
ಕೊರೋನಾ ಸೋಂಕಿತ ವೃದ್ದೆ ಸಾವು: ಶವ ಸಂಸ್ಕಾರಕ್ಕೆ ಸ್ಥಳೀಯರಿಂದ ವಿರೋಧ..!
ಬಂಟ್ವಾಳದಲ್ಲಿ ನಿನ್ನೆ(ಏ.23) ಮೃತಪಟ್ಟಿದ್ದ ವೃದ್ದೆಯ ಶವ ಸಂಸ್ಕಾರದ ವಿಚಾರವಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಪಚ್ಚನಾಡಿ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಆದರೆ ಜಿಲ್ಲಾಡಳಿತದ ತೀರ್ಮಾನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳೂರು(ಏ.24): ರಾಜ್ಯದ ಕೊರೋನಾ ಹಾಟ್‌ಸ್ಪಾಟ್‌ಗಳ ಪೈಕಿ ಮಂಗಳೂರು ಕೂಡಾ ಒಂದಾಗಿದೆ. ಸದ್ಯ ಮಂಗಳೂರಿನಲ್ಲಿ ಎರಡು ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ.
ಇದರ ನಡುವೆ ಬಂಟ್ವಾಳದಲ್ಲಿ ನಿನ್ನೆ(ಏ.23) ಮೃತಪಟ್ಟಿದ್ದ ವೃದ್ದೆಯ ಶವ ಸಂಸ್ಕಾರದ ವಿಚಾರವಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಪಚ್ಚನಾಡಿ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಆದರೆ ಜಿಲ್ಲಾಡಳಿತದ ತೀರ್ಮಾನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಸಡಿಲ: ರಾಜ್ಯದಲ್ಲಿ ಸಹಜ ಸ್ಥಿತಿಯತ್ತ ಜನ-ಜೀವನ
ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಶಾಸಕ ಭರತ್ ಶೆಟ್ಟಿ ಕೂಡಾ ವೃದ್ಧೆಯ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಥಳೀಯರು ಒಪ್ಪಿದರೆ ಮಾತ್ರ ಶವ ಸುಡಲು ಅವಕಾಶ ನೀಡಬೇಕು ಎಂದು ಪೊಲೀಸರು ಹಾಗೂ ಕಮಿಷನರ್‌ಗೆ ಎಚ್ಚರಿಕೆ ನೀಡಿದರು. ಸದ್ಯ ವೃದ್ದೆಯ ಶವ ಆಸ್ಪತ್ರೆಯಲ್ಲಿಯೇ ಇದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
