ರೀಲ್ ಹೀರೋ ಅಕ್ಷಯ್ ಕುಮಾರ್ ರಿಯಲ್ ಕೆಲಸಕ್ಕೆ ಮೆಚ್ಚುಗೆ: ವೀಡಿಯೋ ವೈರಲ್

ದೇಶದ ಯಾವುದೇ ಮೂಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಲಿ ಅಕ್ಷಯ್ ನೆರವಾಗ್ತಾರೆ. ಹೌದು, ಬಿಹಾರದಲ್ಲಿ ಎದುರಾದ ಪ್ರವಾಹಕ್ಕೆ ಸಿಲುಕಿಕೊಂಡಿದ್ದ ಜನರಿಗೆ 1 ಕೋಟಿ ರೂ ಸಹಾಯವನ್ನು ಮಾಡಿದ್ದರು. 

Share this Video
  • FB
  • Linkdin
  • Whatsapp

ಬಾಲಿವುಡ್ ನಟ ಅಕ್ಷಯ್ ಕುಮಾರ್ ರೀಲ್ ಮೇಲೆ ಮಾತ್ರವಲ್ಲ. ನಿಜಜೀವನದಲ್ಲೂ ಹೀರೋನೇ. ಸಾರ್ವಜನಿಕರು ಕಷ್ಟದಲ್ಲಿದ್ದಾಗಲೆಲ್ಲ ಅಕ್ಷಯ್ ಕುಮಾರ್ ಸಹಾಯಹಸ್ತ ಚಾಚುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಲಿ ಅಕ್ಷಯ್ ನೆರವಾಗ್ತಾರೆ. ಹೌದು, ಬಿಹಾರದಲ್ಲಿ ಎದುರಾದ ಪ್ರವಾಹಕ್ಕೆ ಸಿಲುಕಿಕೊಂಡಿದ್ದ ಜನರಿಗೆ 1 ಕೋಟಿ ರೂ ಸಹಾಯವನ್ನು ಮಾಡಿದ್ದರು. ಅಷ್ಟೆ ಅಲ್ಲ ರಿಯಲ್ ಹೀರೋ ಅಂತ ಕರೆಯೋಕೆ ಕಾರಣ ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸರಿಯಾದ ಸಮಯಕ್ಕೆ ಅಕ್ಷಯ್ ಅಲ್ಲಿ ಬರದೆ ಹೋಗಿದ್ದರೆ ಆತನ ಜೀವವೇ ಹಾರಿ ಹೋಗುತ್ತಿತ್ತು. ಕಪಿಲ್ ಶರ್ಮಾ ಶೋನಲ್ಲಿ ಸ್ಟಂಟ್ ಒಂದನ್ನು ಮಾಡಲಿಕ್ಕೆ ಬಂದ ಫೈಟರ್ ಇದ್ದಕ್ಕಿದ್ದಂತೆ ಪ್ರಜ್ನೆ ತಪ್ಪುತ್ತಾನೆ. ತಕ್ಷಣ ಅಕ್ಷಯ್ ಕುಮಾರ್ ಮೇಲೆ ಹತ್ತಿ ಹುಡುಗನನ್ನು ವೈಯರ್ನಿಂದ ಬಿಚ್ಚಿ ಕಾಪಾಡುತ್ತಾರೆ. ಅಕ್ಷಯ್ ಕೇವಲ ಸ್ಕ್ರೀನ್ ಮೇಲಷ್ಟೆ ಅಲ್ಲದೆ ತೆರೆಯ ಹಿಂದೆಯೂ ರಿಯಲ್ ಹೀರೋ ಅನ್ನೋದನ್ನು ಈ ಮೂಲಕ ಪ್ರವೂ ಮಾಡುತ್ತಾರೆ. ಈ ಘಟನೆ ನಡೆದು ಸುಮಾರು 4 ವರ್ಷಗಳಾಗಿವೆ. ಆದರೂ ಈವೀಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಅಕ್ಷಯ್ ಮಾನವೀಯತೆ ಮತ್ತು ಸಮಯಪ್ರಜ್ನೆಗೆ ಹ್ಯಾಟ್ಸಾಫ್ ಎನ್ನುತ್ತಿದ್ದಾರೆ ನೆಟ್ಟಿಗರು.

Related Video