ಲಾಕ್‌ಡೌನ್ ಸಡಿಲ: ಸಹಜ ಸ್ಥಿತಿಯತ್ತ ರಾಜ್ಯದ ಜನ-ಜೀವನ
ಕೃಷಿ, ಕೈಗಾರಿಕೆ-ಕಚೇರಿಗಳೆಲ್ಲಾ ಕಾರ್ಯನಿರ್ವಹಿಸಲಾರಂಭಿಸಿವೆ. ಆದರೆ ಸ್ವಚ್ಛತೆ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವುದು ಕಡ್ಡಾಯ ಎನ್ನುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೇಂದ್ರದ ಸಲಹೆ ಸೂಚನೆಯನ್ವಯ ರಾಜ್ಯ ಸರ್ಕಾರ ಈ ರಿಲ್ಯಾಕ್ಸ್ ನೀಡಿದೆ.
ಬೆಂಗಳೂರು(ಏ.24): ಲಾಕ್‌ಡೌನ್ ಮಾರ್ಗಸೂಚಿಗಳನ್ನು ಕೇಂದ್ರ ಸಡಿಲಗೊಳಿಸಿದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಸಹಜಸ್ಥಿತಿಯತ್ತ ಜನಜೀವನ ಮರಳಿದ ಅನುಭವವಾಗುತ್ತಿದೆ. ಮೇ 03ರವರೆಗೂ ಲಾಕ್‌ಡೌನ್ ಇದ್ದರೂ ಆರ್ಥಿಕ ಚಕ್ರಕ್ಕೆ ಚಾಲನೆ ನೀಡುವ ಸಲುವಾಗಿ ಕೊಂಚ ಸಡಿಲಗೊಳಿಸಲಾಗಿದೆ.
ಕೃಷಿ, ಕೈಗಾರಿಕೆ-ಕಚೇರಿಗಳೆಲ್ಲಾ ಕಾರ್ಯನಿರ್ವಹಿಸಲಾರಂಭಿಸಿವೆ. ಆದರೆ ಸ್ವಚ್ಛತೆ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವುದು ಕಡ್ಡಾಯ ಎನ್ನುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೇಂದ್ರದ ಸಲಹೆ ಸೂಚನೆಯನ್ವಯ ರಾಜ್ಯ ಸರ್ಕಾರ ಈ ರಿಲ್ಯಾಕ್ಸ್ ನೀಡಿದೆ.
ಕೊರೋನಾ ಹಾಟ್‌ಸ್ಪಾಟ್ ಇರುವ ಕಡೆಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೊರೋನಾ ರಹಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದೆ.
"
ಷರತ್ತುಬದ್ಧ ರೀತಿಯಲ್ಲಿ ಮಾರುಕಟ್ಟೆ, ಅಂಗಡಿ-ಮುಂಗಟ್ಟು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹೋಟೆಲ್ ತೆರದಿದ್ದರೆ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.