ಫಾರ್ಮ್ ಹೌಸ್‌ನಲ್ಲಿ ಮಧ್ಯರಾತ್ರಿ ಪೂಜೆ ಮಾಡಿಸಿದ ನಟ ಪವನ್ ಕಲ್ಯಾಣ್: ಕಾರಣ ಏನ್ ಗೊತ್ತಾ ?
ನಟ ಪವನ್ ಕಲ್ಯಾಣ್ ಮಧ್ಯರಾತ್ರಿ ಮನೆಯಲ್ಲಿ ಪೂಜೆ ಮಾಡಿಸಿದ್ದಾರೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಪೂಜೆ ಮಾಡಿಸಿದ್ದಾರಂತೆ.
ನಟ ಪವನ್ ಕಲ್ಯಾಣ್(Pawan Kalyan) ಮನೆಯಲ್ಲಿ ಮಧ್ಯರಾತ್ರಿ ಯಾವುದೋ ಪೂಜೆ ಮಾಡಲಾಗಿದೆಯಂತೆ. ಟಾಲಿವುಡ್ ನಟನ ಆರೋಗ್ಯದಲ್ಲಿ ಏರುಪೇರು ಆಗಿದೆಯಂತೆ, ಹಾಗಾಗಿ ಮಧ್ಯರಾತ್ರಿ 12 ಗಂಟೆ ಪೂಜೆ ಮಾಡಿಸಿದ್ದಾರಂತೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಪಿ ರಾಜಕೀಯದಲ್ಲಿ(Politics) ನಿರಂತರವಾಗಿ ತೊಡಗಿಸಿಕೊಂಡಿರುವ ಕಾರಣ ಅವರ ಆರೋಗ್ಯ ಸರಿಯಿಲ್ಲ. ಅವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಎಷ್ಟೇ ವೈದ್ಯರನ್ನು ಕಂಡರೂ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಖ್ಯಾತ ಜ್ಯೋತಿಷಿಯೊಬ್ಬರು ಮಧ್ಯರಾತ್ರಿ 12 ಗಂಟೆಗೆ ದೇವಿಯನ್ನು ಪೂಜಿಸಲು ತಿಳಿಸಿದ್ದಾರೆ. ಜಾತಕದಲ್ಲಿ ದೋಷ ಇರುವ ಕಾರಣ ಹೀಗೆ ಆಗುತ್ತದೆ ಎಂದು ಜ್ಯೋತಿಷಿ ಹೇಳುತ್ತಿದ್ದಂತೆ ಪವನ್ ಕಲ್ಯಾಣ್ ಆರೋಗ್ಯ ಹದಗೆಡದಂತೆ ತಮ್ಮ ತೋಟದ ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಸದ್ಯ ವೈರಲ್ ಆಗಿದೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಹೊಸಬರನ್ನು ಬೆಳೆಸಿದ ಪ್ರೇಕ್ಷಕ..! ಟಾಪ್ 5 ಸಿನಿಮಾಗಳು ಯಾವುವು ಗೊತ್ತಾ..?