ಸಹಾಯ ಇಲ್ಲ ಸಪೋರ್ಟ್ ಮಾತ್ರ... ಐಫೆಲ್‌ ಟವರ್‌ ಮೇಲೆ ಉಕ್ರೇನ್‌ ಪರ ಲೈಟ್ ಉರಿಸಿ ಫ್ರಾನ್ಸ್‌ ಬೆಂಬಲ

  • ಉಕ್ರೇನ್‌  ಪರ ಐಫೆಲ್‌ ಟವರ್‌ ಬೆಳಗಿದ ಫ್ರಾನ್ಸ್‌
  • ಉಕ್ರೇನ್‌ ರಾಷ್ಟ್ರಧ್ವಜದ ಬಣ್ಣ ಪ್ರತಿನಿಧಿಸಿದ ಲೈಟ್
  • ಉಕ್ರೇನ್‌ ಪರ ನಾವಿದ್ದೇವೆ ಎಂದ ಫ್ರಾನ್ಸ್ ಅಧ್ಯಕ್ಷ
     
Eiffel Tower Lights Up In Colours Of Ukranian National Flag akb

ಫ್ರಾನ್ಸ್‌(ಫೆ.26): ಉಕ್ರೇನ್‌ ದೇಶವನ್ನು ಬೆಂಬಲಿಸಿ ಫ್ರಾನ್ಸ್ ತನ್ನ ಐತಿಹಾಸಿಕ ಪ್ರವಾಸಿ ತಾಣ ಪ್ಯಾರಿಸ್‌ನ ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರಧ್ವಜವನ್ನು ಪ್ರತಿನಿಧಿಸುವ ಹಳದಿ ಹಾಗೂ ನೀಲಿ ಬಣ್ಣದ ದೀಪ(Light)ವನ್ನು ಬೆಳಗುವ ಮೂಲಕ ಉಕ್ರೇನ್‌ ಪರ ತಾನು ಇರುವುದಾಗಿ ತೋರಿಸಿಕೊಳ್ಳುತ್ತಿದೆ. ರಷ್ಯಾ ಹಾಗೂ ಉಕ್ರೇನ್‌ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಉಕ್ರೇನ್‌ ದೇಶದ ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಯುದ್ಧವನ್ನು ನಿಲ್ಲಿಸುವಂತೆ  ವಿಶ್ವದ ಅನೇಕ ರಾಷ್ಟ್ರಗಳು ಬಲಿಷ್ಠ ರಷ್ಯಾದ ಮೇಲೆ ಒತ್ತಡ ಹಾಕುತ್ತಿವೆ. ಆದರೆ ಇದ್ಯಾವುದನ್ನು ಕ್ಯಾರೇ ಮಾಡದ ರಷ್ಯಾ ಉಕ್ರೇನ್‌ಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಿದೆ.

ಯುದ್ಧ ನಿಲ್ಲಿಸಲು ಮುಂದಾಗುವಂತೆ ಹಾಗೂ ರಷ್ಯಾ ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ಉಕ್ರೇನ್‌ ಅಧ್ಯಕ್ಷ ವ್ಲಾದಿಮಿರ್‌ ಝೆಲೆನ್‌ಸ್ಕೀ ಅವು ಜಗತ್ತಿನ ಹಲವು ರಾಷ್ಟ್ರಗಳಿಗೆ ಮನವಿ ಮಾಡಿದ್ದರು. ಆದಾಗ್ಯೂ ಯಾವ ರಾಷ್ಟ್ರಗಳೂ ಕೂಡ ಮೇಲಿನಿಂದ ಬೆಂಬಲ ಸೂಚಿಸಿದವೆ ಹೊರತು ಸೈನ್ಯದೊಂದಿಗೆ ಹೋಗಿ ಕಾದಾಡಲು ಯಾವ ರಾಷ್ಟ್ರಗಳು ಸಿದ್ಧವಿರಲಿಲ್ಲ. ಈ ಮಧ್ಯೆ ಫ್ರಾನ್ಸ್‌ ಉಕ್ರೇನ್‌ ರಾಷ್ಟ್ರದ ಪರ ಬೆಂಬಲ ಸೂಚಿಸುವ ಸಲುವಾಗಿ ಐಫೆಲ್‌ ಟವರ್‌ನ್ನು ಉಕ್ರೇನ್‌ ರಾಷ್ಟ್ರಧ್ವಜದ ಬಣ್ಣದಲ್ಲಿ ಬೆಳಗಿಸಿದೆ. 

Russia Ukraine Crisis: ರಷ್ಯಾ ತಡೆಗೆ ಉಕ್ರೇನ್ ತಂತ್ರ, ನಾಗರಿಕರ ಕೈಗೆ ಶಸ್ತ್ರಾಸ್ತ್ರ!
 
ಉಕ್ರೇನ್ ಜನರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಸಲುವಾಗಿ ಐಫೆಲ್ ಟವರ್ ಅನ್ನು ನೀಲಿ ಮತ್ತು ಹಳದಿ ಬಣ್ಣದಲ್ಲಿ ಬೆಳಗಿಸಲಾಗಿದೆ ಎಂದು ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ (Anne Hidalgo) ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ (Reuters)  ವರದಿ ಮಾಡಿದೆ.ಶುಕ್ರವಾರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್(Emmanuel Macron) ಮಾತನಾಡಿ, ಉಕ್ರೇನ್ ಮೇಲಿನ ದಾಳಿಯನ್ನು ತಡೆಯಲು ಫ್ರಾನ್ಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಎಲ್ಲವನ್ನೂ ಮಾಡಿದ್ದಾರೆ. ಅವರು ತಮ್ಮ  ಪ್ರತಿಕ್ರಿಯೆಯಲ್ಲಿ ಯಾವುದೇ ದೌರ್ಬಲ್ಯ ತೋರಿಲ್ಲ ಎಂದು ಹೇಳಿದರು.

