಈಗ ಆತ ಇರುವ ಹತ್ತಿರದ ಒಂದು ಏರ್‌ಪೋರ್ಟ್‌ನಲ್ಲಿ ದೊಡ್ಡ ಮಿಸೈಲ್ ದಾಳಿ ಆಗಿದೆ ಎಂದು ಕ್ಲೇಟನ್‌ ತಾಯಿ ಆತಂಕಗೊಂಡಿದ್ದಾರೆ. ಕ್ಲೇಟನ್‌ 3 ತಿಂಗಳ ಹಿಂದೆ ವೈದ್ಯಕೀಯ ಶಿಕ್ಷಣಕ್ಕಾಗಿ (Medical education) ಅಲ್ಲಿಗೆ ತೆರಳಿದ್ದ, ಭಾರತೀಯ ರಾಯಭಾರಿ ಕಚೇರಿ ನಿತ್ಯವೂ ಆತನ ಸಂಪರ್ಕದಲ್ಲಿ ಇದೆ ಎಂದು ಕ್ಲೇಟನ್‌ ತಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ. 

Related Video