Asianet Suvarna News Asianet Suvarna News

Today Horoscope: ನಿಮ್ಮ ಬುದ್ಧಿ ಬಲಕ್ಕಾಗಿ ಇಂದು ಶನಿದೇವನ ಆರಾಧನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಶನಿವಾರ, ಅಷ್ಟಮಿ ತಿಥಿ, ಕೃತ್ತಿಕಾ ನಕ್ಷತ್ರ.

ಶನಿವಾರ ಅಷ್ಟಮಿ, ಕೃತ್ತಿಕಾ ಇರುವುದರಿಂದ ಶುಭ ಕಾರ್ಯಗಳಿಗೆ ಈ ದಿನ ಒಳ್ಳೆಯದಲ್ಲ. ಶನಿವಾರ ಆಗಿರುವುದರಿಂದ ಶನಿ ದೇವನ ಆರಾಧನೆ ಮಾಡಿ. ಸಿಂಹ ರಾಶಿಯವರಿಗೆ ದಾಂಪತ್ಯದಲ್ಲಿ ಮನಸ್ತಾಪ ಬರಲಿದೆ. ದೂರ ಪ್ರಯಾಣಕ್ಕೆ ತೊಂದರೆ. ವ್ಯಾಪಾರಿಗಳಿಗೆ ತೊಂದರೆ. ವೃತ್ತಿಯಲ್ಲಿ ನಿರಾಳತೆ. ಸ್ತ್ರೀಯರಿಗೆ ಬಲ. ಸೌಂದರ್ಯ ಲಹರಿ ಪಠಿಸಿ. ಮಿಥುನ ರಾಶಿಯವರು ಆಪ್ತರಿಗಾಗಿ ಹಣ ವ್ಯಯ. ಕೆಲಸದಲ್ಲಿ ಲಾಭ. ತಂದೆ-ಮಕ್ಕಳಲ್ಲಿ ಮನಸ್ತಾಪ. ವ್ಯಾಪಾರಿಗಳಿಗೆ ಲಾಭ. ಈಶ್ವರ ಸನ್ನಿಧಾನದಲ್ಲಿ ಪೂಜೆ ಮಾಡಿಸಿ.

ಇದನ್ನೂ ವೀಕ್ಷಿಸಿ: Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

Video Top Stories