ದೂರದರ್ಶನಕ್ಕೆ ನೀಡಿದ ಭಾಷಣದಲ್ಲಿ, ರಷ್ಯಾದ ದಾಳಿಯು ಯುರೋಪಿಯನ್ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿದೆ. ಇದು ನಮ್ಮ ಖಂಡದಲ್ಲಿ ಆಳವಾದ ಪರಿಣಾಮ ಬೀರಲಿದೆ ಮತ್ತು ನಮ್ಮ ಜೀವನದಲ್ಲಿ ಬದಲಾವಣೆ ಉಂಟಾಗಲಿದೆ ಎಂದು ಮ್ಯಾಕ್ರೋನ್ ಹೇಳಿದರು. ಈ ಯುದ್ಧದ ಕೃತ್ಯಕ್ಕೆ ದೌರ್ಬಲ್ಯವಿಲ್ಲದೆ ಪ್ರತ್ಯುತ್ತರ ನೀಡುತ್ತೇವೆ, ಶಾಂತಚಿತ್ತದಿಂದ ದೃಢಸಂಕಲ್ಪದಿಂದ ಒಗ್ಗಟ್ಟಿನಿಂದ ಪ್ರತ್ಯುತ್ತರ ನೀಡುತ್ತೇವೆ. ಈ ಯುದ್ಧವನ್ನು ತಪ್ಪಿಸಲು ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ ಆದರೆ ಅದು ಇಲ್ಲಿದೆ ಮತ್ತು ನಾವು ಸಿದ್ಧರಿದ್ದೇವೆ ಎಂದು ಎಂದು ಎಮ್ಯಾನುಯೆಲ್ ಮ್ಯಾಕ್ರೋನ್  ಹೇಳಿದರು.

ಉಕ್ರೇನ್‌ ರಷ್ಯಾ ಯುದ್ಧ: ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಮುನ್ನ ಪುಟ್ಟ ಮಗಳನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ ಅಪ್ಪ
ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಿಗೆ ಅನುಗುಣವಾಗಿ  ಆರ್ಥಿಕತೆ ಮತ್ತು ಅದರ ಶಕ್ತಿ ವಲಯವನ್ನು ಗುರಿಯಾಗಿಸಿಕೊಂಡು ನಾವು ನಿರ್ಬಂಧ ಹೇರುತ್ತೇವೆ ಎಂದು ಮ್ಯಾಕ್ರೋನ್ ಹೇಳಿದರು. ನಾವು ಯಾವುದೇ ದೌರ್ಬಲ್ಯವನ್ನು ತೋರಿಸುವುದಿಲ್ಲ. ನಮ್ಮ ಯುರೋಪಿಯನ್ ಮಿತ್ರರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಸ್ಥಿರತೆಯನ್ನು ರಕ್ಷಿಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಕಳೆದ ಎರಡು ದಿನಗಳಿಂದ ರಷ್ಯಾ ನಡೆಸಿದ ವೈಮಾನಿಕ, ಕ್ಷಿಪಣಿ ದಾಳಿಗಳಲ್ಲಿ ರಷ್ಯಾದ 10ಕ್ಕೂ ಹೆಚ್ಚು ಪ್ರಮುಖ ನಗರಗಳು ಭಾರೀ ಹಾನಿಗೆ ತುತ್ತಾಗಿವೆ. ಈ ನಗರಗಳನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ, ಅವುಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದೆ. ರಷ್ಯಾ ಮತ್ತು ಉಕ್ರೇನ್ (Russian Ukraine Crisis) ಯುದ್ಧದಿಂದ (War) ಇಡೀ ಜಗತ್ತೇ ಆತಂಕಕ್ಕೆ ಒಳಗಾಗಿದೆ. ರಷ್ಯಾ ಸೇನೆಯನ್ನು ತಡೆಯಲು ಉಕ್ರೇನ್ ಹೊಸ ಕ್ರಮ ತೆಗೆದುಕೊಂಡಿದೆ. ತನ್ನ ದೇಶದ ನಾಗರಿಕರನ್ನೇ ಯುದ್ಧಕ್ಕೆ ಅಣಿ ಮಾಡಿದೆ.ನಾಗರಿಕರಿಗೆ ರಸ್ತೆಯಲ್ಲೇ ಶಸ್ತ್ರಾಸ್ತ್ರ (Weapons ) ಹಂಚಿಕೆ ಮಾಡಿದೆ. ರೆಡಿಯೋ ಯೂ ಟ್ಯೂಬ್ ಮೂಲಕ ತರಬೇತಿ ನೀಡಲಾಗುತ್ತಿದೆ. ಪೆಟ್ರೋಲ್ (Petrol Bomb) ಬಾಂಬ್ ಮಾದರಿಯ ತಯಾರಿಕೆ ಬಹಿರಂಗವಾಗಿಯೇ ಮಾಡಲಾಗುತ್ತಿದೆ.

Latest Videos
Follow Us:
Download App:
  • android
  • ios